ಕರ್ನಾಟಕ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕ ಮತ್ತು ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
658

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕರ್ನಾಟಕ ವಿಶ್ವವಿದ್ಯಾಲಯ ಕರ್ನಾಟಕ ಕಲಾ ಮಹಾವಿದ್ಯಾಲಯ/ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ/ಬಿ.ಬಿ.ಎ/ಬಿ.ಸಿ.ಎ/ಕಾನೂನು/ಸಂಗೀತ/ಶಿಕ್ಷಣ ಮಹಾವಿದ್ಯಾಲಯದಲ್ಲಿ (ಯು.ಜಿ) 2019-20 ನೇ ಸಾಲಿನ ಎಲ್ಲ ತರಗತಿಗಳಿಗೆ ಅಗತ್ಯತೆಗನುಸಾರ 189 ಅತಿಥಿ ಉಪನ್ಯಾಪಕ ಮತ್ತು ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜುಲೈ 5,2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ರಾಷ್ಟ್ರೀಯ ಆರೋಗ್ಯ ಅಭಿಯಾನ 766 ನರ್ಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಅತಿಥಿ ಉಪನ್ಯಾಪಕ ಮತ್ತು ಸಹಾಯಕ ಉಪನ್ಯಾಸಕ

ಸಂಸ್ಥೆ (Organisation): ಕರ್ನಾಟಕ ವಿಶ್ವವಿದ್ಯಾಲಯ

ಉದ್ಯೋಗ ಸ್ಥಳ (Educational Qualification): ಈ ಹುದ್ದೆಗಳಿಗೆ ಯು.ಜಿ.ಸಿ ನೆಟ್/ಸ್ಲೆಟ್ ಉತ್ತೀರ್ಣತೆ/ಪಿ.ಎಚ್‌ಡಿ ಪದವಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಕವಿವಿ,ಧಾರವಾಡ ಇವರ ಹೆಸರಿನಲ್ಲಿ 1000/- ರೂ (ಪ.ಜಾ/ಪ.ಪಂ/ಪ್ರ-೧ರ ಅಭ್ಯರ್ಥಿಗಳು 500/-ರೂ) ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನು ಸಂಬಂಧಿಸಿದ ಪ್ರಾಚಾರ್ಯರು,ಕ.ವಿ.ವಿ. ಅಧೀನ ಮಹಾವಿದ್ಯಾಲಯಗಳಿಂದ ಖುದ್ದಾಗಿ ಅಥವಾ ಕವಿವಿ ವೆಬ್‌ಸೈಟ್‌ http://www.kud.ac.in/ ಮುಖಾಂತರ ಪಡೆದು ಭರ್ತಿ ಮಾಡಿ ಅಗತ್ಯ ಧೃಡೀಕೃತ ಅಡಕಗಳನ್ನು ಹಾಗೂ ವಿತ್ತಾಧಿಕಾರಿಗಳು ಕವಿವಿ, ಧಾರವಾಡ ಇವರ ಹೆಸರಿನಲ್ಲಿ ಪಡೆದ ಅರ್ಜಿ ಶುಲ್ಕದ ರಸೀದಿಯೊಂದಿಗೆ ಜುಲೈ 5,2019 ರ ಒಳಗೆ ಸಂಬಂಧಿಸಿದ ಪ್ರಾಚಾರ್ಯರು, ಕ.ವಿ.ವಿ ಅಧೀನ ಮಹಾವಿದ್ಯಾಲಯ ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ: http://www.kud.ac.in/ ಕ್ಲಿಕ್ ಮಾಡಿ.