ಕರ್ನಾಟಕಕ್ಕೆ ರಾಷ್ಟೀಯ ಪಕ್ಷಗಳ ಕೊಡುಗೆ?? ಪ್ರಾದೇಶಿಕ ಪಕ್ಷದಿಂದ ಪರಿಹಾರ ಸಿಗುತ್ತಾ??

0
742
ದೇಶ ರಾಜಕಾರಣದಲ್ಲಿ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಮಾತ್ರ ಸ್ಥಳೀಯ ಪಕ್ಷಗಳ ಪ್ರಾಬಲ್ಯ ಬಲಾಡ್ಯವಾಗಿದೆ. ಈ ಪಕ್ಷಗಳು ದೇಶದ ರಾಜಕೀಯ ಚಿತ್ರವಣವನ್ನೇ ಬುಡಮೇಲು ಮಾಡಿರುವ ಉದಾಹರಣೆಗಳು ಇವೆ. ತಮಿಳುನಾಡಿನಲ್ಲೂ ಸ್ಥಳೀಯ ಪಕ್ಷಗಳ ಅಬ್ಬರ ಜೋರು. ಇದೇ ನಮ್ಮ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳತ್ತ ಜನರ ಮನಸ್ಸು ಹೆಚ್ಚು.
ದ್ರಾವಿಡ ಪಕ್ಷಗಳ ಭರಾಟೆ ನೆರೆಯ ತಮಿಳುನಾಡಿನಲ್ಲಿ ಹೆಚ್ಚು. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯ ಗದ್ದುಗೆಗಾಗಿ ಫೈಟ್ ನಡೆಯುತ್ತದೆ. ತಮಿಳುನಾಡಿನ ರಾಜಕೀಯ ಇತಿಹಾಸವನ್ನು ನೋಡಿದರೆ, ಅಲ್ಲಿ ಸಂಚಲನವನ್ನು ಮೂಡಿಸಿದವರು ಚಿತ್ರರಂಗದಲ್ಲಿ ಹೆಸರು ಮಾಡಿದವರು. ನಟನಾಗಿ ಹೆಸರು ಮಾಡಿದ್ದ ಎಂ.ಜಿ.ಆರ್ ತಮ್ಮ ಕ್ಷಮತೆಯ ಬಲದಿಂದ ರಾಜ್ಯವನ್ನು ಆಳಿ ಸೈ ಎನಿಸಿಕೊಂಡರೆ, ಇದೇ ಹಿನ್ನೆಲೆಯನ್ನು ಹೊಂದಿರುವ ಕರುಣಾನಿಧಿ ಸಹ ತಮಿಳುನಾಡಿನ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದವರು. ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳು ಸಹ ಸ್ಥಳೀಯ ಪಕ್ಷಗಳೊಡನೆ ಕೈ ಜೋಡಿಸುತ್ತವೆ. ಅಲ್ಲದೆ ಅವರೊಂದಿಗೆ ರಾಜಿ ಮಾಡಿಕೊಳ್ಳುತ್ತವೆ. ಜನ ಮಾನಸದಲ್ಲಿ ಹೆಸರು ಮಾಡಿ ರಾಜಕೀಯಕ್ಕೆ ಎಂಟ್ರಿ ನೀಡಿದವರೇ ತಮಿಳುನಾಡಿನ ಜನರಿಗೆ ಅಚ್ಚು ಮೆಚ್ಚು. ಇದೇ ದಾರಿಯಲ್ಲಿ ಬಂದ ಇನ್ನೋರ್ವ ದಿಟ್ಟೆ ಜೆ.ಜಯಲಲಿತಾ.
ಕರ್ನಾಟಕದ ರಾಜಕೀಯ ಚಿತ್ರಣ ಭಿನ್ನವಾಗಿದೆ. ಇಲ್ಲಿ ನಾಯಕರು ಹಾಗೂ ಪಕ್ಷಗಳಿಗೆ ಜನ ಮಣೆ ಹಾಕುತ್ತಾರೆ. ಅಲ್ಲದೆ ತಮ್ಮ ಸಮಸ್ಯೆಗಳ ಪರ ಧ್ವನಿ ಎತ್ತುವ ನಾಯಕನಿಗೆ ಜೈ ಎನ್ನುತ್ತಾರೆ. ಜನರ ನಾಡಿ ಮಿಡಿತ, ಅವರ ನೋವಗಳನ್ನು ಅರಿತ ಅದೇಷ್ಟೋ ಧಿಮಂತ ರಾಜಕಾರಣಿಗಳು ರಾಜ್ಯವನ್ನು ಆಳಿದ್ದಾರೆ. ಸ್ಥಳೀಯ ಪಕ್ಷಗಳು ನಮ್ಮ ರಾಜ್ಯದಲ್ಲಿ ಅಬ್ಬರ ನಡೆಸಿವೆ. ಆದರೆ ನಮ್ಮ ರಾಜ್ಯದ ಮತದಾರ, ಪ್ರಚಲಿತ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವೋಟ್ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ಪಕ್ಷದಿಂದ ಬೇರ ಪಟ್ಟು ತಮಿಳುನಾಡಿನಲ್ಲಿ ಡಿ.ಎಂ.ಕೆ ಹಾಗೂ ಎ.ಐ.ಎ.ಡಿ.ಎಂ.ಕೆ ಪಕ್ಷಗಳು ತಲೆದೂರಿದವು. ಜನರ ತೊಂದರೆಗಳಿಗೆ ಸ್ಪಂದಿಸಿ, ಉತ್ತಮ ಆಡಳಿತ ನೀಡಿದ ರಾಜಕಾರಣಿಗಳನ್ನು ನಾವು ಕಾಣಬಹುದು. ತಮ್ಮ ಪ್ರಜೇಗಳ ಪರ ಧ್ವನಿ ಎತ್ತಿ, ಹಿಡಿದ ಹಠವನ್ನು ಸಾಧಿಸಿಯೇ ತೀರುವ ರಾಜಕಾರಣಿಗಳು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.
ಇನ್ನು ಕರ್ನಾಟಕಕ್ಕೆ, ನೆರೆಯ ರಾಜ್ಯಕ್ಕೆ ಸಿಕ್ಕಷ್ಟು ಸೌವಲತ್ತು ಸಿಕ್ಕಿಲ್ಲ. ರಾಷ್ಟ್ರೀಯ ಪಕ್ಷಗಳ ಮುಖಂಡರು ಕರ್ನಾಟಕದ ಕಣ್ಣಿಗೆ ಸುಣ್ಣವನ್ನು ಹಚ್ಚುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಿಡಿದ ಪಕ್ಷ ಹಾಗೂ ಕೇಂದ್ರದಲ್ಲಿ ಅಧಿಕಾರದ ಪಕ್ಷಗಳು ಬೇರೆ ಬೇರೆ ಯಾಗಿದ್ದು, ಯೋಜನೆಗಳ ಲಾಭ ನಮ್ಮ ರಾಜ್ಯಕ್ಕೆ ಅಷ್ಟಾಗಿ ಸಿಗುತ್ತಿಲ್ಲ. 
ಜಯಲಲಿತಾ ಸಾವಿನ ಬಳಿಕ ತಮಿಳುನಾಡಿನಲ್ಲಿ ಗದ್ದುಗೆಗಾಗಿ ಗುದ್ದಾಟ ನಡೆಯುತ್ತಿದೆ. ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ ಹಾಗೂ ಸಿ.ಎಂ ಪನ್ನೀರ್ ಸೆಲ್ವಂ ಅಧಿಕಾರದ ಚುಕ್ಕಾಣಿ ಹಿಡಯಲು ಕಸರತ್ತು ನಡೆಸಿದರು. ಶಶಿಕಲಾ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ನಿಲ್ಲದೆ ಇದ್ದರೂ, ಸಿ.ಎಂ  ಸ್ಥಾನಕ್ಕೆ ಕಿತ್ತಾಟ ನಡೆಸಿದರು. ಅಲ್ಲದೆ ಈ ನಿಟ್ಟಿನಲ್ಲಿ ಯಶ ಕಾಣುವ ವೇಳೆ ಕೋರ್ಟ್ ನೀಡಿದ ತೀರ್ಪು ಅವರಿಗೆ ಶಾಕ್ ನೀಡಿತು.
ಪ್ರಜೆಗಳೆ ಪ್ರಜೆಗಳಿಗೋಸ್ಕರ, ಪ್ರಜೆಗಳಿಗಾಗಿ ಎಂಬ ಧೇಯ ವಾಕ್ಯವನ್ನು ಹೊಂದಿರುವ ಭಾರತದಲ್ಲಿ ಇಂತಹ ರಾಜಕೀಯ ಚಿತ್ರಣಗಳು ಎಷ್ಟು ಸೂಕ್ತ. ಇದಕ್ಕೆಲ್ಲಾ ಪರಿಹಾರವನ್ನು ಮತದಾರರೇ ಕಂಡುಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.