ಪೊಲೀಸ್ ಇಲಾಖೆಯ ಖಾಕಿ ಸಮವಸ್ತ್ರ ಸ್ವಲ್ಪ ದಿನಗಳಲ್ಲೇ ಬದಲಾಗುತ್ತಾ? ಬದಲಾವಣೆಗೆ ನೀವೇನಂತೀರಾ??

0
671

ಇಡೀ ಸಮಾಜದ ಸ್ವಾಸ್ತ ಕಾಪಾಡುವ ಇಲಾಖೆ ಪೊಲೀಸ್​​.. ಈ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸಮವಸ್ತ್ರದ ಬಗ್ಗೆ ಹಲವು ಪ್ರಶ್ನೆಗಳಿದ್ದವು. ಅಲ್ಲದೆ ಅದರ ಗುಣ ಮಟ್ಟದ ಬಗ್ಗೆ ಸದಾ ಚರ್ಚೆಗಳು ಆಗುತ್ತಿದ್ದವು. ಪದೇ ಪದೇ ಕೇಳಿ ಬರುತ್ತಿದ್ದ ದೂರು ಹಾಗೂ ಸಮಸ್ಯೆಯನ್ನು ಪರಿಹರಿಸಲು ಪೊಲೀಸ್​​ ಇಲಾಖೆ ಸೂತ್ರವನ್ನು ಹೆಣೆದುಕೊಂಡಿದೆ.


ಎಸ್​​… ಪೊಲೀಸ್​​ ಇಲಾಖೆಯಲ್ಲಿ ಕೆಲಸ ಮಾಡುವ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಪೇದೆಗಳಿಗೆ ಖಾಕಿ ಬಣ್ಣದ ಸಮವಸ್ತ್ರ ಇರೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನು ಈ ಸಮವಸ್ತ್ರದ ವಿಷಯಕ್ಕೆ ಸಂಬಂಧಿಸಿದ್ದಂತೆ ದೂರು ಕೇಳಿಬಂದಿದ್ದವು. ಈ ಬಟ್ಟೆಗಳ ಗುಣಮಟ್ಟ, ದುರ್ಗಂಧ ಹಾಗೂ ಓಡಾಡಲು ಅನಾನುಕೂಲ ಇಲ್ಲದ ದೂರು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್​ ಇಲಾಖೆ ಪ್ರಯೋಗಾರ್ಥವಾಗಿ ಬೇರೆ ಗುಣ ಮಟ್ಟದ ಬಟ್ಟೆಗಳನ್ನು ಬಳಸಲು ಚಿಂತನೆ ನಡೆಸಿದ್ದು, 500 ಪೇದೆಗಳಿಗೆ ಈ ಸಮವಸ್ತ್ರಗಳನ್ನು ನೀಡಿ ಪ್ರತಿಕ್ರಿಯೆ ಸಂಗ್ರಹಿಸಿ ನಂತರ ಬೇರೆ ಪೇದೆಗಳಿಗೆ ನೀಡುವ ನಿರ್ಧಾರ ಇಲಾಖೆಯದ್ದಾಗಿದೆ.


ಇನ್ನು ಪೊಲೀಸ್​ ಇಲಾಖೆ ನೀಡಿದ ವಸ್ತ್ರದ ಕ್ವಾಲಿಟಿ ಉತ್ತಮವಾಗಿರದ್ದಿದ್ದರಿಂದ, ಪೊಲೀಸರು ತಮಗೆ ಇಷ್ಟವಾಗುವು ಬಟ್ಟೆಗಳನ್ನು ತಂದು ಹೊಲಿಸಿಕೊಳ್ಳುತ್ತಿದ್ದಾರೆ. ಇದ್ರಿಂದ ಬಣ್ಣದಲ್ಲಿ ವ್ಯತ್ಯಾಸ ಕಾಣುತ್ತಿದೆ. ಈ ವ್ಯತ್ಯಾಸವನ್ನು ತಪ್ಪಿಸಲು ಇಲಾಖೆ ಸೂತ್ರ ಹೆಣೆದುಕೊಂಡಿದೆ. ಇನ್ನು ಈ ಪ್ರಯೋಗ ಯಶಸ್ವಿಯಾದಲ್ಲಿ ಎಲ್ಲ ಪೊಲೀಸರಿಗೂ ಈ ವಸ್ತ್ರಗಳನ್ನು ನೀಡಲು ತೀರ್ಮಾನಿಸಲಾಗಿದೆ. ಇನ್ನು ಮುಂದೇ ನೀಡಬೇಕೆಂದಿರುವ ಬಟ್ಟೆಯಲ್ಲಿ 67% ಪಾಲಿಸ್ಟರ್​​, 30% ಕಾಟನ್​​, 3% ಸಿಂಥೆಟಿಕ್​​ ಇರಲಿದ್ದು, ದುರ್ಗಂಧ ಹಾಗೂ ಕೊಳೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.


ಇನ್ನು ಮುಂದೇ ನೀಡಿಲು ಚಿಂತಿಸಲಾಗುತ್ತಿರುವ ಬಟ್ಟೆಯ ಮೌಲ್ಯ ದ್ವಿಗುಣವಾಗಲಿದೆ. ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿರುವ ಪೊಲೀಸ್​ ಇಲಾಖೆ ಗಾರ್ಮೆಂಟ್​​ ಫ್ಯಾಕ್ಟರಿಯನ್ನು ಸಂಪರ್ಕಿಸಿ ರೆಡಿಮೇಡ್​​ ಬಟ್ಟೆ ರೆಡಿ ಮಾಡಲು ಪ್ಲಾನ್ ಮಾಡಿಕೊಂಡಿದೆ.