ಟೆಸ್ಟ್‌ ಸರಣಿಯಲ್ಲಿ ತ್ರಿಶತಕ ಬಾರಿಸಿದ ಮೊದಲ ಕನ್ನಡಿಗ!!!

0
626

ನಿನ್ನೆ ಮೊದಲ ಇನಿಂಗ್ಸ್ ನ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದರು. ಇವತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ್ದಾರೆ.

ಚೆನ್ನೈನ ಚಿಪಾಕ್ ನಲ್ಲಿರುವ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಚೊಚ್ಚಲ ತ್ರಿಶತಕ ಸಾಧನೆ ಮಾಡಿದ್ದು, ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ನಾಯರ್ ಒಟ್ಟು 380 ಎಸೆತಗಳಲ್ಲಿ 301 ರನ್ ಸಿಡಿಸುವ ಮೂಲಕ ಈ ಸಾಧನೆ ಗೈದಿದ್ದಾರೆ.

ಕನ್ನಡಿಗರ ಮಟ್ಟಿಗೆ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ನಾಯರ್ ರವರು ಪಾತ್ರರಾಗಿದ್ದಾರೆ. ಟೀಂ ಇಂಡಿಯಾದ ವಾಲ್ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ 2004ರಲ್ಲಿ ಪಾಕಿಸ್ತಾನ ವಿರುದ್ಧ ರಾವಲ್ ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಗಳಿಸಿದ್ದ 270 ರನ್ ಗಳು ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಈ ಸಾಧನೆಯನ್ನು ಇಂದು ನಾಯರ್ ರವರು ಮೆಟ್ಟಿ ನಿಂತಿದ್ದಾರೆ. ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಎರಡನೇ ಪಂದ್ಯದಲ್ಲಿಈ ಸಾಧನೆಯನ್ನು ಮಾಡಿ ಎಲ್ಲರ ಹೊಗಳಿಕೆಗೆ ಪಾತ್ರರಾಗಿದ್ದಾರೆ.

ಕರುಣ್ ನಾಯರ್ ಗೆ ಕೆ.ಎಲ್.ರಾಹುಲ್, ಮುರಳಿ ವಿಜಯ್, ಅಶ್ವಿನ್, ಹಾಗು ಜಡೇಜಾ ತುಂಬ ಒಳ್ಳೆ ಸಾಥ್ ಕೊಟ್ಟಿದ್ದಾರೆ. ಕರುಣ್ ನಾಯರ್ ಮೊದಲ ೧೦೦ ರನ್-ಗಳನ್ನೂ ತುಂಬಾ ಜಾಗರೂಕಾಗಿ ಅಡಿ ನಂತರ ತಮ್ಮ ರನ್-ಗಳಿಕೆಯ ಗತಿಯನ್ನು ಹೆಚ್ಚಿಸಿ ಭಾರತ ತಂಡ ಉತ್ತಮ ಮುನ್ನಡೆ ಗಳಿಸುವುದಕ್ಕೆ ಸಾಧ್ಯವಾಗಿದೆ. ನಾಯರ್ ಉತ್ತಮ ಸಾಥ್ ನೀಡುತ್ತಿರುವ ರವೀಂದ್ರ ಜಡೇಜಾ ಕೂಡ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಕೊನೆಯದಾಗಿ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 759ರನ್ ಗಳಿಸಿದೆ. ಇದರಿಂದ ಭಾರತದ ಮೊತ್ತ 759ಕ್ಕೆ ಏರಿದ್ದು ಇಂಗ್ಲೆಂಡ್ ವಿರುದ್ಧ 282 ರಷ್ಟು ಮುನ್ನಡೆ ಸಾಧಿಸಿದ್ದಾರೆ.