ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ 2055 ಭೂಮಾಪಕ ಹುದ್ದೆಗಳ ನೇಮಕಾತಿ ಪ್ರಕಟಣೆ.!

0
399

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಅನುಷ್ಟಾನಗೊಳಿಸುವ ಹಾಗೂ 11-ಇ ನಕ್ಷೆ, ತತ್ಕಾಲ್ ಪೋಡಿ ಪ್ರಕರಣಗಳ ಅಳತೆ ಕಾರ್ಯ ನಿರ್ವಹಿಸಿ ನಕ್ಷೆಯನ್ನು ವಿಳಂಬವಿಲ್ಲದೆ ಒದಗಿಸುವ ಸಲುವಾಗಿ 6770 ಅರ್ಹ ಅಭ್ಯರ್ಥಿಗಳಿಗೆ ಭೂಮಾಪನ ಪರವಾನಗಿ ನೀಡಲು ಸರ್ಕಾರದ ಅನುಮೋದನೆ ದೊರೆತಿರುತ್ತದೆ. ಆದ್ದರಿಂದ 2055 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್‌ಲೈನ್‌ ಮುಖಾಂತರ ಅರ್ಜಿ ಆಹ್ವಾನಿಸಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಹಲವು ಹುದ್ದೆಗಳಿಗೆ ನೇಮಕಾತಿ.!

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಭೂಮಾಪಕ

ಸಂಸ್ಥೆ (Organisation): ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ

ವಿದ್ಯಾರ್ಹತೆ (Educational Qualification): ಕನಿಷ್ಟ ಪದವಿ ಪೂರ್ವಶಿಕ್ಷಣ (ಪಿ.ಯು.ಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಡೆಸುವ 12ನೇ ತರಗತಿ ಸಿ.ಬಿ.ಎಸ್‌.ಇ ಅಥವಾ ಐ.ಸಿ.ಎಸ್‌.ಇ ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ 60%ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು ಅಥವಾ ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ (ಸಿವಿಲ್) ಅಥವಾ ಬಿ.ಟೆಕ್ ಅಥವಾ ಸಿವಿಲ್ ಇಂಜಿನಿಯರಿಂಗ್‌ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ “ಲ್ಯಾಂಡ್ ಅಂಡ್ ಸಿಟಿ ಸರ್ವೆ”ಯಲ್ಲಿ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ “ಐ.ಟಿ.ಐ ಇನ್ ಸರ್ವೆ ಟ್ರೇಡ್‌” ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ರಾಜ್ಯ ಸರ್ಕಾರದ ಭೂಮಾನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಥವಾ ಸರ್ವೆ ಆಫ್ ಇಂಡಿಯಾ ಅಥವಾ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.

ವಯೋಮಿತಿ: ಜನವರಿ 21,2020ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 65 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು 500/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ’: ಅಭ್ಯರ್ಥಿಗಳು ನಾಡಕಛೇರಿಯಲ್ಲಿ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನೀಡಿ ನಿಗದಿತ ಶುಲ್ಕವನ್ನು ಪಾವತಿಸಿಸದಾಗ ನೀಡುವ ಸ್ವೀಕೃತಿ ಪತ್ರವನ್ನು ಜೊತೆಯಲ್ಲಿಟ್ಟುಕೊಂಡು ಇಲಾಖಾ ವೆಬ್‌ಸೈಟ್‌ http://landrecords.karnataka.gov.in/Lsrecruitment/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ದಿನಾಂಕ 21.1.2020ರ ಸಂಜೆ 5:00 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522