ರಾಜ್ಯ ಸರ್ಕಾರದ ವಿರುದ್ಧ ಕೆಎಎಸ್ ಅಧಿಕಾರಿ ಸೈಕಲ್ ಪ್ರತಿಭಟನೆ ಆದ್ರೂ ಕಣ್ಣುಮುಚ್ಚಿ ಕೂತಿರುವ ಸರ್ಕಾರ..!

0
451

ಹೌದು, ನಮ್ಮ ರಾಜ್ಯಸರ್ಕಾರದ ವಿರುದ್ಧ ಸರ್ಕಾರಿ ವಾಹನ ಕೊಡದಿದ್ದಕ್ಕೆ ಕೆಎಎಸ್ ಅಧಿಕಾರಿ ಮಥಾಯಿ ಸೈಕಲ್ ಪ್ರತಿಭಟನೆ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಮಥಾಯಿ ಬೆಂಗಳೂರಿನ ರಾಜನಕುಂಟೆಯ ನಿವಾಸದಿಂದ ಎಂಎಸ್ ಬಿಲ್ಡಿಂಗ್‍ನಲ್ಲಿರುವ ಕಚೇರಿವರೆಗೂ ಸೈಕಲ್‍ನಲ್ಲೇ ಬರ್ತಿದ್ದಾರೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಮಥಾಯಿ, ಈ ಹಿಂದೆ ಐಎಎಸ್ ಅಧಿಕಾರಿಗಳಿಂದ ಕಿರುಳವಾಗ್ತಿರೋದಾಗಿ ಲೋಕಯುಕ್ತರಿಗೆ ದೂರು ನೀಡಿದ್ದರು.

ಈ ಬಗ್ಗೆ ಮಾತನಾಡಿದ ಮಥಾಯಿ, ಬಿಬಿಎಂಪಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುವಾಗ ಅಂದಿನ ಕಮಿಷನರ್ ಲಕ್ಷ್ಮಿನಾರಾಯಣ್ ಅಕ್ರಮದ ಬಗ್ಗೆ ನಾನು ವರದಿ ನೀಡಿದೆ. ಆ ಹಿನ್ನೆಲೆಯಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳು ಕರ್ತವ್ಯದಲ್ಲಿ ನನಗೆ ತೊಂದರೆ ನೀಡ್ತಿದ್ದಾರೆ. 11 ತಿಂಗಳಿಂದ ನನಗೆ ಸರ್ಕಾರಿ ವಾಹನ ನೀಡಿಲ್ಲ. ನಮ್ಮ ಮನೆಯಿಂದ ವಿಧಾನಸೌಧಕ್ಕೆ 35 ಕಿಲೋಮೀಟರ್ ಆಗುತ್ತೆ. ಬಿಬಿಎಂಪಿ ಜಾಹೀರಾತು ಹಗರಣದಲ್ಲಿ ವರದಿ ಮಾಡಿದ್ದು ತಪ್ಪಾ ಎಂದು ಅವರು ಕೇಳುತ್ತಾರೆ.

ಸಕಾಲ ