ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ನಿಮ್ಮ ಬಳಿ ಪರಿಹಾರವಿದೆಯೇ? ಹಾಗಾದ್ರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ…

0
593

ದಿನೇ ದಿನೇ ಮಾಯಾನಗರಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಅಲ್ದೇ, ಐಟಿಬಿಟಿ ಕ್ಷೇತ್ರದಲ್ಲಿ ಇಡೀ ವಿಶ್ವವನ್ನೇ ತನ್ನತ್ತ ಸೆಳೆದಿರೋ ಈ ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಟ್ರಾಫಿಕ್‍ನಿಂದ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ಎದ್ದಾಕ್ಷಣ ಯಾವಾಗ ಅಫೀಸ್ ಸೇರ್ತಿವಿ, ಅಥವಾ ಅಫೀಸ್ ಮುಗಿದ ಬಳಿಕ ಮನೆಗೆ ಯಾವಾಗ ಹೋಗ್ತೀವಿ ಅನ್ನೋದೆ ಇಲ್ಲಿನ ಜನರ ದೊಡ್ಡ ತಲೆನೋವಾಗಿದೆ. ಸಾಕಪ್ಪ ಈ ಟ್ರಾಫಿಕ್ ಸಹವಾಸ ಅನ್ನೊರು ಒಂದೆಡೆಯಾದ್ರೆ, ಈ ಟ್ರಾಫೀಕ್‍ಗೆ ಯಾವಾಗ ಕಡಿವಾಣ ಬೀಳುತ್ತೆ ಅನ್ನೋರು ಮತ್ತೊಂದೆಡೆ. ಹೀಗಾಗಿ ಇದೀಗ ರಾಜ್ಯ ಸರ್ಕಾರ ಈ ಟ್ರಾಫಿಕ್ ಸಮಸ್ಯೆಯನ್ನ ಬಗೆಹರಿಸಲು ಹೊಸ ಯೋಜನೆಯೊಂದನ್ನ ರೂಪಿಸಿದೆ.

ಹೌದು, ನಗರದ ವಿಪರೀತ ವಾಹನ ದಟ್ಟಣೆಯನ್ನ ಕಡಿಮೆ ಮಾಡೋಕೆ ಹಾಗೂ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಕೆ ರಾಜ್ಯ ಸರ್ಕಾರ 18 ತಿಂಗಳ ಸಂಶೋಧನೆಯನ್ನ ಕೈಗೊಂಡಿದೆ. 2015 ರ ಸ್ಟಾರ್ಟ ಅಫ್ ನೀತಿಯಡಿ ಈ ಯೋಜನೆಯನ್ನ ಕೈಗೆತ್ತಿಕೊಂಡಿದೆ. ನುರಿತ ಸಂಶೋಧಕರು, ವಿಶ್ವವಿದ್ಯಾಲಯ, ಸರ್ಕಾರಿ ಲ್ಯಾಬ್‍ಗಳು, ಎನ್‍ಜಿಓ ಸೇರಿದಂತೆ ಯಾರು ಬೇಕಾದರೂ ಈ ಗ್ರ್ಯಾಂಡ್ ಚಾಲೆಂಜ್‍ನಲ್ಲಿ ಭಾಗವಹಿಸಬಹುದಾಗಿದೆ.

ಇದಕ್ಕಾಗಿ ಗ್ರ್ಯಾಂಡ್ ಚಾಲೆಂಜ್ 5 ಹಾಗೂ 6 ಅನ್ನೋ ಅಭಿಯಾನವನ್ನ ಶುರುಮಾಡಿದೆ. ಗ್ರ್ಯಾಂಡ್ ಚಾಲೆಂಜ್ 5ನ ಕೆಲಸ ನಗರದ ಟ್ರಾಫಿಕ್ ನಿಯಂತ್ರಣವನ್ನ ಮಾಡುವದಾಗಿದೆ. ಪಾರ್ಕಿಂಗ್ ಸಮಸ್ಯೆ ಬಗ್ಗೆ ಇದು ಹೆಚ್ಚು ಗಮನ ವಹಿಸುತ್ತೆ. ಅಲ್ದೇ ಜನರಿಂದಲೇ ಚಿಕ್ಕ-ಚಿಕ್ಕ ಪರಿಹಾರಗಳ ಮೂಲಕ ದೊಡ್ಡ ಸಮಸ್ಯೆಗಳನ್ನ ಬಗೆಹರಿಸುವ ಕಾರ್ಯ ಈ ಗ್ರ್ಯಾಂಡ್ ಚಾಲೆಂಜ್ 5 ಮಾಡುತ್ತೆ ಎಂದು ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ. ಅಲ್ದೇ, ಗ್ರ್ಯಾಂಡ್ ಚಾಲೆಂಜ್ 6 ನಡಿ ನೀರಿನ ಸಮಸ್ಯೆಗಳ ಬಗ್ಗೆ ಹಾಗೂ ಕೃಷಿಗೆ ನೀರು ಎಷ್ಟು ಅಗತ್ಯ ಎನ್ನುವುದರ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತೆ ಹೀಗಾಗಿ ಈ ಸರ್ಕಾರದ ಈ ಎರಡು ಚಾಲೆಂಜ್ಗಳಲ್ಲಿ ಭಾಗವಹಿಸಲು ಜನರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಮೊದಲ ಹಂತವಾಗಿ ಆಯ್ಕೆಯಾದ 5 ಸಂಸ್ಥೆ ಅಥವಾ ತಜ್ಫರ ತಂಡಕ್ಕೆ 6 ತಿಂಗಳುಗಳ ಕಾಲ ಸಂಶೋಧನೆಗೆ ಅವಕಾಶ ನೀಡಲಿದೆ. ಈ ವೇಳೆ ಆ ತಂಡಕ್ಕೆ ತಲಾ 10 ಲಕ್ಷ ರೂಗಳನ್ನ ನೀಡಲಾಗುವುದು. 2ನೇ ಹಂತದಲ್ಲಿ ಇವರಲ್ಲಿ ಒಬ್ಬರನ್ನ ಆಯ್ಕೆ ಮಾಡಿ ಮುಂದಿನ 12 ತಿಂಗಳ ಅವಧೀಗೆ 50 ಲಕ್ಷ ರೂಪಾಯಿ ನೀಡಲಾಗುತ್ತೆ. ಈ ವೇಳೆ ಅವರು ನಗರದ ಟ್ರಾಫಿಕ್ ಹಾಗೂ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

ಅರ್ಜಿ ಸಲ್ಲಿಕೆಗೆ ಕೊನೆ ದಿನ ಅಕ್ಟೋಬರ್ 15

ಇನ್ನು, ಸರ್ಕಾರದ ಈ ಗ್ರ್ಯಾಂಡ್ ಚಾಲೆಂಜ್ ಕಾಲ್ 5 ಮತ್ತು 6 ರ ಚಾಲೆಂಜ್ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸೋಕೆ ಅಕ್ಟೋಬರ್ 15 ಕೊನೆ ದಿನವಾಗಿದೆ.

www.call5.impact-karnataka.org ಈ ವೆಬ್ ಸೈಟ್‍ಗೆ ಲಾಗಿನ್ ಆಗೋ ಮೂಲಕ ಅರ್ಜಿ ಸಲ್ಲಿಸಬಹುದು.