ಒಂದೇ ಕೋಣಕ್ಕಾಗಿ ಎರಡು ಜಿಲ್ಲೆಗಳ ನಡುವೆ ಕಿತ್ತಾಟ; ಕೋಣ ಯಾರಿಗೆ ಸೇರಿದೆಂದು ತಿಳಿಯಲು ಇತಿಹಾಸದಲ್ಲೇ ಮೊದಲ ಭಾರಿಗೆ ಡಿಎನ್​ಎ ಪರೀಕ್ಷೆಗೆ ಮುಂದಾದ ಪೊಲೀಸರು.!

0
127

ಸಾಮಾನ್ಯವಾಗಿ ಪ್ರತಿಯೊಂದು ಊರಲ್ಲಿ ದೇವರ ಹೆಸರಲ್ಲಿ ಕೋಣಗಳನ್ನು ಬಿಡುವುದು ಅದಕ್ಕಾಗಿ ಎರಡು ಊರುಗಳ ಮಧ್ಯ ಹೊಡೆದಾಡುವುದು ಕೂಡ ಗೊತ್ತೆಯಿದೆ. ಕೆಲವು ಊರಲ್ಲಿ ಅಂತು ಈ ಸಂಬಂಧ ಇನ್ನೂ ಕೇಸ್ ನಡೆಯುತ್ತಾನೆ. ಇವೆ. ಇಂತಹದೆ ಒಂದು ಘಟನೆ ಎರಡು ಜಿಲ್ಲೆಗಳ ಮಧ್ಯ ನಡೆದಿದ್ದು, ಎರಡು ಊರಿನವರು ತಮ್ಮದೇ ಕೋಣ ಎನ್ನುವ ಸಾಕ್ಷಿಯನ್ನು ತೋರಿಸುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಈ ಬಗ್ಗೆ ಪಂಚಾಯತಿ ನಡೆಯುತ್ತಾನೆ ಇದೆ. ಆದರೆ ಯಾವುದೇ ಊರಿಗೆ ಕೋಣ ಕೊಟ್ಟರು ದೊಡ್ಡ ಮಟ್ಟದಲ್ಲಿ ಗಂದಲ ಆಗುವುದು ಗ್ಯಾರಂಟಿ ಎನ್ನುವ ಹಿನ್ನೆಲೆಯಲ್ಲಿ ಪೊಲೀಸರು ಕೋಣದ ಡಿಎನ್​ಎ ಪರೀಕ್ಷೆಗೆ ಮುಂದಾಗಿದ್ದು ಭಾರಿ ವೈರಲ್ ಆಗಿದೆ.

ಕೋಣದ ಡಿಎನ್​ಎ ಪರೀಕ್ಷೆಗೆ?

ಹೌದು ದಾವಣಗೆರೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದವರು ಕೋಣವನ್ನು ತಮ್ಮದು ಎನ್ನುತ್ತಿದ್ದರೆ, ಇತ್ತ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮಸ್ಥರೂ ಸಹ ಕೋಣ ತಮ್ಮದು ಎನ್ನುತ್ತಿದ್ದಾರೆ. ಅದರಂತೆ ಎರಡು ಗ್ರಾಮಗಳಲ್ಲಿ ಮಾರಿ ಜಾತ್ರೆಗಾಗಿ ಬಿಟ್ಟ ಕೋಣವೊಂದು ಕಣ್ಮರೆಯಾಗಿತ್ತು. ನಂತರ ಒಂದು ಕೋಣ ಮಾತ್ರ ಪತ್ತೆಯಾಗಿತ್ತು. ಕೋಣ ಪತ್ತೆಯಾದ ನಂತರ ಆ ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟ ಆರಂಭವಾಗಿದೆ. ಆಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣವೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಕೋಣ ಯಾವ ಗ್ರಾಮದ್ದು ಎಂಬ ಸಮಸ್ಯೆ ಬಗೆಹರಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಈ ಹಿನ್ನೆಲೆ ಪ್ರಕರಣ ಇತ್ಯರ್ಥಕ್ಕಾಗಿ ಇದೇ ಮೊದಲ ಬಾರಿ ಕೋಣದ ಡಿಎನ್​ಎ ಪರೀಕ್ಷೆಗೆ ಮುಂದಾಗಿರುವ ವಿಲಕ್ಷಣ ಪ್ರಕರಣ ನಡೆದಿದೆ.

ಕೋಣದ ಚಹರೆ, ಕೋಡು, ಸುಟ್ಟಿರುವ ಬಾಲದ ಗುರುತು, ಕಾಲಿನಲ್ಲಿ ಹಾಕಿರುವ ಕಡಗ ನೋಡಿ ಇದು ನಮ್ದೇ ಕೋಣ ಎನ್ನುತ್ತಾರೆ ಹಾರನಹಳ್ಳಿ ಗ್ರಾಮಸ್ಥರು. ಬೇಲಿ ಮಲ್ಲೂರು ಗ್ರಾಮಸ್ಥರು ಕೂಡ ಕೋಣದ ಕಿವಿ, ಬಾಲ, ಕಾಲುಗಳ ಗುರುತುಗಳು ನೋಡಿ ನಮ್ಮದು ಎನ್ನುತ್ತಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ಕೂಡ ತಲೆಕೆಡಿಸಿಕೊಂಡಿದ್ದು, ಎರಡು ಊರಿನವರಿಗೆ ಕರೆಸಿ ಮಾತಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಪ್ರಯತ್ನ ನಡೆಸಿ, ವಿವರಣೆ ಪಡೆದಿದ್ದಾರೆ. ಇನ್ನು ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಗಮನಕ್ಕೆ ಈ ಪ್ರಕರಣ ಬಂದಿದ್ದು, ಅವರು ಕೂಡ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಉಭಯ ಗ್ರಾಮಸ್ಥರನ್ನು ಕರೆಸಿ ಅವರಿಂದ ಮಾಹಿತಿ ಪಡೆದು, ಕೋಣದ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ. ಆದರೆ ಎರಡು ಗ್ರಾಮಸ್ಥರು ಈಗ ಪಟ್ಟು ಸಡಿಲಿಸದೆ ವಿಷಯ ಕಗ್ಗಂಟಾಗಿರುವ ಹಿನ್ನೆಲೆ ಕೋಣದ ಡಿಎನ್​ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.

ಇತಿಹಾಸದಲ್ಲೇ ಮೊದಲ ಡಿಎನ್​ಎ ಪರೀಕ್ಷೆ;

ಎರಡು ಗ್ರಾಮಗಳ ಕೋಣದ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿ ಎನ್ ಎ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಈ ಕೋಣದ ತಾಯಿ ಎಮ್ಮೆಗಳು ಇನ್ನು ಬದುಕಿದ್ದು ಇದರಿಂದ ರಕ್ತದ ಮಾದರಿ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಯಿಂದ ಸ್ಪಷ್ಟ ಚಿತ್ರಣ ಬರಲಿದೆ. ಹೀಗಾಗಿಯೇ ಕೊನೆಯ ಪ್ರಯತ್ನವಾಗಿ ಈ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಕೋಣದ ವಿಚಾರದಲ್ಲಿ ಇತಿಹಾಸದಲ್ಲೇ ಮೊದಲ ಡಿಎನ್​ಎ ಪರೀಕ್ಷೆ ಮಾಡಿದ ಪ್ರಕರಣ ಇದಾಗಲಿದೆ ಎಂದರೆ ತಪ್ಪಾಗಲಾರದು. ಪಶು ಇಲಾಖೆ ವೈದ್ಯರಿಂದ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ಸಿಸಿಎಂ ಕೇಂದ್ರಕ್ಕೆ ಅದನ್ನು ಕಳಿಸಲಾಗುವುದು. ಅಲ್ಲೇ ಡಿ ಎನ್ ಎ ಪರೀಕ್ಷೆ ಮಾಡಿಸುತ್ತೇವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಅದರಂತೆ ಈ ಪ್ರಕರಣ ಇತ್ಯರ್ಥವಾಗುವವರೆಗೂ ಕೋಣ ಯಾವ ಊರಿನಲ್ಲೂ ಇರೋದು ಬೇಡ ಎಂದು ಪೊಲೀಸರು ಖಡಕ್ ಸೂಚನೆ ನೀಡಿದ್ದಾರೆ. ಅಲ್ಲಿಯವರೆಗೆ ಕೋಣವನ್ನು ಯಾವುದಾದರೂ ಗೋ ಶಾಲೆಯಲ್ಲಿ ಬಿಡುವಂತೆ ಸೂಚನೆ ನೀಡಿದ್ದು, ಇದಕ್ಕೆ ಎರಡು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದಾರೆ.