ಬೆಂಗಳೂರಿನಲ್ಲಿ ನೈಜೀರಿಯಾ, ಆಫ್ರಿಕಾ ಡ್ರಗ್ ಪೆಡ್ಲರ್‌-ಗಳಿಗೆ ವರದಾನವಾದ ಲಿವಿಂಗ್‌ ಟುಗೆದರ್‌ ಸಂಬಂಧ; ಸ್ಥಳೀಯ ಯುವತಿಯರೇ ಬಲಿ.!

0
430

ದೇಶದಲಿ ಮಾದಕವಸ್ತು ಬಳಕೆ ಹೆಚ್ಚಾಗುತ್ತಿದ್ದು, ಇವುಗಳನ್ನು ಮಾರಾಟ ಮಾಡುವ ಪೆಡ್ಲರ್‌-ಗಳನ್ನು ಹಿಡಿಯಲು ಸಿಸಿಬಿ ಪೊಲೀಸರು ಹಲವು ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅದರಂತೆ ಈಗಾಗಲೇ ಬೆಂಗಳೂರಿನಲ್ಲಿವೂ ನೈಜೀರಿಯಾ ಆಫ್ರಿಕಾ ಸೇರಿದಂತೆ ಇನ್ನಿತರೆ ದೇಶಗಳಿಂದ ಬಂದ ಡ್ರಗ್ ಪೆಡ್ಲರ್‌ಗಳು ನಲೆಸಿದ್ದಾರೆ. ಇದರಿಂದ ದಿನನಿತ್ಯ ಕೋಟ್ಯಾಂತರ ರೂ. ಡ್ರಗ್ಸ್ ಮಾರಾಟ ನಡೆಯುತ್ತಿದೆ. ಎನ್ನುವುದು ಪತ್ತೆಯಾಗಿದೆ ಆದರೆ ಇವರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಸ್ಥಳೀಯ ಯುವತಿರ ಇಟ್ಟುಕೊಂಡು ಡ್ರಗ್ಸ್ ದಂದೆ ಮಾಡುತ್ತಿರುವುದು ಆಶ್ಚರ್ಯ ಮೂಡಿಸಿದೆ.

Also read: ಅಪಾರ್ಟ್‌ಮೆಂಟ್ ಲಿಫ್ಟ್-ಗೆ ಮತ್ತೊಂದು ಬಲಿ; ಆಟವಾಡುತ್ತಿದ್ದಾಗ ಲಿಫ್ಟ್‌ಗೆ ಸಿಲುಕಿ ಅಪ್ಪಚ್ಚಿಯಾದ ಬಾಲಕ ಸ್ಥಳದಲ್ಲೇ ಸಾವು.!

ಹೌದು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು ಮಸಾಜ್‌ ಪಾರ್ಲರ್‌ ಹಾಗೂ ಇನ್ನಿತರ ಕಡೆ ಕೆಲಸ ಮಾಡಿಕೊಂಡಿರುವ ಭಾರತೀಯ ಹೆಣ್ಣು ಮಕ್ಕಳ ಜತೆ ಲಿವಿಂಗ್‌ ಟುಗೆದರ್‌ನಲ್ಲಿ ನೆಲೆಸಲು ಶುರು ಮಾಡಿದ್ದಾರೆ. ವಿಮಾನ ಮತ್ತು ಸಮುದ್ರ ಮಾರ್ಗದಲ್ಲಿ ಬಂದರು ಪ್ರದೇಶಗಳಿಗೆ ಬಂದಿಳಿಯುವ ನೂರಾರು ಟನ್‌ ಮಾದಕ ವಸ್ತುಗಳು ನಂತರ ರೈಲು ಮತ್ತು ರಸ್ತೆ ಮಾರ್ಗದಲ್ಲಿ ಬೆಂಗಳೂರು ಸೇರಿದಂತೆ ನಾನಾ ನಗರಗಳನ್ನು ತಲುಪುತ್ತಿವೆ. ಹೀಗಾಗಿ, ನಾನಾ ತನಿಖಾ ಸಂಸ್ಥೆಗಳು ರೈಲು ನಿಲ್ದಾಣ ಸೇರಿದಂತೆ ನಗರ ಪ್ರವೇಶಿಸುವ ಚೆಕ್‌ ಪೋಸ್ಟ್‌ಗಳಲ್ಲಿತೀವ್ರ ನಿಗಾ ಇಟ್ಟಿದ್ದಾರೆ.

Also read: ಸುಪ್ರಿಂ ತೀರ್ಪಿನ ನಂತರವೂ ಶಬರಿಮಲೆ ಪ್ರವೇಶಕ್ಕೆ ಬಂದ ಬಿಂದು ಅಮ್ಮಿನಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದ ವೀಡಿಯೋ ವೈರಲ್.!

