ಮೋದಿ ಸರ್ಕಾರದ ಹೊಸ ಯೋಜನೆಯಿಂದ ಮಾಲಿನ್ಯ ಕಡಿಮೆಯಾಗಲಿದೆ, ರಾಜ್ಯದಲ್ಲೂ ಬರಲಿವೆ ಎಲೆಕ್ಟ್ರಿಕ್ ಬಸ್-ಗಳು!!

0
268

ವಾಹನಗಳ ಹೊಗೆಯಿಂದ ಮಾಲಿನ್ಯವೂ ಹೆಚ್ಚುತ್ತಿದು ಅದನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ -ಗಳ ಬಳಕೆಯನ್ನು ಕಡಿಮೆ ಮಾಡಿ ಇಲೆಕ್ಟ್ರಾನಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಬೆಂಬಲ ನೀಡುತ್ತಿರುವುದರ ಜೊತೆಗೆ ಪ್ರತಿ 25 ಕಿ.ಮೀ ಅಂತರದಲ್ಲಿ ಇಲೆಕ್ಟ್ರಿಕ್​ ಚಾರ್ಜಿಂಗ್​ ವ್ಯವಸ್ಥೆಯನ್ನು ರೂಪಿಸಲು ಕಾರ್ಯವನ್ನು ಕೈಗೊಂಡಿದ್ದಾರೆ. ದೇಶದೆಲ್ಲೆಡೆ ಪೆಟ್ರೋಲ್​, ಡೀಸೆಲ್​, ಗ್ಯಾಸ್​ ವಾಹನಗಳ ಬಳಕೆಯಿಂದ ಹದಗೆಡುತ್ತಿರುವ ವಾತವರಣವನ್ನು ಸರಿದೂಗಿಸಲು ಉದ್ದೇಶವನ್ನು ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದೆ.

Also read: 80-90 ದಶಕಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ರಾರಾಜಿಸುತ್ತಿದೆ ಡಬಲ್ ಡೆಕ್ಕರ್ ಬಸ್-ಗಳಿಗೆ ಮತ್ತೆ ಜೀವ ಬಂದಿದೆ!!!

ದೇಶದೆಲ್ಲೆಡೆ ಇಲೆಕ್ಟ್ರಿಕ್​ ವಾಹನ?

ಎಲೆಕ್ಟ್ರಿಕಲ್ ವಾಹನಗಳ ಬಳಕೆಯ ಮಾಡಿ ಮಾಲಿನ್ಯ ತಡೆಗಟ್ಟುವ ಯೋಜನೆಯನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​, ಗ್ಯಾಸ್​ ವಾಹನಗಳನ್ನು ಮುಕ್ತಗೊಳಿಸುವ ಸಲುವಾಗಿ ರಾಜ್ಯಸಭೆಯಲ್ಲಿ ಈ ಬಗೆಗೆ ಚರ್ಚಿಸಲಾಗಿದ್ದು, ಕೇಂದ್ರ ಸಚಿವ ನಿತಿನ್​ ಗಡ್ಕರಿ ಇಲೆಕ್ಟ್ರಿಕ್​ ವಾಹನಗಳನ್ನು ಜಾರಿಗೆ ತರುವ ಬಗೆಗೆ ಉಲ್ಲೇಖಿಸಿದ್ದಾರೆ. ಸರ್ಕಾರವು ಈ ಯೋಜನೆಗೆ ಸೈ ಎಂದಿದ್ದು ಯೋಜನೆ ಕುರಿತು ಇರುವ ಮಾಹಿತಿಯಂತೆ

1. ಭಾರತ ಸರ್ಕಾರವು ಹೈಬಿಡ್ರ್ ಇಲೆಕ್ಟ್ರಿಕ್​ ಸಿಸ್ಟಂಮ್​ ಮತ್ತು ವಾಹನಗಳಿಗೆ ಇಲೆಕ್ಟ್ರಿಕ್​ ಕಿಟ್​ ಜಾರಿಗೆ ತರಲು ಮುಂದಾಗಿದೆ.
2. ವಾಹನಗಳಲ್ಲಿ Evs​ ಮೆಷಿನ್​ಗಳನ್ನು ಅಳವಡಿಸಿ ಹಸಿರು ಬಣ್ಣದಲ್ಲಿ ನಂಬರ್​ ಪ್ಲೇಟ್​
3. ಇಲೆಕ್ಟ್ರಿಕ್​ ದ್ವಿ ಚಕ್ರ ಬಳಸುವ ಸವಾರರಿಗೆ ಸರ್ಕಾರ ಬೆಂಬಲ ಸೂಚಿಸಿದ್ದು, 16 ರಿಂದ 18 ವಯೋಮಾನದವರಿಗೂ ಇಲೆಕ್ಟ್ರಿಕ್​​ ದ್ವಿ ಚಕ್ರ ವಾಹನ ಪರವಾನಿಗೆ ನೀಡಲಾಗುತ್ತದೆ ಎಂದು ಹೇಳಿದೆ.
4. ಭಾರತೀಯ ಬಾಹ್ಯಕಾಶ ಸಂಸ್ಥೆ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಲಿಥಿಯಂಅಯಾನ್ ನಿಂದ ಕೂಡಿದ ಬ್ಯಾಟರಿ ತಯಾರಿಸಿದೆ.

