ಸರ್ಕಾರಿ ನೌಕರರಿಗೆ ಇನ್ಮುಂದೆ ರಜವೋ ರಜಾ; ಜಯಂತಿಗಳ ರಜೆ ಸೇರಿ 4ನೇ ಶನಿವಾರವೂ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ನೀಡಿದ ಮೈತ್ರಿ ಸರ್ಕಾರ..

0
678

ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ನಾಲ್ಕನೆ ಶನಿವಾರ ರಜೆ. ಮನವಿಗೆ ಮಣಿದ ರಾಜ್ಯಸರ್ಕಾರ ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕ ಜಯಂತಿ ಸೇರಿ ಹಲವು ರಜೆಗಳನ್ನು ಕಡಿತ ಗೊಳಿಸಿ ನಾಲ್ಕನೆ ಶನಿವಾರ ರಜೆ ನೀಡಲು ಮೈತ್ರಿ ಸರ್ಕಾರ ನಿರ್ಧರಿಸಿತ್ತು ಆದರೆ ಇದಕ್ಕೆ ವ್ಯಾಪಕ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ನಡೆದ ಸಚಿವ ಸಂಪುಟದಲ್ಲಿ ರಾಜ್ಯ ನೌಕರರಿಗೆ ಭರ್ಜರಿ ಬಂಪರ್ ನೀಡಿದ್ದು ಜಯಂತಿಗಳಿಗೆ ಇದ್ದ ರಜೆಗಳನ್ನು ಮುಂದುವರಿಸಿ, ನಾಲ್ಕನೆ ಶನಿವಾರವೂ ರಜೆ ನೀಡಿದೆ.

Also read: ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ; ವೈದ್ಯಕೀಯ ವೆಚ್ಚ ಮರುಪಾವತಿ ಮಿತಿ 3 ಲಕ್ಷ ರೂ. ಗೆ ಹೆಚ್ಚಳ ಮಾಡಿ ಹಲವು ಬದಲಾವಣೆ ತಂದ ಸರ್ಕಾರ..

ಹೌದು ಆರನೇ ವೇತನ ಆಯೋಗದ ಶಿಫಾರಸನ್ನು ಆಧರಿಸಿ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತಿಂಗಳ ನಾಲ್ಕನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಯೆಂದು ಘೋಷಿಸಲು ತೀರ್ಮಾನಿಸಲಾಗಿದೆ. ತಿಂಗಳ ನಾಲ್ಕನೇ ಶನಿವಾರ ಬ್ಯಾಂಕ್‍ಗಳಿಗೆ ರಜೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ತನ್ನ ಕಚೇರಿಗಳಿಗೆ ರಜೆ ನೀಡಲು ಮುಂದಾಗಿದೆ. ಜೊತೆಗೆ ಬುದ್ಧ, ಬಸವ, ಕನಕ, ವಾಲ್ಮೀಕಿ, ಮಹಾವೀರ ಜಯಂತಿ, ಕಾರ್ಮಿಕ ದಿನಾಚರಣೆ, ಗುಡ್‍ಫ್ರೈಡೇ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್ ಈ ರಜೆಗಳ ಪೈಕಿ ಕೆಲವನ್ನು ರದ್ದುಗೊಳಿಸಿ ಸಾಂದರ್ಭಿಕ ರಜೆಯನ್ನು 15 ರಿಂದ 12 ದಿನಗಳವರೆಗೆ ಇಳಿಕೆ ಮಾಡಿ ಶಿಫಾರಸ್ಸು ಮಾಡಲಾಗಿತ್ತು.

Also read: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಆಫರ್; ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದು ರಹಿತ ಹೆಚ್ಚುವರಿ ಚಿಕಿತ್ಸೆಗೆ ರಾಜ್ಯ ಆರೋಗ್ಯ ಇಲಾಖೆ ಆದೇಶ..

ಈಗ ಜಯಂತಿಗಳ ರಜೆ ಮುಂದುವರಿಕೆಗೆ ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಜಯಂತಿ ರಜೆಗೆ ಕಡಿತಗೊಳಿಸುವ ನಿರ್ಧಾರದಿಂದ ಕಾಂಗ್ರೆಸ್​-ಜೆಡಿಎಸ್​ ಸಚಿವರು ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಜೆಗಳನ್ನು ರದ್ದು ಮಾಡದೇ, ಯಥಾವತ್​ ಆಗಿ ಮುಂದುವರೆಸಲಾಗುವುದು. ಆದರೆ, ನಾಲ್ಕನೇ ಶನಿವಾರದಂದು ಸರ್ಕಾರಿ ರಜೆಗೆ ಸಿಎಂ ಸೂಚಿಸಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯಗಳಲ್ಲಿ ಅನೇಕ ಜಯಂತಿಗಳಿಗೆ ಸರ್ಕಾರಿ ನೌಕರರಿಗೆ ರಜೆ ನೀಡಲಾಗುತ್ತಿದೆ. ಸಾರ್ವತ್ರಿಕ ರಜೆಗಳಿಗಿಂತ ಈ ಜಯಂತಿಗಳಿಗೆ ಅಧಿಕ ರಜೆ ಇರುವ ಹಿನ್ನೆಲೆ ಈ ರಜೆಗಳನ್ನು ಕಡಿತಗೊಳಿಸುವ ಸಂಬಂಧ ಸರ್ಕಾರದ ಮುಂದೆ ಪ್ರಸ್ತಾಪವಿರಿಸಲಾಗಿತ್ತು. ಈ ಬೆನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರೂಪ್ ಸಿ,ಡಿ ನೌಕರರ ವರ್ಗಾವಣೆಗೆ ಹೊಸ ವ್ಯವಸ್ಥೆ?

Also read: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಭತ್ಯೆಯಲ್ಲಿ 5 ಪಟ್ಟು ಹೆಚ್ಚಳ..

ಸಿ ಮತ್ತು ಡಿ ಗ್ರೂಪ್ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆಯ ವ್ಯವಸ್ಥೆ. ಅದಕ್ಕಾಗಿ ಕರಡು ಕಾನೂನು ಜಾರಿಗೆ ತರಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬರುವ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲಾಗುವುದು. ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿರ್ಧರಿಸಲಾಗಿದೆ. ವರ್ಗಾವಣೆಗೆ ಸಿ ಗ್ರೂಪ್ ಗೆ 5 ವರ್ಷ ಡಿ ಗ್ರೂಪ್ ಗೆ 7 ವರ್ಷ ನಿಗದಿ ಮಾಡಲಾಗಿದೆ ಎಂದು ತಿಳಿಸಿದ ಸಚಿವ ಕೃಷ್ಣ ಭೈರೇಗೌಡ ಬೀದರ್, ಕಲಬುರ್ಗಿ, ಯಾದಗಿರಿ, ಉತ್ತರ ಕನ್ನಡ, ಕೊಡಗು, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆ ತುಂಬಲು ಆದ್ಯತೆ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.