ಕನ್ನಡ ಮಾತಾಡಲು – ಕಲಿಯಲು ಹಿಂದೆ ಮುಂದೆ ನೋಡುತ್ತಿದ್ದ ಜನ, ಇವಾಗ ಕನ್ನಡ ಕಲಿಯೋಕೆ ನಾ ಮುಂದೆ ತಾ ಮುಂದೆ ಅಂತ ಮುಗಿ ಬಿಳ್ತಾಯಿದ್ದರೆ; ಯಾಕೆ ಗೊತ್ತ??

0
1334

ಕನ್ನಡ ಭಾಷೆ ಕಲಿಯಲು, ಮಾತನಾಡಲು ಮತ್ತು ಕನ್ನಡವನ್ನು ಸಂಪೂರ್ಣವಾಗಿ ತಿಳಿಯಲು ಜನ ನಾ ಮುಂದೆ ತಾ ಮುಂದೆ ಎಂದು ಕನ್ನಡ ಕಲಿಸುವ ಇನ್ಸ್ಟಿಟ್ಯೂಟ್ ಅಥವಾ ಸಂಸ್ಥೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಸುಮಾರು ವರ್ಷಗಳಿಂದ ರಾಜ್ಯದಲ್ಲಿದ್ದುಕೊಂಡು ಕನ್ನಡ ಕಲಿಯದ ಅನ್ಯ ಭಾಷಿಗರಿಗೆ ಬಿಸಿ ಮುಟ್ಟಿಸಿದೆ ಸರ್ಕಾರದ ಈ ಹೊಸ ನಿಯಮ.

ಕರ್ನಾಟಕ ಸರ್ಕಾರವು ಅಕ್ಟೋಬರ್ 2017 ರಲ್ಲಿ, ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಒಂದು ಕಡ್ಡಾಯ ವಿಷಯವಾಗಿ ನಿಯಮ ಜಾರಿಗೊಳಿಸಿದೆ. ಕನ್ನಡ ಭಾಷಾ ಕಲಿಕೆ ಆಕ್ಟ್, 2015 ರ ನಿಯಮಗಳ ಪ್ರಕಾರ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಕೌನ್ಸಿಲ್ ಗೆ ಸೇರಿದ ಮತ್ತು ರಾಜ್ಯದ ಇತರೆ ಎಲ್ಲಾ ಶಾಲೆಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು.

ಕನ್ನಡ ಭಾಷಾ ಕಲಿಕೆ ಆಕ್ಟ್, 2015 ರ ನಿಯಮಗಳ ಪ್ರಕಾರ, ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ವಿದ್ಯಾರ್ಥಿಗಳು ಕನ್ನಡವನ್ನು ಕಲಿಯಬೇಕಾಗುತ್ತದೆ. ಈ ನಿಯಮದಿಂದ ಹಾಲವಾರು ವರ್ಷಗಳಿಂದ ಕರ್ನಾಟಕದಲ್ಲಿದ್ದು ಸಹ ಕನ್ನಡ ಬಾರದ ಮಕ್ಕಳ ಪೋಷಕರು ಕನ್ನಡ ಕಲಿಯುವಂತಾಗಿದೆ.

ಹೌದು, ಕೇವಲ ಮಕ್ಕಳು ಮಾತ್ರವಲ್ಲ ಅವರ ತಂದೆ ತಾಯಿಗಳು ಸಹ ಕನ್ನಡ ತಿಳಿಯಲು ಉತ್ಸುಕರಾಗಿದ್ದಾರೆ. ತಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡಲು ಮತ್ತು ಅವರ ಹೋಂ ವರ್ಕ್ ಮತ್ತು ನೋಟ್ಸ್-ಗಳನ್ನು ಪೂರ್ತಿಮಾಡಲು ಸಹಾಯ ಮಾಡಲು ಪೋಷಕರು ಕನ್ನಡ ಕಲಿಯಲು ಇನ್ಸ್ಟಿಟ್ಯೂಟ್ ಗಳ ಮುಂದೆ ಮುಗಿಬಿದ್ದಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ಈ ಹೊಸ ನಿಯಮ, ಕನ್ನಡ ಭಾಷಾ ಅಭಿಮಾನಿಗಳ ಮೊಗದಲ್ಲಿ ಸಂತಸ ತಂದಿರುವುದಂತೂ ನಿಜ…!!