Kannada News | Karnataka Temple History
ರಾಜಸ್ಥಾನ ರಾಜ್ಯದ ಬಿಕಾನೇರ್ ಪಟ್ಟಣದಿಂದ ಸುಮಾರು 30 ಕಿ.ಮೀ ದೂರವಿರುವ ದೇಶ್ನೋಕ್ ನಲ್ಲಿರುವ ಪುರಾಣ ಪ್ರಸಿದ್ಧ ಕ್ಷೇತ್ರ ಕರ್ಣಿ ಮಾತಾ ದೇವಾಲಯ. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿನ ವಿಶೇಷವೆಂದರೆ ಈ ದೇವಾಲಯದಲ್ಲಿ ಭಕ್ತರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಇಲಿಗಳು ನಿರ್ಭಯವಾಗಿ ಎಲ್ಲೆಂದರಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಸುಮಾರು 30,000ಕ್ಕೂ ಅಧಿಕ ಇಲಿಗಳಿವೆ ಅಂತೆ. ಈ ದೇವಾಲಯ ನಿಮಗೆ ಅಚ್ಚರಿ, ಕುತೂಹಲಗಳನ್ನು ಮೂಡಿಸುವುದಂತು ಖಂಡಿತ.
ಪೌರಾಣಿಕ ಕಥೆ
ಕರ್ಣಿ ಮಾತಾ ರಜಪೂತ್ ಮತ್ತು ಚರಣ್ ಜಾತಿಯಲ್ಲಿ ಜನಿಸಿದ ಒಬ್ಬ ಹಿಂದು ತಪಸ್ವಿಣಿಯಾಗಿದ್ದು ದುರ್ಗಾ ಮಾತೆಯ ಅವತಾರವೆಂದು ಆಕೆಯ ಭಕ್ತ ಜನರ ಅಪಾರ ನಂಬಿಕೆ. ಜೋಧಪುರ್ ಹಾಗು ಬಿಕಾನೇರ್ ರಾಜವಂಶಸ್ಥರ ಅಧಿಕೃತ ದೇವತೆಯಾಗಿರುವ ಕರಣಿ ಮಾತಾ ಸುಮಾರು 151 ವರ್ಷಗಳ ಕಾಲ ಜೀವಿಸಿದ್ದಳೆಂದು ಹೇಳಲಾಗುತ್ತದೆ. ಸ್ಥಳ ಪುರಾಣದ ಪ್ರಕಾರ, ಕಿಪೋಜಿ ಚರಣ್ ಎಂಬುವನ ಪತ್ನಿಯಾಗಿದ್ದ ಕರ್ಣಿಮಾತೆಯು ಮದುವೆಯಾನಂತರ ಸಂಸಾರ ಜೀವನದಲ್ಲಿ ನಿರಾಸಕ್ತಿ ಹೊಂದಿ ದೇಶ್ನೋಕ್ ನ ಗುಹೆಯಲ್ಲಿ ತನ್ನ ಇಷ್ಟ ದೇವರ ಧ್ಯಾನದಲ್ಲೆ ತನ್ನ ಜೀವನವನ್ನು ಕಳೆದ ಮಹಾ ಸಾಧ್ವಿ. ಕರ್ಣಿ ಮಾತಾ ಯಾವ ಗುಹೆಯಲ್ಲಿ ಧ್ಯಾನ ಮಾಡುತ್ತಿದ್ದರೋ ಆ ಗುಹೆಯಲ್ಲಿ ದೇವಿಯಶರೀರ ಜೋತಿರ್ಲಿಂಗವಾಯಿತು ಎನ್ನುವ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.
ಕರ್ಣಿ ಮಾತಾ ಪತಿಯ ಸಂಸಾರ ಜೀವನಕ್ಕೆ ಬಾಧೆ ಬರದಂತೆ ತನ್ನ ತಂಗಿಯಾದ ಬಾಯಿ ಜೊತೆ ತನ್ನ ಪತಿಯ ಎರಡನೇ ವಿವಾಹ ಮಾಡಿದಳಂತೆ. ಅವರಿಗೆ ನಾಲ್ಕು ಗಂಡುಮಕ್ಕಳಾದರು. ಪೂನಂ ರಾಜ್, ನಾಗರಾಜ್, ಸಿದ್ದರಾಜ್, ಮತ್ತು ಲಕ್ಷ್ಮಣ ರಾಜ್. ಒಂದು ದಿನ ನೀರು ಕುಡಿಯಲು ಹೋಗಿದ್ದ ಕರ್ಣಿ ಮಾತಾಳ ಕೊನಯ ಪುತ್ರ ಲಕ್ಷ್ಮಣ ರಾಜ್ ಸರೋವರದಲ್ಲಿ ಮುಳುಗಿಬಿಟ್ಟಿದ್ದನಂತೆ. ಆತನನ್ನು ಬದುಕಿಸುವಂತೆ ಕರ್ಣಿ ಮಾತಾ ಯಮರಾಜನ ಬಳಿ ಪ್ರಾರ್ಥಿಸಿದ್ದಳು. ಇದಕ್ಕೆ ಒಪ್ಪಿದ ಯಮರಾಜ, ಕರ್ಣಿ ಮಾತೆಯ ಮಗನಿಗೆ ಇಲಿಯ ರೂಪದಲ್ಲಿ ಪುನರ್ಜನ್ಮ ನೀಡಿದ್ದ ಎಂಬ ಪುರಾಣವಿದೆ. ಹಾಗಾಗಿ ಕರಣಿ ಮಾತೆಯ ವಂಶದಲ್ಲಿ ಹುಟ್ಟಿದ ಮಕ್ಕಳು ಪುನರ್ಜನ್ಮವಾಗಿ ಇಲಿಗಳಾಗಿ ಹುಟ್ಟುತ್ತಾರಂತೆ ಮತ್ತು ಈ ದೇಶ್ನೋಕ್ ದೇವಾಲಯದಲ್ಲಿ ಇರುತ್ತಾರೆಂದು ಇಲ್ಲಿನ ಭಕ್ತರ ನಂಬಿಕೆ ಇದೆ.
ಇಲ್ಲಿ ಬರುವ ಭಕ್ತರು ದೇವರಿಗೆ ಅಷ್ಟೇ ಅಲ್ಲ, ಇಲಿಗಳಿಗೂ ಹಾಲು ಮತ್ತು ಲಡ್ಡು ಗಳನ್ನೂ ಪ್ರಸಾದಕ್ಕೆಂದು ತರುತ್ತಾರೆ. ಇಲ್ಲಿ ಬರುವ ಭಕ್ತರ ಕಾಲಿನ ಮೇಲೆ ಇಲಿಗಳು ನಡೆದಾಡಿದರೆ ಅವರಿಗೆ ಒಳ್ಳೇದಾಗುತ್ತೆ ಅನ್ನುವ ನಂಬಿಕೆ ಕೂಡ ಇದೆ. ಸಾಮಾನ್ಯವಾಗಿ ಇಲ್ಲಿ ಕಪ್ಪು ಇಲಿಗಳು ಕಂಡುಬರುತ್ತವೆ ಯಾವ ಭಕ್ತರಿಗೆ ಬಿಳಿ ಇಲಿಯ ದರ್ಶನವಾಗುತ್ತದೆಯೋ ಅವರಿಗೆ ಜೀವನಪೂರ್ತಿ ಕರ್ಣಿ ಮಾತಾಳ ಆಶೀರ್ವಾದ ಲಭಿಸುತ್ತದೆ ಎಂಬ ನಂಬಿಕೆಯಿದೆ. ಆಕಸ್ಮಿಕವಾಗಿ ನಿಮ್ಮ ಕಾಲಡಿಯಲ್ಲಿ ಸಿಕ್ಕು ಇಲಿ ಮೃತಪಟ್ಟರೆ ಆ ಪಾಪಕ್ಕೆ ನೀವು ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಬೆಳ್ಳಿ ಅಥವಾ ಚಿನ್ನದ ಇಲಿಯನ್ನು ಕಾಣಿಕೆಯಾಗಿ ನೀಡಿ ಹರಕೆ ತೀರಿಸಬೇಕು. ಅನ್ನುವ ನಂಬಿಕೆ ಇದೆ.
ಕರ್ಣಿ ಮಾತಾ ದುರ್ಗಾದೇವಿಯ ಒಂದು ರೂಪ ಎನ್ನುತ್ತಾರೆ ಭಕ್ತರು. ಭಾರತದಲ್ಲಿ ಇಲಿಗಳನ್ನೂ ಪೂಜಿಸುವ ವಿಶಿಷ್ಟ ದೇವಾಲಯ ಇದು. ನಿತ್ಯ ನೂರಾರು ಭಕ್ತರು ಇಲ್ಲಿಗೆ ಬಂದು ಇಲಿಗಳ ಎಂಜಲು ಪ್ರಸಾದವನ್ನು ಸೇವಿಸಿ ಕೃತಾರ್ಥರಾಗುತ್ತಾರೆ. ಇಲ್ಲಿನ ಇನ್ನೊಂದು ಆಶ್ಚರ್ಯ ವೇನೆಂದರೆ ಈ ದೇವಸ್ಥಾನದಲ್ಲಿ ಇಲಿಗಳು ವಾಸವಾಗಿದ್ದರು ಯಾವುದೇ ರೀತಿಯ ಕೆಟ್ಟವಾಸನೆ ಬರುವುದಿಲ್ಲ. ಮತ್ತು ಇಲಿ ಮುಟ್ಟಿರುವ ಪ್ರಸಾದವನ್ನು ತಿಂದ ಭಕ್ತರಿಗೆ ಇದುವರೆಗೂ ಯಾವುದೇ ರೀತಿಯ ಅಪಾಯವಾಗಿಲ್ಲ, ಅನಾರೋಗ್ಯಕ್ಕೆ ತುತ್ತಾಗುವುದಿಲ್ಲವಂತೆ.
ಇಲ್ಲಿ ನಂಬಿಕೆಯ ನಿಜವಾದ ಸತ್ವ ಪರೀಕ್ಷೆ