ತವಾಂಗ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾವೇರಿ ಜಿಲ್ಲೆಯ, ಭಾರತೀಯ ಸೇನೆ ಯೋಧ ಹುತಾತ್ಮರಾಗಿದ್ದಾರೆ…!!

0
675

ನಮ್ಮ ವೀರ ಸೈನಿಕರ ತ್ಯಾಗ ಮತ್ತು ಬಲಿದಾನಗಳ ಕುರಿತು ನಾವು ಎಷ್ಟು ಹೊಗಳಿದರು ಸಾಲದು, ಇಂತಹ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದ, ಭಾರತೀಯ ಸೇನೆ ಯೋಧರೊಬ್ಬರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಹುತಾತ್ಮರಾಗಿದ್ದಾರೆ.

ಈ ಭಾರತೀಯ ಸೇನೆ ಯೋಧನ ಹೆಸರು ಚಂದ್ರಶೇಖರ್ ಎಂದು ತಿಳಿದು ಬಂದಿದೆ. ಇವರು ಕಳೆದ 16 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2002 ರಲ್ಲಿ ಮದ್ರಾಸ್ ರೆಜಿಮೆಂಟ್ ಸೆಂಟರ್ ನಲ್ಲಿ ಸೇವೆಗೆ ಸೇರಿದ್ದ ಇವರು, ಇದೆ ಜನವರಿ 29 ರಂದು ರಜೆ ಮುಗಿಸಿ ಸೇನೆಗೆ ಮರಳಿದ್ದರು.

ಚಂದ್ರಶೇಖರ ಡವಗಿ ಅವರು ಮೂಲತಃ ಕರ್ನಾಟಕದ, ಹಾವೇರಿ ಜಿಲ್ಲೆಯ, ಶಿಗ್ಗಾಂವ ತಾಲೂಕಿನ, ಮುಗಳಿ ಗ್ರಾಮದವರು. ಇವರು ಕರ್ತವ್ಯ ಮಾಡುತ್ತಿರುವಾಗ ಭಂಗಾ ಎಂ.ಎಚ್ ಎಂಬ ಪ್ರದೇಶದಲ್ಲಿ ತೀವ್ರ ಆಮ್ಲಜನಕ ಕೊರತೆಯಿಂದ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಂಜೆ ವೇಳೆಗೆ ಹುತಾತ್ಮ ಯೋಧನ ಪಾರ್ಥೀವ ಶರೀರ ಸ್ವ ಗ್ರಾಮಕ್ಕೆ ಬರುವ ನಿರೀಕ್ಷೆ ಇದ್ದು, ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇವರಿಗೆ ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಹೆಣ್ಣು ಹೆಣ್ಣುಮಕ್ಕಳಿದ್ದಾರೆ.