ಮತ ಎಣಿಕೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಮುನ್ನಡೆ ಕಾಯ್ದುಕೊಂಡ ಬಿಜೆಪಿ; ಜೆಡಿಎಸ್ ನಂಬಿಕೊಂಡು ಇರುವ ಮರ್ಯಾದೆಯನ್ನು ಕಳೆದುಕೊಂಡ ಕಾಂಗ್ರೆಸ್..

0
224

ಲೋಕಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಶುರುವಾಗಿದ್ದು ಸಮೀಕ್ಷೆಯಂತೆ ಬಿಜೆಪಿ ಮೇಲು ಗೈ ಸಾಧಿಸುತ್ತಿದೆ. ಇಲ್ಲಿಯವರೆಗೆ ಬಿಜೆಪಿ 345 ಸ್ಥಾನ ಮುನ್ನಡೆ ಇದ್ದರೆ ಕಾಂಗ್ರೆಸ್ 90 ರ ಎಣ್ಣಿಯಲ್ಲಿದೆ. ಇನ್ನೂ ಇತರೆ ಪಕ್ಷಗಳ 106 ಸ್ಥಾನಗಳು ಮುನ್ನಡೆ ಕಾಣುತ್ತಿವೆ. ಈ ಎಣಿಕೆ ನೋಡಿದರೆ ಕಾಂಗ್ರೆಸ್ ದೇಶದಲ್ಲಿ ಮುಳುಗುವುದು ಬಹುತೇಕ ಖಚಿತವಾಗಿದೆ. ಇದು ದೇಶದ ಹಣೆಬರಹವಾದರೆ ಇನ್ನೂ ರಾಜ್ಯದಲ್ಲಿ ಬಿಜೆಪಿ 23 ಸ್ಥಾನ, ಕಾಂಗ್ರೆಸ್ 3 ಸ್ಥಾನ, ಇತರೆ 01. ಸ್ಥಾನ ಮುನ್ನಡೆ ಇದೆ. ಕಾಂಗ್ರೆಸ್ ಜೆಡಿಎಸ್ ನಂಬಿಕೊಂಡು ಇಷ್ಟೊಂದು ಹೀನಾಯ ತಲುಪಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ 8, 9 ಸ್ಥಾನವಾದರೂ ಕಾಂಗ್ರೆಸ್ ಪಾಲಾಗುತಿತ್ತು, ಆದರೆ ಕಥೆ ಸಹವಾಸ ಮಾಡಿ ಕುದುರೆ ಕೆಟ್ಟಿತು ಎನ್ನುವ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ.

ಹೌದು ಎಲ್ಲಿ ಹೋದರು ಮೋದಿಯ ಅಲೆ ಎದ್ದು ಕಾಣುತಿತ್ತು, ಪ್ರಚಾರದ ಸಮಯದಲ್ಲೇ ಬಿಜೆಪಿ ಗೆಲವು ಪಕ್ಕಾ ಎನ್ನುವುದು ಬಹುತೇಕವಾಗಿತ್ತು. ಅದರಂತೆ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ ನಾಯಕರ ಭರವಸೆ ರಾಜ್ಯದಲ್ಲಿ ನಿಜವಾಗುವತ್ತ ಫಲಿತಾಂಶವು ಸಾಗುತ್ತಿದೆ. ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಬಿಜೆಪಿ ವಿಜಯಗಳಿಸಲಿದೆ ಎಂದು ಬಿಜೆಪಿ ನಾಯಕರು ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದು, ಇದೀಗ ಬಿಜೆಪಿ 23 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಪಕ್ಷ ಮುನ್ನಡೆ ಸಾಧಿಸಿರುವುದು ದೇಶದ ಇತಿಹಾಸದಲ್ಲೇ ಮೊದಲು ಎನ್ನುವುದು ತಿಳಿದಿದೆ.

ಬಾರಿ ಮುನ್ನಡೆಯಲ್ಲಿ ಬಿಜೆಪಿ;

