ಕರ್ನಾಟಕದವರು ನಾವು ಯಾರಿಗೂ ಕಮ್ಮಿ ಇಲ್ಲ…

0
1115

ಕರ್ನಾಟಕದವರು ನಾವು… ಯಾರು ಕೆಮ್ಮಂಗೆ ಇಲ್ಲ, ನಾವು ಯಾರಿಗೂ ಕಮ್ಮಿ ಇಲ್ಲ…

ಏನ್ ಕೇಳುದ್ರೂ ಗುಜರಾತ್ ಅನ್ನು ಉದಾಹರಣೆ ಕೊಡುತ್ತಿದ್ದ ಕೋಡಂಗಿಗಳಿಗೆ ಉತ್ತರ ಕೊಡುವ ಕಾಲ ಸನ್ನಿಹಿತವಾಗಿದೆ ಸ್ನೇಹಿತರೆ, ಹೌದು ಬಂಡವಾಳ ಹೂಡಿಕೆಯಲ್ಲಿ ದೇಶಕ್ಕೆ ಪ್ರಥಮಸ್ಥಾನವನ್ನು ಪಡೆದುಕೊಂಡು ಬೀಗುತ್ತಿದ್ದ ಗುಜರಾತ್‍ ಈ ಬಾರಿ ತನ್ನ ಸ್ಥಾನವನ್ನು ಕಳೆದುಕೊಂಡಿದೆ.

ಮೋದಿಯವರ ಪರಿಶ್ರಮದ ಫಲವಾಗಿ ಬಹಳ ವರ್ಷಗಳಿಂದ ಗುಜರಾತ್ ದೇಶ ವಿದೇಶಗಳ ಹೂಡಿಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿತ್ತು, ಆದರೆ ಬಂಡವಾಳ ಹೂಡಿಕೆದಾರರು ಇದೀಗ ಗುಜರಾತ್‍ನ್ನು ಬಿಟ್ಟು ಕರ್ನಾಟಕದತ್ತ ಮುಖ ಮಾಡುತ್ತಿದ್ದಾರೆ. ಎಲ್ಲಾ ಕಾರಣಗಳಿಂದ ಉದ್ದಿಮೆಯನ್ನು ಬೆಳೆಸಲು ಪ್ರಾಶಸ್ತ್ಯ ಸ್ಥಳವಾಗಿರುವ ಕರ್ನಾಟಕದಲ್ಲಿ ಹೆಚ್ಚಿನ ಉದ್ಯಮಿಗಳು ಹೂಡಿಕೆ ಮಾಡಲು ಮುಂದಾಗಿರುವುದು ಒಳ್ಳೆಯ ವಿಚಾರ ಕೂಡ…

ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನವನ್ನು ಗಳಿಸಿದೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 2016ನೆ ಸಾಲಿನ ಉದ್ಯಮ ಸುಧಾರಣಾ ಕ್ರಿಯಾ ಯೋಜನೆ ಸೂಚ್ಯಂಕದ ಪ್ರಕಾರ, ಕರ್ನಾಟಕವು 2016ರ ಜನವರಿಯಿಂದ-ಜೂನ್ವರೆಗಿನ ಅವಧಿಯಲ್ಲಿ 67,757 ಕೋಟಿ ರೂ. ಬಂಡವಾಳ ಆಕರ್ಷಿಸಿದೆ. ಇದೇ ಅವಧಿಯಲ್ಲಿ ಗುಜರಾತ್ ಆಕರ್ಷಿಸಿರುವುದು 21,309 ಕೋಟಿ ರೂ. ಬಂಡವಾಳವನ್ನು. ಅಂದರೆ ಕರ್ನಾಟಕ ಆಕರ್ಷಿಸಿರುವುದು ಗುಜರಾತ್ಗಿಂತ ದುಪ್ಪಟ್ಟು ಪ್ರಮಾಣದ ಬಂಡವಾಳವನ್ನು ಎಂಬುದನ್ನು ನಾವು ತಿಳಿಯಬೇಕು ಕೂಡ…

2015ರ ಸಾಲಿನಲ್ಲಿ ಗುಜರಾತ್ 64,733 ಕೋಟಿ ರೂ. ಬಂಡವಾಳ ಆಕರ್ಷಿಸಿದ್ದು, ಈ ಬಾರಿ ಕರ್ನಾಟಕ ಈ ದಾಖಲೆಯನ್ನು ಅರ್ಧದಲ್ಲೇ ಮುರಿದಿದೆ. 2015ರ ಅವಧಿಯಲ್ಲಿ ಭಾರತವು 3.11 ಲಕ್ಷ ಕೋ. ರೂ. ಬಂಡವಾಳ ಆಕರ್ಷಣೆ ಮಾಡಿದೆ. ಈ ಪೈಕಿ ಗುಜರಾತ್ನ ಪಾಲು 64,733 ಕೋ. ರೂ. ಆದರೆ 2016-17ನೆ ಅವಧಿಯ ಜನವರಿಯಿಂದ ಜೂನ್ವರೆಗೆ 21,309 ಕೋಟಿ ರೂ. ಬಂಡವಾಳವನ್ನು ಗುಜರಾತ ಪಡೆದಿದೆ. 2015ರಲ್ಲಿ ಕರ್ನಾಟಕ ರಾಜ್ಯದ ಪಾಲು 31,668 ಕೋ. ರೂ. ಆಗಿದ್ದರೆ, 2016ರ ಜನವರಿಯಿಂದ ಜೂನ ಅವಧಿಯಲ್ಲಿ 67,757 ಕೋಟಿ ರೂ..

ಈ ಮೂಲಕ ಬಂಡವಾಳ ಆಕರ್ಷಣೆಯಲ್ಲಿ ಶೇ. 19.18ರಷ್ಟು ಬೆಳವಣಿಗೆ ಕಾಯ್ದುಕೊಂಡು, ಉದ್ಯಮಿಗಳನ್ನು ತನ್ನತ್ತ ಸೆಳೆಯುತ್ತಿರುವ ಇತರ ರಾಜ್ಯಗಳಿಗೆ ಕರ್ನಾಟಕ ಸೆಡ್ಡು ಹೊಡೆದಿದೆ. ಈ ಸುದ್ದಿ ಎಷ್ಟೋ ಜನ ನಿರುದ್ಯೋಗಿ ಯುವ ಜನತೆಗೆ ಆಶಾಕಿರಣವಾಗಿದೆ ಎಂಬುದನ್ನು ತಿಳಿಯಬೇಕು.

-ಗಿರೀಶ್ ಗೌಡ