ಆದರೆ ನೈಜೀರಿಯಾ ಪ್ರಜೆಗಳನ್ನು ಎಷ್ಟೇ ತಪಾಸಣೆಗೆ ಒಳಪಡಿಸಿದರೂ ಅವರ ಬಳಿ ನಿರೀಕ್ಷಿತ ಮಟ್ಟದಲ್ಲಿಮಾದಕ ವಸ್ತುಗಳು ಸಿಗುತ್ತಿಲ್ಲ ಎಂಬ ವಿಷಯ ಸಿಸಿಬಿ ಮತ್ತು ಇತರೆ ಸಂಸ್ಥೆಗಳ ಅಧಿಕಾರಿಗಳಿಗೆ ಆಶ್ಚರ್ಯ ಉಂಟುಮಾಡಿತ್ತು. ಈ ಸಂಬಂಧ ತನಿಲೆ ನಡೆಸಿದಾಗ ನೈಜೀರಿಯಾ ಪೆಡ್ಲರ್‌ಗಳು ತಮ್ಮ ಗರ್ಲ್‌ಫ್ರೆಂಡ್‌ಗಳ ಮೂಲಕ ವಿಲೇವಾರಿ ಮಾಡಲು ಶುರು ಮಾಡಿದ್ದಾರೆ. ಒಬ್ಬೊಬ್ಬ ಪೆಡ್ಲರ್‌ ಹಲವು ಯುವತಿಯರ ಜತೆ ಲಿವಿಂಗ್‌ ಟುಗೆದರ್‌ನಲ್ಲಿನೆಲೆಸಿದ್ದು ತಮ್ಮ ದಂಧೆ ಸಲೀಸು ಮಾಡಿಕೊಂಡಿದ್ದಾರೆ. ಅದರಂತೆ ಅವರ ಕಾಯಂ ಗ್ರಾಹಕರಿಗೆ ಮಾತ್ರ ಬೇಕಾದಷ್ಟು ಮಾದಕ ವಸ್ತುಗಳು ಕೊಡುತ್ತಿದ್ದಾರೆ. ಈ ಬಗ್ಗೆಮಾಹಿತಿ ಸಂಗ್ರಹಿಸಿದಾಗ ಪೊಲೀಸರಿಗೆ ತಲೆನೋವು ತಂದಿದೆ.

ಏಕೆಂದರೆ ದೂರದ ಊರಿಂದ ಬಂದವರಿಗೆ ಲಿವಿಂಗ್‌ ಟುಗೆದರ್‌ ವರವಾಗಿ ಪರಿಣಮಿಸಿದೆ. ತಮ್ಮ ಗರ್ಲ್‌ ಫ್ರೆಂಡ್‌ಗಳ ಮೂಲಕ ಮನೆ ಬಾಡಿಗೆ ಹಿಡಿಯುವುದೂ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿದ್ದಾರೆ. ಯಾವ ಪೆಡ್ಲರ್ ಗೆ ಯಾರ್ಯಾರು ಗರ್ಲ್‌ ಫ್ರೆಂಡ್‌ ಗಳಿದ್ದಾರೆ ಎನ್ನುವುದು ಸಿಸಿಬಿ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ಗೊತ್ತಾ ದರೂ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸುವುದಕ್ಕೆ ಎಲ್ಲಾ ಕಡೆಗೂ ಮಹಿಳಾ ಸಿಬ್ಬಂದಿಯನ್ನು ಕರೆದೊಯ್ಯುವುದೂ ಸಾಧ್ಯವಾಗುತ್ತಿಲ್ಲ.

Also read: ಮದುವೆಯಾಗಿ 7 ವರ್ಷದ ನಂತರ ಪ್ರಿಯಕರನ ಜೊತೆ ಹೆಂಡತಿಗೆ ಮದುವೆ ಮಾಡಿದ ಪತಿ; ಈ ತ್ಯಾಗಕ್ಕೆ ಭಾರಿ ಮೆಚ್ಚುಗೆ.!

ಏಕೆಂದರೆ ಪೊಲೀಸರಿಗೆ ಸಿಕ್ಕಿ ಬಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಗರ್ಲ್‌ಫ್ರೆಂಡ್‌ಗಳೂ ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಕಾನೂನಿನ ಪ್ರಕಾರ 5 ಗ್ರಾಂ ಒಳಗೆ ಮಾದಕ ವಸ್ತುಗಳನ್ನು ಇಟ್ಟುಕೊಂಡಿದ್ದರೆ ಅವರ ವಿರುದ್ಧ ಕೇಸು ದಾಖಲಿಸಲು ಅವಕಾಶ ಇಲ್ಲ. ಹೀಗಾಗಿ, 3, 4 ಗ್ರಾಂ ಮಾದಕ ವಸ್ತುಗಳನ್ನೇ ಪೆಡ್ಲರ್‌ಗಳು ತಮ್ಮ ಕಾಯಂ ಗ್ರಾಹಕರಿಗೆ ನೀಡುತ್ತಿದ್ದಾರೆ. ಅಲ್ಲದೆ 4-5 ಗ್ರಾಂ ಮಾದಕ ವಸ್ತುವನ್ನು ದೇಹದೊಳಗೆ ಬಚ್ಚಿಟ್ಟುಕೊಳ್ಳುವುದು ಬಹಳ ಸುಲಭ. ಇದು ಪೆಡ್ಲರ್‌ಗಳಿಗೆ ಅನುಕೂಲವಾಗಿ ಪರಿಣಮಿಸಿದೆ.