ಕನ್ನಡ ಬಾವುಟ, ಕನ್ನಡಿಗರ ಸ್ವಾಭಿಮಾನ, ಕನ್ನಡಿಗರ ಕಿಚ್ಚು…

0
1468

ಕನ್ನಡ ಪರ ಹೋರಾಟಗಳು ಹುಟ್ಟಿದ್ದು ಹೇಗೆ ಅದಕ್ಕೂ ಮುನ್ನ ಸ್ವಲ್ಪ ಇತಿಹಾಸವನ್ನು ತಿಳಿಯೋಣ

participants_of_the_first_kannada_sahitya_parishat_bangalore_1915

ಕರ್ನಾಟಕ ಏಕೀಕರಣ ಹೋರಾಟ

1895 ಕರ್ನಾಟಕದ ಕುಲ ಪುರೋಹಿತ ಎಂದೇ ಕರೆಯಲ್ಪಡುವ ಆಲೂರು ವೆಂಕಟರಾಯರು ಮೊದಲು ಭಾಷಾವಾರು ಪ್ರಾಂತ್ಯಗಳ ಬಗ್ಗೆ ಆಲೋಚನೆ ಮಾಡುತ್ತಾರೆ ಅಂದು ಇಂದಿನ ಕರ್ನಾಟಕದ ಭಾಗಗಳು ಹಂಚಿ ಹೋಗಿರುತ್ತವೆ, ಕೆಲ ಪ್ರಾಂತ್ಯಗಳು ಹೈದರಾಬಾದ್ ನಿಜಾಮರ ಕೈಯಲ್ಲಿ , ಮದ್ರಾಸಿಗರ ಕೈಯಲ್ಲಿ , ಕೊಡಗು ,ಮಂಗಳೂರು ,ದಕ್ಷಿಣ ಕನ್ನಡ ,ಬಳ್ಳಾರಿ ಪ್ರಾಂತ್ಯಗಳು ತಮಿಳರ ಆಡಳಿತದಲ್ಲಿತ್ತು; ಮಹಾರಾಷ್ಟ್ರದಲ್ಲೂ ಕರ್ನಾಟಕದ ಅನೇಕ ಜಿಲ್ಲೆಗಳು ಸೇರಿದ್ದವು.

  • 1956 ಕರ್ನಾಟಕದ ಏಕೀಕರಣದ ಚಳುವಳಿ ಶಿಪ್ರ ಗತಿಯಲ್ಲಿ ಶುರುವಾಗಿರುತ್ತದೆ .
  • 1954-1955 ರಲ್ಲಿ ಹತ್ತು ಜಿಲ್ಲೆಗಳು ಅಖಂಡ ಕರ್ನಾಟಕದ ಭೂಪಟಕ್ಕೆ ಸೇರ್ಪಡೆಗೊಂಡಿತು.
  • 1956 ರ ಹೊತ್ತಿಗೆ ಒಟ್ಟು 19 ಜಿಲ್ಲೆಗಳು ಆಗುತ್ತವೆ.
  • ಈಗ ಸದರಿ ಕರ್ನಾಟಕದಲ್ಲಿ ೩೦ ಜಿಲ್ಲೆಗಳಿವೆ.

karnataka_1956_reorg-svg

ಕನ್ನಡ ಪರ ಹೋರಾಟಗಳ ಹುಟ್ಟು

03

ಒಂದು ಕಾಲದಲ್ಲಿ ಬ್ರಿಟಿಷ್ ಸೈನ್ಯದ ತುಕಡಿಗಳಿದ್ದ ಬೆಂಗಳೂರಿನ ದಂಡು ಪ್ರದೇಶ, ಇಲ್ಲಿ ಕೂಲಿ ಕೆಲಸ ಮಾಡಲೆಂದು ಬಂದು ನೆಲೆಸಿದ ಹೊರರಾಜ್ಯದ ಜನರು ಅದರಲ್ಲೂ ಮುಖ್ಯವಾಗಿ 90 %ನಷ್ಟು ತಮಿಳರು ಮುಂದೆ ಅದೇ ಬ್ರಿಟಿಷ್ ಸೈನ್ಯದ ತುಕಡಿಗಳಿದ್ದ ಸ್ಥಳಗಳಾದ ಹಲಸೂರು ,ಜೋಗಿಪಾಳ್ಯ ಮುಂತಾದ ಸ್ಥಳಗಳಲ್ಲಿ ಶಾಶ್ವತವಾಗಿ ನೆಲೆಸಲು ಶುರು ಮಾಡುತ್ತಾರೆ .
ಕನ್ನಡ ಚಿತ್ರಗಳು ಬೆಂಗಳೂರಿನಲ್ಲಿ ಎಲ್ಲೂ ತೆರೆಗೆ ಬರುತ್ತಿರರಿಲ್ಲ , ಕನ್ನಡ ನಟ ನಟಿಯರನ್ನು ತೀವ್ರವಾಗಿ ಹೀಯಾಳಿಸುವ ಪ್ರಕ್ರಿಯೆಯು ಶುರುವಾಗಿರುತ್ತದೆ. ದಿನೇ ದಿನೇ ತಮಿಳರು ಸ್ಥಳೀಯರ ಮೇಲೆ ತಮ್ಮ ಪ್ರಾಬಲ್ಯ ತೋರಲು ಶುರು ಮಾಡುತ್ತಾರೆ .
ಈ ವಿಷಯ ಒಂದು ದಿನ ಮೂಲ ಕನ್ನಡಿಗರಿಗೆ ತೊಂದರೆಯಾಗಬಹುದೆಂದು ಮನಗೊಂಡ ಉತ್ಸಾಹಿ ಕನ್ನಡ ಯುವಕರಾದ ಕೋಣಂದೂರು ಲಿಂಗಪ್ಪನವರು ಬಹಳ ಚಿಂತೆಗೆ ಒಳಗಾದರು . ಕರ್ನಾಟಕದ ಭಾಗವೇ ಆದ ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿಯನ್ನು , ಕನ್ನಡ ಚಿತ್ರಗಳಿಗೆ ಮತ್ತು ಕನ್ನಡ ಸಂಸ್ಕೃತಿಗೆ ಒಂದು ಬೆಲೆ ಬರಬೇಕೆಂದು ಉಪಾಯ ಮಾಡಿ ಕನ್ನಡದ ಪ್ರಮುಖ ಚಿತ್ರರಂಗದವರನ್ನೆಲ್ಲ ಸೇರಿಸಿ ‘ಕನ್ನಡ ಕಲಾವಿದರ ಸಂಘ’ ಮದ್ರಾಸಿನಲ್ಲಿ ಶುರು ಮಾಡುತ್ತಾರೆ ಈ ತಂಡದಲ್ಲಿ ಡಾ ರಾಜಕುಮಾರ್ , ಉದಯ್ ಕುಮಾರ್, ಜಿ.ವಿ.ಅಯ್ಯರ್ ಇನ್ನೂ ಅನೇಕ ಕನ್ನಡ ಕಲಾವಿದರು ಸೇರಿ 1958 ರಲ್ಲಿ ಚಿತ್ರ ಕಲಾವಿದರ ತಂಡ ‘ರಣಧೀರ ಕಂಠೀರವ’ ಚಿತ್ರ ತಯಾರು ಮಾಡುತ್ತಾರೆ, ಆದರೆ ಮತ್ತದೇ ಥಿಯೇಟರ್ ಸಮಸ್ಯೆ ಉಂಟಾಗುತ್ತದೆ. ಆಗ ಕನ್ನಡ ಮನಸ್ಸುಗಳಾದ ಅ.ನ . ಕೃಷ್ಣರಾಯರು ,ಬೀಚಿ, ನಾಡಿಗೇರ್ ಕೃಷ್ಣ ರಾಯರು ,ಮಾ. ರಾಮ ಮೂರ್ತಿಗಳು  ಇವರ ಸತತ ಪ್ರಯತ್ನದಿಂದ ಬೆಂಗಳೂರಿನ ಹಿಮಾಲಯ ಹಾಗೂ ಭಾರತ್ ಚಿತ್ರ ಮಂದಿರಗಳಲ್ಲಿ ‘ರಣಧೀರ ಕಂಠೀರವ’ ಪ್ರದರ್ಶನೆಗೊಳ್ಳುತ್ತದೆ .
ಹೀಗೆ ನಡೆದ ಹೋರಾಟ ಮುಂದೆ ಅ.ನ . ಕೃಷ್ಣರಾಯರ ನೇತೃತ್ವದಲ್ಲಿ ಯುವಜನ ಸಭಾ ಸಂಘದ ಹುಟ್ಟಿಗೆ ಕಾರಣವಾಗುತ್ತದೆ ಸತತ 3-4 ವರ್ಷಗಳು ಬಹಳ ಕಷ್ಟದಿಂದ ಅ.ನ ಕೃರವರು ಸಂಘಟಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ.

