ಕಾಂಗ್ರೆಸ್-ಬಿಜೆಪಿಯ “ಡೈರಿ” ಕಾಳಗದಲ್ಲಿ ಕರ್ನಾಟಕ ಬಡವಾಯಿತು!!!

0
704

ಕಾಂಗ್ರೆಸ್ ಪಕ್ಷದ ಡೈರಿ ಬಹಿರಂಗ ಗೊಂಡ ಬೆನ್ನಲ್ಲೆ, ಬಿಜೆಪಿ ಡೈರಿ ಪುರಾಣವೂ ಜನರ ಮುಂದೆ ಕೈಪಾಳಯ ಇಟ್ಟಿದೆ. ರಾಜಕೀಯ ಪಕ್ಷಗಳ ಕಿತ್ತಾಟ ಸದ್ಯಕ್ಕೆ ಜನರಿಗೆ ಹಾಸ್ಯದ ವಸ್ತುವಾಗಿದೆ.

ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿದ ಬಗ್ಗೆ ಕೆಲ ದಿನಗಳ ಹಿಂದೆ ರಾಷ್ಟ್ರೀಯ ವಾಹಿನಿ ವರದಿಮಾಡಿತ್ತು. ಇದು ದೇಶದಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಶನಿವಾರ ಕಾಂಗ್ರೆಸ್ ಪಕ್ಷ ಬಿಜೆಪಿ ಒಳಮರ್ಮವನ್ನು ಬಿಡುಗಡೆ ಮಾಡಿದೆ. ೨೦೧೩ರಲ್ಲಿ ಲೆಹರ್ ಸಿಂಗ್ ಮಾಜಿ ಉಪ ಪ್ರಧಾನಿ ಅಡ್ವಾಣಿಅವರಿಗೆ ಬರೆದ ಪತ್ರವನ್ನು ಕೈ ಶಾಸಕರು ಬಿಡುಗಡೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್ ಸುದ್ದಿಗೋಷ್ಟಿ ನಡೆಸಿ, ಲೆಹರ್ಸಿಂಗ್ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ಸಿಕ್ಕ ಡೈರಿ ಎಂದು ಎಲ್ಲರ ಸಮ್ಮುಖದಲ್ಲಿಬಹಿರಂಗ ಪಡಿಸಿದರು.

Image result for dinesh gundu rao

ಕಾಂಗ್ರೆಸ್ ಪಕ್ಷದ ಡೈರಿಯಲ್ಲಿದ್ದ ಸತ್ಯಾಸತ್ಯತೆಗಳೇ ಈ ಡೈರಿಯಲ್ಲೂ ಇವೆ ಆದರೆ, ಈ ಡೈರಿಯಲ್ಲಿಕೆಲವು ನಾಯಕರ ಹಸ್ತಾಕ್ಷರ ಇದ್ದುಎಲ್ಲರ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿದೆ.

೨೦೧೩ರಲ್ಲಿ ಲೆಹರ್ ಸಿಂಗ್ ಅವರು ಎಲ್‌ಕೆ ಅಡ್ವಾಣಿ ಬರೆದ ಪತ್ರದ ಪತ್ರಿ ಬಿಡುಗಡೆಯಾಗಿದ್ದು,ಬಿಎಸ್‌ವೈ ನೇತೃತ್ವದ ಪಕ್ಷ ಅಧಿಕಾರಕ್ಕೆ ಬರಬೇಕಿದ್ದರೆ ದುಡ್ಡು ಎಲ್ಲಿಂದ ಬಂತು ಎಂದು ನೀವೇಕಕೇಳಲಿಲ್ಲ ಎಂದು ಸಿಂಗ್ ಅಡ್ವಾಣಿರಿಗೆ ಪ್ರಶ್ನಿಸಿದ್ದಾರೆ. ಅಲ್ಲದೆ ಅಡ್ವಾಣಿ ಅವರ ಯಾತ್ರೆಗೆ ಹಣಖರ್ಚು ಮಾಡಿರುವ ಬಗ್ಗೆ ಗುಂಡೂರಾವ್ ಪ್ರಶ್ನೆಸಿದ್ದಾರೆ.

Image result for advani and yeddyurappa

ಈ ಬಗ್ಗೆ ಮಾಹಿತಿ ತುಟಿ ಬಿಚ್ಚಿರುವ ಬಿಜೆಪಿ ನಾಯಕರು ಇದು ನಕಲಿ ದಾಖಲೆ ಎಂದು ತಿಳಿಸಿದ್ದಾರೆ.ಅಲ್ಲದೆ ಬೆಂಗಳೂರು ಪೊಲೀಸ್ ಆಯುಕ್ತರಲ್ಲಿ ದೂರು ದಾಖಲಿಸಿದ್ದಾರೆ. ಸಾಮಾಜಿಕಜಾಲತಾಣಗಳಲ್ಲಿ ಓಡಾಡುತ್ತಿದ್ದ ಈ ಡೈರಿಯ ಪ್ರತಿಯಲ್ಲಿ ಅಮಿತ್ ಷಾ, ನರೇಂದ್ರ ಮೋದಿ,ಮುರುಳಿಧರರಾವ್, ಯಡಿಯೂರಪ್ಪ ಅವರನ್ನು ಸೂಚಿಸುವಂತಹ ಇನಿಶಿಯಲ್​’ಗಳನ್ನುನಮೂದಿಸಲಾಗಿದೆ.