2>ರಾಜ್ಯದಲ್ಲೂ ಸಂಚರಲಿದೆ ಇಲೆಕ್ಟ್ರಿಕ್​ ಬಸ್:

Also read: ಕೆ.ಎಸ್.ಆರ್.ಟಿ.ಸಿ. ಬಸ್ ಬ್ರೇಕ್ ಫೇಲ್ ಆದಾಗ, ತನ್ನ ಲಾರಿಗೆ ಗುದ್ದಿಸಿ ಗುದ್ದಿಸಿಕೊಂಡು 70 ಜನರ ಜೀವ ಉಳಿಸಿದ ಲಾರಿ ಚಾಲಕನ ಬಗ್ಗೆ ಓದಲೇ ಬೇಕು..

ಕೇಂದ್ರದ ಸರ್ಕಾರವು ರಾಜ್ಯದೆಲ್ಲೆಡೆ ಇಲೆಕ್ಟ್ರಿಕ್​ ಬಸ್ ಸಂಚಾರಕ್ಕೆ ಯೋಜನೆ ಹಾಕಿಕೊಂಡದ್ದು, ಪ್ರತಿದಿನ ಬಸ್​ಗಳು 200 ಕಿ.ಮೀಗಳಷ್ಟು ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ.​ ಇಲೆಕ್ಟ್ರಿಕ್​ ಬಸ್​ಗಳ ತಯಾರಿಗಾಗಿ ಅಶೋಕ್​ ಲೆಲ್ಯಾಂಡ್​, ಗೋಲ್ಡ್​ ಸ್ಟೋನ್​ ಇನ್ಫ್ರಾಟೆಕ್​, ಟಾಟಾ ಮೋಟಾರ್ಸ್​, ಜೆಬಿಎಮ್​ ಆಟೋ, ಸೋಲರೈಸ್​, ಬಿವೈಡಿ ವಾಹನ ಉತ್ಪಾದನೆ ಕಂಪೆನಿಗಳೊಂದಿಗೆ ಕೈ ಜೋಡಿಸಿಕೊಂಡಿದೆ. ಲಕ್ನೋ, ದೆಹಲಿ, ಶಬರಿಮಲೆ, ಹೈದರಾಬಾದ್​ ನಗರಗಳಲ್ಲಿ ಮೊದಲ ಇಲೆಕ್ಟ್ರಿಕ್​ ಬಸ್​ಗಳನ್ನು ಪ್ರಾರಂಭಿಸಲು ಮುಂದಾಗಿದ್ದು ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ರಿಜಿಸ್ಟ್ರೇಶನ್, ರೋಡ್ ಟ್ಯಾಕ್ಸ್ ಇಲ್ಲ?

Also read: ದೇಶದಲ್ಲಿಯೇ ಮೊದಲ ಬಾರಿಗೆ ಹೈಟೆಕ್ ಬಸ್ ಆಂಬುಲೆನ್ಸ್ ಹೊರ ತರುತ್ತಿದೆ KSRTC, ಇದರಲ್ಲಿ ಏನೇನು ವ್ಯವಸ್ಥೆ ಇದೆ ಗೊತ್ತಾ…?

ಎಲೆಕ್ಟ್ರಿಕ್ ಕಾರಿಗೆ ಕೇಂದ್ರದ ಬಂಪರ್ ಗಿಫ್ಟ್ ನೀಡಿದ್ದು ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕ ರಿಜಿಸ್ಟ್ರೇಶನ್ ಫಿ, ರಸ್ತೆ ತೆರಿಗೆ ಕಟ್ಟಬೇಕಿಲ್ಲ. ಇನ್ನು ಚಾರ್ಜಿಂಗ್ ಕೂಡ ಉಚಿತ. ಇದು ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದೆ. FAME2 (Faster Adoption and Manufacturing of (Hybrid &) Electric Vehicles) ಜಾರಿಯಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬರೋಬ್ಬರಿ 5,000 ಕೋಟಿ ರೂಪಾಯಿ ತೆಗೆದಿರಿಸಿದೆ. ಈ ಮೂಲಕ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಿ, ಮಾಲಿನ್ಯ ತಡೆಗಟ್ಟಲು ಸರ್ಕಾರ ಮುಂದಾಗಿದೆ. FAME2 ಎರಡು ಹಂತವಾಗಿ ಜಾರಿಯಾಗುತ್ತಿದೆ. ಮೊದಲ ಹಂತದಲ್ಲಿ ಸಾರ್ವಜನಿಕ ವಾಹನಗಳಾದ ಬಸ್ ಸೇರಿದಂತೆ ಸಾರಿಗೆ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಬದಲಾಗಲಿದೆ. ಬಳಿಕ ಪ್ಯಾಸೆಂಜರ್ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಯಲಿದೆ. ಗ್ರಾಹಕರನ್ನ ಎಲೆಕ್ಟ್ರಿಕ್ ವಾಹನದತ್ತ ಸೆಳೆಯಲು ಆರಂಭದಲ್ಲಿ ಹೊಸ ಸ್ಕೀಮ್ ಜಾರಿಮಾಡಲು ಕೇಂದ್ರ ನಿರ್ಧರಿಸಿದೆ.