ಕನ್ನಡ ಪರ ಚಳುವಳಿ ಕ್ರಾಂತಿ ಮಾರ್ಗ

members-of-kannada-chaluvali-vatal-paksha-led-by-97400

ಚಾಮರಾಜಪೇಟೆಯ ಫೋರ್ಟ್ ಹೈಸ್ಕೂಲ್ ಮೈದಾನದಲ್ಲಿ ಬಹಳಷ್ಟು ವರ್ಷಗಳಿಂದ ರಾಮೋತ್ಸವ ನಡೆಯುತ್ತಿರುತ್ತದೆ. ಪ್ರತಿ ವರ್ಷ ತಮಿಳು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುತ್ತವೆ ಒಂದಾದರು ಕನ್ನಡ ಕಾರ್ಯಕ್ರಮ ಇರುವುದಿಲ್ಲ, ಇದರಿಂದ ರೋಸಿಹೋದ 50 ಜನರ ಕನ್ನಡಿಗರ ಗುಂಪು ಮೇ 28, 1962 ರಲ್ಲಿ ಇಂದಿನ ಮಿಂಟೋ ಆಸ್ಪತ್ರೆಯಿಂದ ಫೋರ್ಟ್ ಹೈಸ್ಕೂಲ್ ಮೈದಾನದವರೆಗೂ ಕನ್ನಡ ಪರ ಘೋಷಣೆಯನ್ನು ಕೂಗುತ್ತ ಮೆರವಣಿಗೆ ಹೊರಡುತ್ತಾರೆ ಈ ಸಂದರ್ಭದಲ್ಲಿ ಲಾಠಿಚಾರ್ಜ್ ನಡೆಯುತ್ತದೆ ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರಾದ ಬೇನಿ ಈಶ್ವರಪ್ಪನವರು ರಾಮೋತ್ಸವ ನಡೆಯುತ್ತಿದ್ದ ಸಮಯದಲ್ಲಿ ಅಲ್ಲೇ ಇದ್ದ ತೆಂಗಿನಗರಿ ಚಪ್ಪರಕ್ಕೆ ಬೆಂಕಿ ಹಚ್ಚಿಯೇ ಬಿಡುತ್ತಾರೆ .ಅಷ್ಟೂ ದಿನ ಶಾಂತಚಿತ್ತದಲ್ಲಿ ನಡೆಯುತ್ತಿದ್ದ ಕನ್ನಡ ಹೋರಾಟಗಳು ಕ್ರಾಂತಿ ರೂಪಕ್ಕೆ ತಿರುಗುತ್ತವೆ ನಾವು ಶಾಂತಿಗೂ ಸಿದ್ದ ಸಮರಕ್ಕೂ ಬದ್ದ ಎಂಬ ಘೋಷ ವಾಕ್ಯಗಳು ಮೊಳಗುತ್ತವೆ.
ಅಲ್ಲಿಯವರೆಗೂ ಎಲ್ಲವು ಇದ್ದು ಕಳೆದು ಕೊಂಡಂತೆ ಇದ್ದ ಸಾಮಾನ್ಯ ಕನ್ನಡಿಗ ಈ ಪ್ರತಿಭಟನಕಾರರ ಮೂಲಕ ತನಗೆ ಆದ ,ಆಗುತ್ತಿರುವ ಅನ್ಯಾಯದ ಅರಿವು ಮೂಡುತ್ತದೆ , ಇದು ಎಲ್ಲೆಡೆ ಕನ್ನಡ ಬೇಕು ಬೇರೆ ರಾಜ್ಯದವರ ದಾಸ್ಯ ಸಾಕು ಎಂಬ ಚಳುವಳಿಗೆ ನಾಂದಿಯಾಗುತ್ತದೆ ಈ ಹೊತ್ತಿಗಾಗಲೇ ಶಾಂತ ಮನೋಭಾವದ ಅ.ನ .ಕೃ ರವರ ಹೋರಾಟಗಳು ಇತ್ತು.

