ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
617

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕರ್ನಾಟಕ ಲೋಕಸೇವಾ ಆಯೋಗ (KPSC) ಮುಖ್ಯ ಲೈಬ್ರೇರಿಯನ್, ಸಹಾಯಕ ತೋಟಗಾರಿಕಾ ಅಧಿಕಾರಿ ವಿವಿಧ 110 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಜನವರಿ 16 2019 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಉಡುಪಿ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು: ಮುಖ್ಯ ಲೈಬ್ರೇರಿಯನ್, ಸಹಾಯಕ ತೋಟಗಾರಿಕಾ ಅಧಿಕಾರಿ.
 • ಸಂಸ್ಥೆ : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ)
 • ಒಟ್ಟು ಹುದ್ದೆ : 110
 • ವಯೋಮಿತಿ: 18 ರಿಂದ 35 ವರ್ಷ
 • ಉದ್ಯೋಗ ಸ್ಥಳ: ಕರ್ನಾಟಕ
 • ವಿದ್ಯಾರ್ಹತೆ: ಛೀಫ್ ಲೈಬ್ರೇರಿಯನ್ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ. ಕನಿಷ್ಟ ಶೇ 50ರಷ್ಟು ಅಂಕಗಳೊಂದಿಗೆ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ.
  ಅಸಿಸ್ಟಂಟ್ ಹೋರ್ಟಿಕಲ್ಟರಲ್ ಆಫೀಸರ್: ತೋಟಗಾರಿಕಾ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.


Also read: ಬಿಎಸ್​ಎನ್​ಎಲ್​ ಇಲಾಖೆ, ಮ್ಯಾನೇಜ್ಮೆಂಟ್ ಟ್ರೈನಿ 300 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

 • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 16, 2018.
 • ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿ : 600 ರು. ಒಬಿಸಿ(2ಎ/2ಬಿ/3ಎ/3ಬಿ) : 300 ರು ಎಸ್ ಸಿ/ ಎಸ್ಟಿ/ ಕೆಟಗರಿ 1 : 50 ರು.
 • ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆ.
 • ಪ್ರಮುಖ ದಿನಾಂಕಗಳು:
 • ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ: ಡಿಸೆಂಬರ್ 17, 2018.
 • ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ : ಜನವರಿ 16, 2019.
 • ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : ಜನವರಿ 17, 2019.
 • ಹೆಚ್ಚಿನ ಮಾಹಿತಿಗಾಗಿ: http://www.kpsc.kar.nic.in/