ಕರ್ನಾಟಕಕ್ಕೆ ಮಾಹಿತಿ ತಂತ್ರಜ್ಞಾನ ತಂದಿದ್ದು ಹೆಚ್ ಡಿ ದೇವೇಗೌಡ್ರ ಅಥವಾ ಎಸ್ ಎಂ ಕೃಷ್ಣರ? ಇಲ್ಲಿದೆ ನೋಡಿ..!

0
1443

ನಮ್ಮ  ಕರುನಾಡು ಐತಿಹಾಸಿಕ ಹಾಗು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರವು ಇಡೀ ದೇಶದಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೇಂದ್ರಬಿಂದುವಾಗಿದ್ದು ದೇಶದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ.

Image result for bangalore

ಆದರೆ ಈ ಮಾಹಿತಿ ತಂತ್ರಜ್ಞಾನವನ್ನ ನಮ್ಮ ಬೆಂಗಳೂರಿಗೆ ಮೊದಲು ಪರಿಚಯಿಸಿದವರು ಯಾರು?

Image result for bangalore i t

ಸಹಜವಾಗಿ ಎಲ್ಲರು ಹೇಳೋದು ಎಸ್ ಎಂ ಕೃಷ್ಣ ಅಂತ, ಆದರೆ ಇದರ ಹಿಂದೆ ಇರುವ ನಿಗೂಢ ಸತ್ಯ ಏನೆಂದರೆ ಮಾಹಿತಿ ತಂತ್ರಜ್ಞಾನವನ್ನ ಬೆಂಗಳೂರಿಗೆ ಪರಿಚಯಿಸಿದ್ದು ನಮ್ಮ ದೇಶದ ಮಾಜಿ ಪ್ರಧಾನಿ ಹಾಗು ರಾಜ್ಯದ ಮಾಜಿ ಮುಖ್ಯಮಂತ್ರಿ ಯಾದ ಹೆಚ್ ಡಿ ದೇವೇಗೌಡರವರು.

ಹೆಚ್ ಡಿ ದೇವೇಗೌಡರವರು ಮುಖ್ಯಮಂತ್ರಿಯಾಗಿದ್ದಾಗ  ಮಾಹಿತಿ ತಂತ್ರಜ್ಞಾನವನ್ನು ಮೊಟ್ಟ ಮೊದಲ ಬಾರಿ ನಮ್ಮ ಬೆಂಗಳೂರಿಗೆ ಪರಿಚಯಿಸಿದರು, ತಮ್ಮ ರಾಜಕೀಯ ಜೀವನದಲ್ಲಿ ನಡೆದ ಏರು ಪೇರಿನಿಂದಾಗಿ ಹೆಚ್ ಡಿ ದೇವೇಗೌಡರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆನೀಡಿ, ನಮ್ಮ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಾದ ನಂತರ ಬಂದ ಸರ್ಕಾರಗಳು ಮಾಹಿತಿ ತಂತ್ರಜ್ಞಾನದ ಕಡೆ ಗಮನ ಹರಿಸಲಿಲ್ಲ. ಆದರೆ ಎಸ್ ಎಂ ಕೃಷ್ಣ ರವರ ಸರ್ಕಾರ ಬಂದಾಗ ಅವರು ಮಾಹಿತಿ ತಂತ್ರಜ್ಞಾನವನ್ನ ಕಾರ್ಯರೂಪಕ್ಕೆ ತಂದರು.

Image result for deve gowda

ಇದಲ್ಲದೆ ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ಮಾಣ ವಾಗುತ್ತಿದ್ದ ಮಾಹಿತಿ ತಂತ್ರಜ್ಞಾನದ(ಐ ಟಿ) ಪಾರ್ಕ್ ಗಳು, ಮುಂದೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಮನಗೊಂಡು ಐಟಿ ಉದ್ಯಮವನ್ನು ಉತ್ತೇಜಿಸಲು ಮಾಹಿತಿ ತಂತ್ರಜ್ಞಾನದ ಉದ್ಯಮಕ್ಕೆ 10ವರ್ಷ “ಟ್ಯಾಕ್ಸ್ ಹಾಲಿಡೆ” ಘೋಷಿಸಿ ದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಗೆ ಮುನ್ನಡಿ ಬರೆದರು

ದುರಾಧೃಷ್ಟವೇನೆಂದರೆ ಇಷ್ಟೆಲ್ಲಾ ಉತ್ತೆಜನ ನೀಡಿದ ಹೆಚ್ ಡಿ ದೇವೇಗೌಡರಿಗೆ ಸಿಕ್ಕಿದು ಮಾಹಿತಿ ತಂತ್ರಜ್ಞಾನ ವಿರೋಧಿ ಎಂಬ ಪಟ್ಟ.