ಕೇಂದ್ರ ಲೋಕ ಸೇವಾ ಆಯೋಗದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶ.

0
641

ಕೇಂದ್ರ ಲೋಕ ಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಯುಪಿಎಸ್‌ಸಿ ಮೂಲಕ ನೇಮಕ.

Image result for upsc

 

ಖಾಲಿ ಹುದ್ದೆಗಳ ಸಂಖ್ಯೆ: 50

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 27, 2017

ಹೆಚ್ಚಿನ ಮಾಹಿತಿಗೆ ವೆಬ್‌: www.upsc.gov.in

ಹುದ್ದೆಗಳ ವಿವರ:
ಜೂನಿಯರ್‌ ಟೆಕ್ನಿಕಲ್‌ ಆಫಿಸರ್‌(ಸುಗರ್‌ ಟೆಕ್ನಾಲಜಿ)-1, ಸ್ಪೆಷಲಿಸ್ಟ್‌ ಗ್ರೇಡ್‌-3(ಆಬ್ಸೆಟ್ರಿಕ್ಸ್‌ ಆಂಡ್‌ ಗೈನಕಾಲಜಿ-14, ಸ್ಪೆಷಲಿಸ್ಟ್‌ ಗ್ರೇಡ್‌ 3(ಸರ್ಜರಿ)-10, ಡೆಪ್ಯೂಟಿ ಡೈರೆಕ್ಟರ್‌ (ಮೆಕ್ಯಾನಿಕಲ್‌)-20 ಮತ್ತು ಯೂತ್‌ ಆಫೀಸರ್‌-08 ಹುದ್ದೆಗಳಿವೆ.

ಗ್ರಾಹನ ವ್ಯವಹಾರಗಳ ಸಚಿವಾಲಯದಡಿ ಬರುವ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಲ್ಲಿ 1 ಜೂನಿಯರ್‌ ಟೆಕ್ನಿಕಲ್‌ ಆಫೀಸರ್‌ ಹುದ್ದೆಯಿದೆ. ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ: 35 ವರ್ಷವಾಗಿದೆ. ವಿಜ್ಞಾನ/ಎಂಜಿನಿಯರಿಂಗ್‌ ಪದವಿ ಮತ್ತು ಸುಗರ್‌ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಲ್ಲಿ ಆಬ್ಸೆಟ್ರಿಕ್ಸ್‌ ಆ್ಯಂಡ್‌ ಗೈನಕಾಲಜಿ ವಿಭಾಗದಲ್ಲಿ 14 ಸ್ಪೆಷಲಿಸ್ಟ್‌ ಗ್ರೇಡ್‌-3 ಹುದ್ದೆಗಳಿಗೆ ಮತ್ತು ಸರ್ಜರಿ ವಿಭಾಗದಲ್ಲಿರುವ 10 ಸ್ಪೆಷಲಿಸ್ಟ್‌ ಹುದ್ದೆಗಳಿಗೆ ಎಂಬಿಬಿಎಸ್‌ ವಿದ್ಯಾರ್ಹತೆ ಬಯಸಲಾಗಿದೆ. ಗರಿಷ್ಠ ವಯೋಮಿತಿ: 40 ವರ್ಷ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಡಿ ಬರುವ ಗಣಿ ಸುರಕ್ಷತೆ ನಿರ್ದೇಶನಾಲಯದಲ್ಲಿ 20 ಡೆಪ್ಯೂಟಿ ಡೈರೆಕ್ಟರ್‌(ಮೆಕ್ಯಾನಿಕಲ್‌) ಹುದ್ದೆಗಳಿವೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷವಾಗಿದೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ನೇಮಕ ಹೇಗೆ?
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ: 25 ರೂಪಾಯಿ. ಶುಲ್ಕವನ್ನು ಎಸ್‌ಬಿಐ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಅಥವಾ ಎಸ್‌ಬಿಐ ಶಾಖೆಗಳಲ್ಲಿ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾ‌ನ್‌ ಮಾಡಿಟ್ಟುಕೊಳ್ಳಿ. ಈ ಎಲ್ಲಾ ಹುದ್ದೆಗಳಿಗೆ ಸಂಬಂಧಪಟ್ಟ ವಿಭಾಗದಲ್ಲಿ ಅನುಭವ ಇತ್ಯಾದಿ ಹಲವು ಮಾನದಂಡಗಳು ಇದ್ದು, ಪೂರ್ತಿ ಮಾಹಿತಿಯನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಧಿಸೂಚನೆಯಿಂದ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.