ರಾಜ್ಯದಲ್ಲಿ ತಲೆ ಎತ್ತಲಿದೆ ಎರಡು ವಿಮಾನ ನಿಲ್ದಾಣ!!

0
1003
ಕರ್ನಾಟಕದ ಒಂದು ಮೂಲೆಯಿಂದ ಇನ್ನೋಂದು ಮೂಲೆಗೆ ತಲುಪಲು ಒಂದು ದಿನವೇ ಹಿಡಿಯುತ್ತದೆ. ಬೆಂಗಳೂರಿನಿಂದ ಬಳ್ಳಾರಿ, ಬೀದರ್ ಹೋಗುವುದು ಅಂದರೆ ೮ ಗಂಟೆಯ ಪ್ರಯಾಣ ಆಯಾಸ ತರುತ್ತದೆ. ಅಲ್ಲದೆ ಬಸ್ ಅಥವಾ ಟ್ರೇನ್‌ಗಳಲ್ಲಿ ಸೀಟು ಲಭಿಸದೆ ಇದ್ದರೆ, ನಿಂತು ಹೋಗುವ ಯಾತನೇ ಹೇಳ ತೀರದು. ಇದನ್ನೇಲ್ಲಾ ಮನಗೊಂಡು ಕೇಂದ್ರ ಹೊಸ ಯೋಜನೆ ರೂಪಿಸಿಕೊಳ್ಳುತ್ತಿದೆ.
Image result for airport
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೇ ವೇಗವಾಗಿ ತಲುಪುವ ಸಾರಿಗೆಯಾದ ವಿಮಾನ. ದೇಶದಲ್ಲಿ ವಿಮಾನಯಾನವನ್ನು ಅಭಿವೃದ್ಧಿಮಾಡು ದೃಷ್ಠಿಯಿಂದ ಕೇಂದ್ರ ಸಚಿವಾಲಯ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲಿ ದೇಶದಲ್ಲಿ ಬಳಸಲ್ಪಡದ ೪೩ ವಿಮಾನ ನಿಲ್ದಾಣಗಳ ಬಳಕೆ ಕಾರ್ಯ ಆರಂಭಿಸಲು ನಿಲ ನಕ್ಷೆಯನ್ನು ಸಿದ್ಧ ಪಡಿಸಲಾಗಿದೆ.
Image result for airport
ಇದರ ಫಲವಾಗಿ ಕರ್ನಾಟಕದಲ್ಲಿ ಇನ್ನು ಎರಡು ಜಿಲ್ಲೆಗಳಿಗೆ ವಿಮಾನ ಹಾರಾಟದ ಸೌಲಭ್ಯ ಸಿಗುವ ಸಾಧ್ಯತೆ ಇದೆ. ಬೀದರ್ ಹಾಗೂ ಬಳ್ಳಾರಿಯ ತೋರಣಗಲ್ಲುಗಳು ಈ ಯೋಜನೆಯ ಲಾಭ ಪಡೆಯಲಿವೆ. ದೇಶದ ಒಂದು ಮೂಲೇಯಿಂದ ಇನ್ನೊಂದು ಮೂಲೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಹಾಕಿಕೊಂಡ ಈ ಯೋಜನೆಯ ಲಾಭ ದಕ್ಷಿಣ ಭಾರತಕ್ಕೆ ಹೆಚ್ಚಾಗಿ ಸಿಗಲಿದೆ.
Image result for airport
ಬೀದರ್ ವಿಮಾನ ನಿಲ್ದಾಣದಿಂದ ರಾಜ್ಯ ರಾಜಧಾನಿ, ಮಂಗಳೂರು, ಮಹಾರಾಷ್ಟ್ರದ ಪುಣೆ, ನಾಗ್ಪುರ, ಔರಂಗಬಾದ್, ವಿಜಯವಾಡ, ತಿರುಪತಿ, ವೈಜಾಗ್, ಚೆನ್ನೈ ಹಾಗೂ ಗೋವಾಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಅಲ್ಲದೆ ತೋರಣಗಲ್ ನಿಲ್ದಾಣದಿಂದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಸೇರಿದಂತೆ ರಾಜ್ಯದ ಮಂಗಳೂರು, ಬೆಳಗಾವಿಗೆ ವಿಮಾನ ಸೇವೆ ಒದಗಿಸುವ ಆಶಯ ಕ್ರೇಂದ್ರ ಸರ್ಕಾರದ್ದು.
ಸದ್ಯ ಭಾರತದಲ್ಲಿ ೭೨ ವಿಮಾನ ನಿಲ್ದಾಣಗಳಿದ್ದು, ಇನ್ನೂ ೪೩ ನಿಲ್ದಾಣಗಳು ಕಾರ್ಯವನ್ನು ಆರಂಭಿಸಿದಲ್ಲಿ ಸಂಪರ್ಕದ ಚಿತ್ರಣವೇ ಬದಲಾಗುತ್ತದೆ.