ಈ ಇಬ್ಬರು ಪೋಲಿಸ್ ಅಧಿಕಾರಿಗಳ ಖಡಕ್-ನಡೆಗೆ ಸಿಕ್ಕಿರೋ ಅಭಿಮಾನ ಯಾವ ಸಿನೆಮಾ ಹೀರೋಗಳಿಗೇನು ಕಡಿಮೆ ಇಲ್ಲ!!

0
1189

ಕರ್ನಾಟಕ ಪೊಲೀಸ್ ಅಂದ್ರೆ ಅದಕ್ಕೆ ಒಂದು ಮರ್ಯಾದೆ. ಏಕೆಂದ್ರೆ ಹಿಂದೆ ಖಾಕಿ ತೊಟ್ಟ ಮಹನಿಯರು ಯಾರ ಮುಲಜಿಗು ಬೀಳದೆ ಕೆಲಸ ಮಾಡ್ತಾ ಇದ್ದರು ಎಂಬ ಮಾತು ಇದೆ. ಆದರೆ, ಕಾಲ ಬದಲಾದಂತೆ ನಮ್ಮಲ್ಲೂ ಕೆಲ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯನೇ ಅಲ್ಲವೆ. ಆದ್ರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಪೊಲೀಸರ ಕಥೆ ಹಿಂದಿನ ಕಾಲವನ್ನು ಒಮ್ಮೆ ನೆನಪಿಸುತ್ತದೆ.

ಎಸ್.. ಪೊಲೀಸ್ ಅಂದ್ರೆ ಎಲ್ಲರಿಗೂ ಭಯ. ಯಾಕಪ್ಪ ಅವರ ಸಹವಾಸ ಅವರಿಂದ ನಾವು ಏಕೆ ಬಯ್ಯಿಸಿ ಕೊಳ್ಳೋಣ. ಮಾತು ಎತ್ತಿದ್ರೆ ಅವಾಚ್ಯ ಶಬ್ದಗಳು ಹಲವು ಪೊಲೀಸರ ಬಾಯಲ್ಲಿ ಬರೋದನ್ನ ನೋಡಿದ್ದೇವೆ. ಆದ್ರೆ ಈ ಪೊಲೀಸರನ್ನು ಕಂಡರೆ ಕನ್ನಡ ಜನತೆಗೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ. ಅವರೇ ರವಿ ಡಿ ಚಣ್ಣನವರ್ ಹಾಗೂ ಎಸ್ಪಿ ಅಣ್ಣಾ ಮಲೈ.

ನಾಬು ಸಹಜವಾಗಿ ನಟರಿಗೆ, ಸ್ಟಾರ್ ಆಟಗಾರರಿಗೆ ಅಭಿಮಾನಿಗಳನ್ನು ನೋಡಿದ್ದೇವೆ. ಆದ್ರೆ ಸಿನಿಮಾದಲ್ಲಿ ತೊರಿಸುವ ಹಾಗೆ ನಿಜ ಜೀವನದಲ್ಲೂ ಪೊಲೀಸರು ಕೆಲಸ ಮಾಡಿದ್ರೆ ಅವರಿಗೆಕೆ ಅಭಿಮಾನಿಗಳ ಹುಟ್ಟಿ ಕೋಳ್ಳೋದಿಲ್ಲ ಎಂಬುದಕ್ಕೆ ಇವರೆ ಸಾಕ್ಷಿ. ಇವರನ್ನು ಕಂಡ್ರೆ ಜನ ಅಭಿಮಾನದಿಂದ ಕೈ ಮುಗಿದು ಮಾತನಾಡಿಸುತ್ತಾರೆ. ಹೀಗಾಗಿಯೇ ಇವರಿಗೆ ಕನ್ನಡಿಗರು ಸಿಂಗಂ ಎಂದು ಕರೆಯೋದು..

ಈ ಸ್ಟಾರ್ ಪೊಲೀಸ್ ಆಫೀಸ್ ರಗಳು ಯಾರ ಮುಲಾಜಿಗೂ ಬಿಳೋದಿಲ್ಲ. ರಾಜಕಾರಣಿಗಳು ತಪ್ಪು ಮಾಡಿದ್ರು, ಅವರ ವಿರುದ್ಧ ಕ್ಎಮ ಕೈಗೋಳ್ಳುವ ಛಾತಿ ಹೊಂದಿದ್ದಾರೆ. ಇನ್ನು ಸಣ್ಣ ಪುಟ್ಟ ತಪ್ಪು ಮಾಡಿ ಸಿಕ್ಕಿಕೊಂಡ್ರೆ ಕರೆದು ಬುದ್ಧಿ ಹೇಳಿ ಒಳ್ಳೆಯ ಪ್ರಜೆ ಆಗುವಂತೆ ಸೂಚಿಸುತ್ತಾರೆ.

ರವಿ ಹಿನ್ನೆಲೆ: ಗದಗ ತಾಲೂಕಿನ ನೀಲಗುಂದ ಗ್ರಾಮದ ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿ ಮಗ ರವಿ. ಇವರು ಮೂಲತಃ ಕೃಷಿ ಕಾರ್ಮಿಕರ ಕುಟುಂಬಕ್ಕೆ ಸೇರಿದವರು. ತಮ್ಮ ಆರಂಭಿಕ ಶಿಕ್ಷಣವನ್ನು ನೀಲಗುಂದ ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದಾರೆ. 2008ರಲ್ಲಿ IPS ಪರೀಕ್ಷೆ ಪೂರೈಸಿದ ಸಾಧಕ. ರವಿ ಧಾರವಾಡರ ಕರ್ನಾಟಕದ ಆರ್ಟ್ಸ್​​ ಕಾಲೇಜಿನಲ್ಲಿ BA ಪದವಿ ಪಡೆದವರು. ರವಿ ಅವರು ಅರೆಕಾಲಿಕ ಕೆಲಸ ಹಾಗೂ ಶೈಕ್ಷಣಿಕ ಅಧ್ಯಯನವನ್ನು ಮುಂದುವರಿಸಿದರು. ಸಂಜೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು.