ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿದ ತವರು ಜಿಲ್ಲೆ ಹಾಸನಕ್ಕೆ ‘ನೋ ಫ್ರಿಲ್ಸ್‌’ ವಿಮಾನ ನಿಲ್ದಾಣ, ನೀರಾವರಿ ಕಾಮಗಾರಿ ಕೈಗೊಂಡ ದೋಸ್ತಿ ಸರ್ಕಾರ..

0
1042

ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಮಂಡ್ಯಕ್ಕೆ ಹೆಚ್ಚಿನ ಅನುದಾನಗಳು ನೀಡಲಾಗಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಕೊಟ್ಟ ಹಾಸನಕ್ಕೆ ಜಿಲ್ಲೆಯಲ್ಲಿ ಮೂಲಭೂತ ವಿಮಾನಯಾನಕ್ಕೆ ಅನುವಾಗುವಂತೆ ‘ನೋ ಫ್ರಿಲ್ಸ್‌’ ಮಾದರಿ ಏರ್ಪೋರ್ಟ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಎರಡು ಕೋಟೆಯಲ್ಲಿ ಒಂದು ಕೋಟೆಯಲ್ಲಿ ಸೋಲು ಅನುಭವಿಸಿದ ಜೆಡಿಎಸ್ ಈಗ ಉಳಿದ ಒಂದು ಜಿಲ್ಲೆ ಹಾಸನವನ್ನು ಉಳಿಸಿಕೊಳ್ಳಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮೈತ್ರಿ ಸರ್ಕಾರದ ಹಣದ ಹೊಳೆ;

ಹೌದು ಏರ್ಪೋರ್ಟ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಈ ಸಂಬಂಧ ವಿಸ್ತೃತ ವರದಿ ಸಿದ್ಧಪಡಿಸಲು ಖಾಸಗಿ ಕಂಪನಿಗೆ ಟೆಂಡರ್‌ ವಹಿಸಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಸನದಲ್ಲಿ ನೋ ಫ್ರಿಲ್ಸ್‌ ಅರ್ಥಾತ್‌ ಸಾಮಾನ್ಯ ವಿಮಾನಯಾನ ಅಗತ್ಯತೆಯನ್ನು ಪೂರೈಸುವ, ದುಬಾರಿ ಖರ್ಚುವೆಚ್ಚ ಹೊಂದಿಲ್ಲದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅಷ್ಟೇಅಲ್ಲದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ 21 ಹಳ್ಳಿಗಳಿಗೆ ಕುಡಿಯುವ ನೀರೊದಗಿಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 17.94 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಎಲ್ಲ ಅಭಿವೃದ್ದಿ ಯೋಜನೆಯನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರದ ಜತೆ ಜಂಟಿ ಮಾಲಿಕತ್ವದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಿದ್ದು, ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ವಿಸ್ತೃತ ವರದಿ ಸಿದ್ಧಪಡಿಸಲು ರೈಟ್ಸ್‌ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಮಾನನಿಲ್ದಾಣ ನಿರ್ಮಾಣ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ಬಗ್ಗೆ ಸದ್ಯದಲ್ಲೇ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. ಆ ಭಾಗದ ಸಾರ್ವಜನಿಕರಿಗೆ ವಿಮಾನ ಸೇವೆ ಪಡೆಯಲು ಅನುವಾಗುವಂತೆ ಸರ್ಕಾರ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಇದೆಲ್ಲವೂ ಮೇಲ್ನೋಟಕ್ಕೆ ಕಾಣುವಂತೆ.

ರಾಜ್ಯದಲ್ಲಿ ಹಲವು ಜಿಲ್ಲೆಯಲ್ಲಿ ಬರಗಾಲ ಎಂದು ಕಾಣುತ್ತಿದ್ದು ಕುಡಿಯಲು ನೀರಿಲ್ಲದೆ ಪರದಾಡುತ್ತಿವೆ ಸರಿಯಾದ ರಸ್ತೆಗಳು ಮೂಲಭೂತ ಸೌಕರ್ಯಗಳು ಇಲ್ಲದೆ ಅದೆಷ್ಟೋ ಜೆಲ್ಲೆಗಳು ಸಾಯಿವ ಹಂತಕ್ಕೆ ಬಂದರು ಇದ್ಯಾಯುದನ್ನು ಲೆಕ್ಕಿಸದೆ ಮೊದಲು ಹಾಸವನ್ನು ಕಾಪಾಡಿಕೊಳ್ಳುತ್ತಿರುವ ಸರ್ಕಾರ ವಿರೋಧ ಪಕ್ಷದ ಕಣ್ಣಿಗೆ ಗುರಿಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ದಿ ಅಂತು ಯಾರ ನಾಯಕರ ಬಾಯಲ್ಲಿ ಬರುತ್ತಿಲ್ಲ, ಮೈತ್ರಿಯಲ್ಲಿ ಬರಿ ಮಂಡ್ಯ, ಹಾಸನ ಡಿಕೆ ಶಿವಕುಮಾರ ಕೋಟೆಗೆ ಮಾತ್ರ ಅನುದಾನಗಳು ಬೇಗನೆ ತಲುಪುತ್ತಿವೆ. ಕಳೆದ ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ತವರು ಜಿಲ್ಲೆ ಹಾಸನ ಮತ್ತು ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರ ಇಲಾಖೆ ಮತ್ತು ಜಿಲ್ಲೆಗೂ ಭರಪೂರ ಅನುದಾನವನ್ನು ಸಿಎಂ ಬಜೆಟ್ ನಲ್ಲಿ ನೀಡಿದ್ದಾರೆ.

ಹಾಸನಕ್ಕೆ ಸಿಕ್ಕಿದ್ದೇನು..?

* ಬೆಳಗಾವಿ ವಿಟಿಯು ಮರುವಿಂಗಡಣೆ ಮಾಡಿ ಹಾಸನದಲ್ಲಿ ಹೊಸ ತಾಂತ್ರಿಕ ವಿದ್ಯಾಲಯ.
* ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ, ಹಾಸನ ಜಿಲ್ಲಾ ಕ್ರೀಡಾಂಗಣ ಸೌಲಭ್ಯ ಮೇಲ್ದರ್ಜೆಗೆ ಏರಿಕೆ.
* ಕೆಐಎಡಿಬಿಯಿಂದ ಹಾಸನ ಜಿಲ್ಲೆಯ ಅರಸೀಕೆರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ.
* ಅರಸೀಕೆರೆಯಲ್ಲಿ 200 ಬಂಧಿ ಸಾಮರ್ಥ್ಯದ ಉಪ ಕಾರಾಗೃಹ ನಿರ್ಮಾಣ.
* ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕುಗಳ ಹಳ್ಳಿಗಳಿಗೆ ಕಾಚೇನಹಳ್ಳಿ 3ನೇ ಹಂತದ ಏತ ನೀರಾವರಿ ಯೋಜನೆಗೆ 100 ಕೋಟಿ ರೂ.
* ಒಂಟಿಗುಡ್ಡ ಏತ ನೀರಾವರಿ ಯೋಜನೆಯ ನಾಲೆ ನಿರ್ಮಾಣಕ್ಕೆ 54 ಕೋಟಿ ರೂ.
* ಹೇಮಾವತಿ ನದಿಯಿಂದ ಹೊಳೆನರಸೀಪುರ ತಾ. ಚಾಕೇನಹಳ್ಳಿ ಕಟ್ಟೆಗೆ ಕೆರೆ ತುಂಬಿಸುವ ಯೋಜನೆ.
* ಹೇಮಾವತಿ ನದಿಯಿಂದ ಕುಡಿಯುವ ನೀರಿನ ಯೋಜನೆಗೆ 120 ಕೋಟಿ ರೂ.
* ಅರಕಲಗೂಡು ತಾಲೂಕಿನ 150 ಕೆರೆ ಹಾಗೂ 50 ಕಟ್ಟೆ ತುಂಬಿಸುವ ಯೋಜನೆ.
* ಯಗಚಿ ನದಿಯ ರಣಘಟ್ಟ ಪಿಕಪ್‍ನಿಂದ ನೀರು ಪಡೆದು ಬೇಲೂರು ಹೋಬಳಿಯ ದ್ವಾರಸಮುದ್ರ ಕೆರೆ, ಕರಿಕಟ್ಟೆಹಳ್ಳಿ ಕೆರೆ ಮತ್ತು ಇತರೆ ಕೆರೆಗಳನ್ನು ತುಂಬಿಸುವ ಯೋಜನೆಗೆ 100 ಕೋಟಿ ರೂ.
* ಎತ್ತಿನ ಹೊಳೆ ಕುಡಿಯುವ ನೀರಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅರಸೀಕೆರೆ ತಾಲೂಕಿನ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ 15 ಕೋಟಿ ರೂ.
* ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಬೇಲೂರು, ಅರಸೀಕೆರೆ ತಾಲೂಕುಗಳ ರಸ್ತೆಗಳ ಅಭಿವೃದ್ಧಿಗೆ 60 ಕೋಟಿ ರೂ.
* ಎತ್ತಿನಹೊಳೆ ಯೋಜನೆಯಡಿ ಸಕಲೇಶಪುರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ 12 ಕೋಟಿ ರೂ.
* ಹಾಸನ ವಿಮಾನ ನಿಲ್ದಾಣದ ಅಭಿವೃದ್ಧಿ.

Also read: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಸೋಲಿಗೆ ಝೀರೋ ಟ್ರಾಫಿಕ್​ ಪರಮೇಶ್ವರ್​ ಅವರೇ ಕಾರಣವಂತೆ..