ಭಾರತೀಯ ಜನತಾ ಪಕ್ಷ ಈ ಲೋಕಸಭೆ ಚುನಾವಣೆಯಲ್ಲಿ ನೂರೈವತ್ತು ಕ್ಷೇತ್ರಗಳಲ್ಲೂ ಜಯಗಳಿಸುವುದಿಲ್ಲ ಎಂದು ಅತಿಯಾದ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ವಿರೋಧಿಗಳಿಗೆ ಕಪಾಳಮೋಕ್ಷ ಮಾಡುವಂತೆ ಭಾರತದ ಜನರು ಜನಾದೇಶ ನೀಡಿದ್ದಾರೆ. ಈಗಾಗಲೇ 347 ಸ್ಥಾನ ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿಯೇ ಮುನ್ನಡೆಯಲ್ಲದೆ 360 ರ ಮ್ಯಾಜಿಕಲ್ ನಂಬರ್ ದಾಟುವ ನಿರೀಕ್ಷೆಯಲ್ಲಿದೆ. ಇದೀಗ 347 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಆದಕ್ಕೆ ಇನ್ನೂ 8ರಿಂದ 10 ಕ್ಷೇತ್ರಗಳನ್ನು ಸೇರಿಸುವ ಸಾಧ್ಯತೆಯಿದೆ. ಬಿಜೆಪಿ ಏಕಾಂಗಿಯಾಗಿಯೇ 370 ರ ಗಡಿ ದಾಟಿದರೂ ಅಚ್ಚರಿಯಿಲ್ಲ. ಎನ್ನುವ ಮಟಕ್ಕೆ ತಲುಪಿದೆ.

2014ರಲ್ಲಿ 272 ಕ್ಷೇತ್ರಗಳ ಗುರಿಯಿಟ್ಟುಕೊಂಡು ಅಭಿಯಾನವನ್ನು ಬಿಜೆಪಿ ಆರಂಭಿಸಿತ್ತು. ಈ ಬಾರಿ ಅಪನಗದೀಕರಣ, ಜಿಎಸ್ಟಿ ಹೇರಿಕೆ, ರೈತರ ಆತ್ಮಹತ್ಯೆ, ರಫೇಲ್ ಡೀಲ್ ಹಗರಣ, ಕೋಟ್ಯಾಧಿಪತಿಗಳ ಪಲಾಯನ, ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಕಳಂಕ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜನರು ವಿರೋಧಿಗಳ ಮಾತಿಗೆ ಬೆಲೆ ಕೊಡದೆ ಬಿಜೆಪಿ ಮೇಲೆ ಭರವಸೆ ಇಟ್ಟುಕೊಂಡು ಮತ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ವಿರುದ್ಧ ಮಾಡಿದ ವಾಗ್ದಾಳಿಗಳೆಲ್ಲ ಅವರಿಗೇ ತಿರುಗುಬಾಣವಾಗಿವೆ. ಚೌಕಿದಾರ್ ಚೋರ್ ಹೈ ಎಂದಿದ್ದು ಮತದಾರರನ್ನು ಇನ್ನಷ್ಟು ಕೆರಳಿಸಿದೆ.

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುನ್ನಡೆ. ಗಾಂಧಿನಗರದಲ್ಲಿ ಅಮಿತ್‌ ಶಾ ಒಂದು ಲಕ್ಷ ಮತಗಳಿಂದ ಮುನ್ನಡೆ. ಅಮೇಠಿಯಲ್ಲಿ ಸ್ಮೃತಿ ಇರಾನಿ 50,000 ಸಾವಿರ ಮತಗಳ ಮುನ್ನಡೆ. ಪಶ್ಚಿಮ ದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿ 40,000ಕ್ಕೂ ಅಧಿಕ ಮತಗಳ ಮುನ್ನಡೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಮುನ್ನಡೆ. ತೆಲಂಗಾಣದಲ್ಲಿ ಟಿಆರ್‌ಎಸ್‌ 2, ಬಿಜೆಪಿ 2, ಕಾಂಗ್ರೆಸ್ 1ರಲ್ಲಿ ಮುನ್ನಡೆ. ಗುಜರಾತ್‌ನ 26 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಮುನ್ನಡೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 18, ಎಸ್‌ಪಿ-ಬಿಎಸ್ಪಿ ಮೈತ್ರಿಕೂಟ 7 ಕ್ಷೇತ್ರಗಳಲ್ಲಿ ಮುನ್ನಡೆಯಾಗಿದೆ. ಇನ್ನೂ ರಾಜ್ಯದಲ್ಲಿ 2014 ಒಂದು ಹಂತದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಈ ಬಾರಿ ಮಣ್ಣು ತಿಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ, ಮಂಡ್ಯದಲ್ಲಿ ಹಾವು ಏಣಿಯ ಆಟ ಕೇಳಿಬರುತ್ತಿದೆ. ಸಂಜೆ 6 ರ ಒಳಗೆ ಸಂಪೂರ್ಣ ಫಲಿತಾಂಶ ಸಿಗುವ ನಿರೀಕ್ಷೆಯಿದೆ.