ಕಾಂಚಿತಲೈವನ್ ಎಂಬ ತಮಿಳು ಚಿತ್ರದಲ್ಲಿ ನಮ್ಮ ಇಮ್ಮಡಿ ಪುಲಿಕೆಶಿಯನ್ನು ತೀರ ಕೆಟ್ಟದಾಗಿ ಚಿತ್ರಿಸಿದ್ದರು, ಇದರಿಂದ ಕುಪಿತಗೊಂಡ ಕನ್ನಡಿಗರು ಆ ಚಿತ್ರವನ್ನು ಬಹಿಷ್ಕಾರ ಹಾಕುತ್ತಾರೆ, ಆಗ ಕೆರಳಿನಿಂತ ವಾಟಾಳ್ ನಾಗರಾಜ್ ತಮ್ಮ ಸಂಗಡಿಗರೊಂದಿಗೆ ಕ್ರಾಂತಿಕಾರಿ ಚಳುವಳಿ ಪ್ರಾರಂಭ ಮಾಡಿದರು.

ಹುಟ್ಟಿತು ಕನ್ನಡದ ಬಾವುಟ !!

01
ಅಂದಿನ ಕಾಲಕ್ಕೆ ತಮಿಳರು ಕೆಂಪು ಹಾಗೂ ಕಪ್ಪು ಮಿಶ್ರಿತ ಬಾವುಟವನ್ನು ತಮಿಳರ ಸಂಕೇತವಾಗಿ ಬಳಸುತ್ತಿದ್ದರು
ಕನ್ನಡ ಚಳುವಳಿಗಳ ರೂಪುರೇಷೆ ಸಿದ್ದಗೊಳ್ಳುತ್ತಿದ್ದಹಾಗೆ ಕನ್ನಡಿಗರಿಗೂ ಒಂದು ಬಾವುಟ ಬೇಕಾಗುತ್ತದೆ ಎಂದು ಚಿಂತಿಸಿ ರೂಪುಗೊಂಡಿದ್ದೆ ಮೇಲಿನ ಹಳದಿ ಬಾವುಟ, ಅದರ ಮಧ್ಯೆ ವಿಶಾಲ ಕರ್ನಾಟಕದ ಭೂಪಟ, ಭೂಪಟದಲ್ಲಿ ಏಳು ಕವಲುಗಳು ಉಳ್ಳ ಒಂದು ತೆನೆ ಇರುತ್ತದೆ. ಇದು ಕರ್ನಾಟಕವನ್ನು ಆಳಿದ ಏಳು ಸಾಮ್ರಾಜ್ಯವನ್ನು ಬಿಂಬಿಸುತ್ತದೆ.

cauvery-protest-pti

ನಂತರದ ದಿನಗಳಲ್ಲಿ ಬಾವುಟವು ತಯಾರಿಸಲು ಸ್ವಲ್ಪ ಕಷ್ಟವಾಗುತ್ತಿತ್ತು ಇದನ್ನು ಮನಗೊಂಡ ರಾಮಮೂರ್ತಿಗಳು ಇನ್ನೊಂದು ಬಾವುಟವನ್ನು ವಿನ್ಯಾಸಗೊಳಿಸುತ್ತಾರೆ ಅದುವೇ ಕೆಂಪು ಹಾಗೂ ಹಳದಿ ಬಾವುಟ . ಈ ಬಾವುಟದ ಸಂಕೇತ: ಹಳದಿ-> ಶಾಂತಿ; ಕೆಂಪು ->ಕ್ರಾಂತಿ;

ಈ ಬಾವುಟ ಇಂದಿಗೂ ಪ್ರಸ್ತುತ ಕನ್ನಡಿಗರ ಪ್ರೀತಿ ಇದು !!
ಈ ಬಾವುಟ ಕೆಲ ಮಾಧ್ಯಮಗಳು ಚಿತ್ರಿಸುವಹಾಗೆ

16f87540-9658-403c-9039-d78d4f326e88

ಕೇವಲ 10 ರೂ ಒಳಗೆ ಸಿಗುವಂತದಲ್ಲ ,ಇನ್ಶೂರೆನ್ಸ್ ಕವರ್ ಮೊದಲೇ ಅಲ್ಲ , ಪ್ರತಿಭಟನಾಕಾರರ ಆಯುಧವಲ್ಲ ಬದಲಾಗಿ ಕನ್ನಡಿಗರ ಹೆಮ್ಮೆ ಹಾಗೂ ಸ್ವಾಭಿಮಾನದ ಪ್ರತೀಕ .
ಶಾಂತಿ ಹಾಗೂ ಕ್ರಾಂತಿಯ ರೂಪ .
ಕನ್ನಡದ ದೊರೆಗಳು ಕದಂಬರು ಕಟ್ಟಿದ ಭುವನೇಶ್ವರಿ ತಾಯಿ ಕನ್ನಡದ ಅಧಿ ದೇವತೆಯಾಗುತ್ತಾಳೆ.
ಕುವೆಂಪುರವರ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಘೋಷವಾಕ್ಯವಾಗುತ್ತದೆ

ಮ ರಾಮಮೂರ್ತಿಗಳು ಯಾರು ?

book

ಮ ರಾಮಮೂರ್ತಿಗಳು ಕರ್ನಾಟಕ ಕಂಡ ಶ್ರೇಷ್ಠ ಕನ್ನಡ ಪರ ಹೋರಾಟಗಾರರು ಹಾಗು ಒಳ್ಳೆ ಸಾಹಿತಿ, ಅವರ ತಂದೆ ವೀರ ಕೇಸರಿ ಸೀತಾರಾಮ ಶಾಸ್ತ್ರಿ ಗಳು ಐತ್ಹಿಹಾಸಿಕ ಕಥೆಗಳನ್ನು ಬರೆಯುತ್ತಿದ್ದರು ಆದ ಕಾರಣ ರಾಮಮೂರ್ತಿಗಳು ಮನೆಯಲ್ಲಿ ಕನ್ನಡ ರಾಜರ ಕಥೆಗಳನ್ನು ಕೇಳಿ ಬೆಳಿದಿದ್ದ್ರು ಇದೆ ಮುಂದೆ ರಾಮಮೂರ್ತಿಗಳ ಕನ್ನಡ ಪರ ಅಪಾರ ಪ್ರೀತಿಗೆ ನಾಂದಿ ಆಯಿತು . ಇದಕ್ಕೆ ಮತ್ತಷ್ಟು ಇಂಬು ಕೊಟ್ಟದ್ದು ಅ.ನ ಕೃಷ್ಣರಾಯರ ಒಡನಾಟ

ಅಂದಿನ ಕನ್ನಡ ಚಳುವಳಿ ಹೋರಾಟಗಾರರಿಗೆ ಕಾಲಿಗೆ ಚಪ್ಪಲಿ ಹಾಗೂ ಹಾಕಿಕೊಳ್ಳಲು ಒಳ್ಳೆ ಬಟ್ಟೆ ಇರುತ್ತಿರಲಿಲ್ಲ, ಬಿಡಿಗಾಸು ಇರುತ್ತಿರಲಿಲ್ಲ!!
ಪ್ರತಿಭಟನೆ ಹೊಟ್ಟೆ ತುಂಬಿಸಿತೇ ? ಖಂಡಿತ ಇಲ್ಲ!!
ರಾಮ ಮೂರ್ತಿಗಳು ತಮ್ಮ ಕೈಲಿದ್ದ ಹಣವನ್ನೆಲ್ಲ ಕೂಡಿಸಿ ಕನಕಪುರ ಬಳಿ ಸ್ವಲ್ಪ ಜಾಗವನ್ನು ಕೊಂಡು ಕೊಂಡು ತೋಟವನ್ನು ಮಾಡುವ ಉದ್ದೇಶ ಹೊಂದಿದ್ದರು ನೀರಾವರಿಗಾಗಿ ಏತದ ಬಾವಿಯನ್ನು ತೊಡಿಸುತ್ತಿದ್ದ ಸಮಯದಲ್ಲಿ ಬಾವಿಯಲ್ಲಿ ನೀರು ಜಿನುಗಿತ್ತು . ಕೆಲಸಗಾರನು ಈ ವಿಷಯವನ್ನು ರಾಮಮೂರ್ತಿಗಳಿಗೆ ಮುಟ್ಟಿಸಿದ್ದನು ಕೂಡಲೇ ಶಂಕರಪುರದಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ಹೊರಟು ಬಂದ ಮೂರ್ತಿಗಳು ನೀರು ಜಿನುಗನ್ನು ನೋಡಲು ಬಾವಿಯಲ್ಲಿ ಇಳಿಯುತ್ತಾರೆ ಮೇಲೆ ಸಡಿಲವಾಗಿದ್ದ ಮಣ್ಣು ಕುಸಿದು ರಾಮ ಮೂರ್ತಿಗಳು ಹಾಗೂ ಅವರ ಇಬ್ಬರು ಗಂಡು ಮಕ್ಕಳು ಹಸುನೀಗುತ್ತಾರೆ . ಕನ್ನಡಕ್ಕಾಗಿ ಮ. ರಾಮಮೂರ್ತಿಗಳು ತಮ್ಮ ಮತ್ತು ತಮ್ಮ ಮಕ್ಕಳ ಜೀವವನ್ನೇ ಕೊಟ್ಟರು, ನಿಜವಾದ ಕನ್ನಡದ ಸೇವೆ ಅಂದರೆ ಇದೇ ಇರಬೇಕು.

0204-1

                                                                ಮಾ. ರಾಮಮೂರ್ತಿ ಮಕ್ಕಳು 

ಅ .ನ ಕೃಷ್ಣ ರಾಯರು , ರಾಮ ಮೂರ್ತಿಗಳು ಇವರ ತಂಡ ನಡೆಸಿದ ಕನ್ನಡ ಚಳುವಳಿಗಳು ತರಾಸು ಹಾಗೂ ವಾಟಾಳ್ ನಾಗರಾಜರಿಂದ ಮುಂದುವರೆದು ಬೆಂಗಳೂರಿನಲ್ಲಿ ಕನ್ನಡಿಗರು ಮತ್ತು ಕನ್ನಡ ಭಾಷೆ ತಲೆಯೆತ್ತಿ ನಿಲ್ಲುವಂತೆ ಮಾಡಿದರು.

5
ಇಂದು ಅನೇಕ ಕನ್ನಡ ಪರ ಸಂಘಟನೆಗಳು ಹುಟ್ಟಿಕೊಂಡಿವೆ ಕನ್ನಡ ಕಟ್ಟುವ ಕೆಲಸದಲ್ಲಿ ಮುಂದುವರಿಯುತ್ತಿವೆ
ಕನ್ನಡಕ್ಕೆ ಜಯವಾಗಲಿ !!.