SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಮಾ.27ರಿಂದ ಏ.9ರವರೆಗೆ ನಡೆಯಲಿವೆ ಪರೀಕ್ಷೆಗಳು.!

0
71

2019-20ನೇ ಶೈಕ್ಷಣಿಕ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಹೊರಡಿಸಿದ್ದು, ಈ ವೇಳಾಪಟ್ಟಿಯಂತೆ ಪರೀಕ್ಷೆಯು ಮಾರ್ಚ್ 27ರಿಂದ ಆರಂಭವಾಗಲಿದ್ದು, ಏಪ್ರಿಲ್‌ 9ರವರೆಗೆ ನಡೆಯಲಿದೆ. ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿ ತನ್ನ ಅಧಿಕೃತ ವೆಬ್‌ ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆಗಳು ಬೆಳಗ್ಗೆ 9.30ರಿಂದ ಆರಂಭವಾಗಿ ಮಧ್ಯಾಹ್ನ 12.30/45ರವೆಗೆ ಇರಲಿದೆ. ಕೆಲವು ಪರೀಕ್ಷೆಗಳು ಮಧ್ಯಾಹ್ನ 2ರಿಂದ 5.15ರವರೆಗೆ ನಡೆಯಲಿದೆ. ಮಾ.27ರಿಂದ ಏ.9ರವರೆಗೆ ಭಾನುವಾರ ರಜೆ ಸೇರಿದಂತೆ ಏಳು ದಿನಗಳ ರಜೆ ಇದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿದೆ.

Also read: ಡಿಪ್ಲೋಮಾದವರಿಗೆ ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ಉದ್ಯೋಗ ಅವಕಾಶ

ಈ ಬಾರಿ ಪ್ರಥಮ ಭಾಷೆಗೆ ನಡೆಯಲಿರುವ ಪರೀಕ್ಷೆಗಳು ಒಟ್ಟು 100 ಅಂಕಗಳನ್ನು ಹೊಂದಿದ್ದರೆ, ದ್ವಿತೀಯ ಭಾಷೆ, ತೃತೀಯ ಭಾಷೆ ಹಾಗೂ ಕೋರ್ ಸಬ್ಜೆಕ್ಟ್ಸ್ ಗಳಿಗೆ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಇನ್ನು NSQF ಪರೀಕ್ಷಾ ವಿಷಯಗಳಿಗೆ ಲಿಖಿತ ಪರೀಕ್ಷೆ 60 ಅಂಕಗಳಿಗೆ ನಡೆಯಲಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದು ಒಳ್ಳೆಯದು. ಪಾಲಕರು ಕೂಡ ಮಕ್ಕಳ ಬಗ್ಗೆ ವಿಶೇಷ ನಿಗಾ ಇಟ್ಟು ಈ ಮೂರು ತಿಂಗಳು ಸರಿಯಾಗಿ ಓದಿಸುವುದು ಒಳ್ಳೆಯದು.
ಪರೀಕ್ಷಾ ವೇಳಾಪಟ್ಟಿ ಹೀಗಿದೆ.

Also read: ಈಶಾನ್ಯ ರೈಲ್ವೆಯಲ್ಲಿ 1104 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.!

ವೇಳಾಪಟ್ಟಿ ಹೀಗಿದೆ

ಮಾರ್ಚ್​ 27– (ಪ್ರಥಮ ಭಾಷೆ) ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ಮಾರ್ಚ್ 30- (ಕೋರ್ ಸಬ್ಜೆಕ್ಟ್​) ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ
ಏಪ್ರಿಲ್ 01 – (ದ್ವಿತೀಯ ಭಾಷೆ) ಇಂಗ್ಲಿಷ್, ಕನ್ನಡ
ಏಪ್ರಿಲ್ 03- (ತೃತೀಯ ಭಾಷೆ) ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್​ಎಸ್​ಕ್ಯೂಎಫ್​ ಪರೀಕ್ಷಾ ವಿಷಯಗಳು- ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್​ನೆಸ್​
ಏಪ್ರಿಲ್ 04 (ಕೋರ್ ಸಬ್ಜೆಕ್ಟ್) ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್​-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
ಏಪ್ರಿಲ್ 07- (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 09- (ಕೋರ್ ಸಬ್ಜೆಕ್ಟ್) ಸಮಾಜ ವಿಜ್ಞಾನ.