ಕನ್ನಡಿಗರ ಭಾವನೆಗಳ ಜೊತೆ ಆಟವಾಡುತಿದ್ಯಾ ರಾಜ್ಯ ಸರ್ಕಾರ?? ಅಧಿಕೃತ ಧ್ವಜ ಎಂದು ಹಳದಿ ಕೆಂಪು ಧ್ವಜವನ್ನು ಬದಲಾಯಿಸಿದ್ದೇಕೆ??

0
686

ಇನ್ನು ಮುಂದೆ ನಾಡಧ್ವಜ ಬದಲಾಗಲಿದೆಯಂತೆ. ಈಗಿರುವ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದ ಧ್ವಜವನ್ನು ಬದಲಾಯಿಸಲು ಸರ್ಕಾರ ಕೆಲದಿನಗಳ ಹಿಂದೆ ಸಮಿತಿ ರಚಿಸಿತ್ತು. ಈಗ ಆ ಸಮಿತಿ ಕೆಲ ಮಾದರಿಗಳನ್ನು ತೋರಿಸಿದೆ. ಸರ್ಕಾರ ಹೊಸ ನಾಡಧ್ವಜವನ್ನು ನೋಡಿ ಅಂತಿಮಗೊಳಿಸಲಿದೆಯಂತೆ.

ಸಿಎಂ ಸಿದ್ದರಾಮಯ್ಯ ಅವರನ್ನು ಸಮಿತಿ ಅಧ್ಯಕ್ಷರು ಸೋಮವಾರ ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ. ಇದೇ ವೇಳೆ ಕಾನೂನಾತ್ಮಕ ಅಂಶಗಳನ್ನು ವಿವರಿಸಿದರು. ಈ ವಿಷಯ ಸದ್ಯದಲ್ಲಿ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ನಂತರ ಕೇಂದ್ರದ ಒಪ್ಪಿಗೆಗಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿದ್ದೆ ಆದರೆ ನಮ್ಮ ರಾಜ್ಯ ಜಮ್ಮು– ಕಾಶ್ಮೀರ ಬಳಿಕ ಸ್ವಂತ ಧ್ವಜ ಹೊಂದಿದ ಎರಡನೇ ರಾಜ್ಯ ಆಗಲಿದೆ. ವಿಧಾನಸಭೆ ಚುನಾವಣೆ ಘೋಷಣೆ ಆಗುವುದರೊಳಗಾಗಿ ಪ್ರತ್ಯೇಕ ಧ್ವಜ ಹೊಂದುವ ಗುರಿಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ, ಇದರಿಂದ ಚುನಾವಣೆಯಲ್ಲಿ ಲಾಭವಾಗಬಹುದು ಎಂಬ ಚಿಂತನೆ ನಡೆಸಿದ್ದಾರಂತೆ.

ಇನ್ನು ಹೊಸ ಧ್ವಜ ಯಾವ ರೀತಿ ಇರಲಿದೆ ಎಂಬ ಕುತೂಹಲ ನಿಮ್ಮನ್ನು ಕಾಡುತ್ತಿರಬಹುದು. ಸರ್ಕಾರ ಸಮಿತಿ ನೀಡಿದ ಏಳೆಂಟು ಮಾದರಿಗಳನ್ನು ನೋಡಿದೆ ಅದರಲ್ಲಿ ಒಂದನ್ನು ಇನ್ನೇನು ಅಂತಿಮಗೊಳಿಸಲಿದೆ. ಹೊಸ ಧ್ವಜದ ಮೇಲ್ಭಾಗದಲ್ಲಿ ಹಳದಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಗೆ ಕೆಂಪು ಬಣ್ಣಗಳಿದ್ದು, ಬಿಳಿ ಬಣ್ಣದ ನಡುವೆ ರಾಜ್ಯ ಸರ್ಕಾರದ ಲಾಂಛನ ಹಾಕಲಾಗಿದೆ.

ಹಳದಿ-ಕೆಂಪು ಬಣ್ಣದ ಕರ್ನಾಟಕ ಬಾವುಟವನ್ನು ಬದಲಾಯಿಸುವ ಪಿತೂರಿ ನಡೆಯುತ್ತಿದೆ. ಅಲ್ಲದೇ ಈಗಿರುವ ಧ್ವಜವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೆ ನಾಡಧ್ವಜವಾಗಿ ಮುಂದುವರಿಸಬೇಕು , ಹಳದಿ-ಕೆಂಪು ಬಣ್ಣದ ಧ್ವಜಕ್ಕೆ ತನ್ನದೇ ಆದ ಮಹತ್ವವಿದೆ. ಹಾಲಿ ಇರುವ ಧ್ವಜವನ್ನು ಬದಲಿಸಲು ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.