ಕುಡುಕರಿಗೆ ಶಾಕ್ ನೀಡಲು ಹೊರಟಿದೆ ಸಿದ್ದು ಸರ್ಕಾರ!! ರಾಜ್ಯದಲ್ಲಿ ಮದ್ಯ ನಿಷೇಧದಿಂದ ಒಳ್ಳೇದು ಆಗುತ್ತಾ??

0
879

ಚುನಾವಣೆ ಸಮೀಪಿಸುತ್ತಿದಂತೆ ಮುಖ್ಯಮಂತ್ರಿ ಗಳಿಗೆ ಜ್ಞಾನೋದಯ ವಾದಂತಿದೆ , ಮೊದಲು ತಮ್ಮ ಸರ್ಕಾರ ರಚನೆಯಾದಾಗ ಹಿಂದಿನ ಸರ್ಕಾರ ಅಗ್ಗದ ಬೆಲೆಯ ಮದ್ಯ ಅಥವಾ ಸಾರಾಯಿಯ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದ್ದಿದರು. ಈಗ ಚುನಾವಣೆ ಸಮೀಪಿಸುತ್ತಿದಂತೆ ಸಾಲ ಮನ್ನಾ , ಇಂದಿರಾ ಕ್ಯಾಂಟೀನ್ , ಮದ್ಯ ನಿಷೇಧ ದಂತಹ ಜನಪ್ರಿಯ ಯೋಜನೆಗಳ ಮೂಲಕ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಹೌದು ಕರ್ನಾಟಕದಲ್ಲಿ ಮದ್ಯ ನಿಷೇಧ ಮಾಡಲು ಸರ್ಕಾರ ತೀರ್ಮಾನಿಸಿದೆ , ಈಗಾಗಲೇ ಮದ್ಯ ನಿಷೇಧ ಮಾಡಿರುವ ಬಿಹಾರಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಅಲ್ಲಿನ ಯಶಸ್ಸಿನ ಬಗ್ಗೆ ಮಾಹಿತಿ ಪಡಿದುಕೊಂಡಿರೋ ಸಿಎಂ, ರಾಜ್ಯದಲ್ಲೂ ಚುನಾವಣೆ ವೇಳೆ ಇದೇ ಉಪಾಯ ಮಾಡೋದು ಉತ್ತಮ ಎಂದು ತೀರ್ಮಾನಿಸ್ಸಿದ್ದಾರೆ.

ಮದ್ಯ ನಿಷೇಧ ಮಾಡಿದರೆ ರಾಜ್ಯದಲ್ಲಿ ಗಲಭೆ , ಮುಷ್ಕರ , ಆಗುವುದನ್ನು ತಡೆಯಲು ಹಾಗು ಸರ್ಕಾರಕ್ಕಾಗುವ ೧೮೦೦೦ ಕೋಟಿ ನಷ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಈಗಾಗಲೇ ಮರದಿಂದಾಗುವ ನೀರಾ ವನ್ನು ಟೆಟ್ರಾ ಪ್ಯಾಕುಗಳ ಮೂಲಕ ಮಾರಾಟ ಮಾಡಲು ಯೋಜನೆ ರೂಪಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಮದ್ಯ ನಿಷೇಧ ಮಾಡುತ್ತೇವೆ ಎಂದು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಎಲ್ಲೆಡೆ ಭರವಸೆ ನೀಡಿ ಮಹಿಳಾ ಮತದಾರರನ್ನು ಸೆಳೆಯುವ ಕಸರತ್ತು ನಡೆಸುತ್ತಿರುವಾಗ ಸರ್ಕಾರ ಈಗಲೇ ಮದ್ಯ ನಿಷೇಧ ಮಾಡಿ ವಿಪಕ್ಷಗಳು ಹಾಗು ಮದ್ಯ ಪ್ರಿಯರಿಗೆ ಶಾಕ್ ನೀಡಲು ಮುಂದಾಗಿದೆ. ಆದರೆ ಈಗಾಗಲೇ ಇರುವ ಭಾಗ್ಯ ಗಳಿಂದ , ವೈದ್ಯರ ಮುಷ್ಕರ ಹಾಗು ರೈತರ ಸಾಲ ಮನ್ನಾ ಯೋಜನೆಗಳಿಗೆ ಹಣದ ವ್ಯವಸ್ಥೆ ಮಾಡಲು ಪರದಾಡುತ್ತಿರುವ ಸರ್ಕಾರ ಈ ನಿಷೇಧದ ನಷ್ಟವನ್ನು ಹೇಗೆ ಸರಿದೂಗಿಸಲಿದೆ ನೋಡಬೇಕು.

ಒಟ್ಟಿನಲ್ಲಿ ಮದ್ಯ ನಿಷೇಧ ಎಷ್ಟರ ಮಟ್ಟಿಗೆ ಜನರಿಗೆ ರಿಲೀಫ್ ತರಲಿದೆ ಕಾದು ನೋಡಬೇಕು…!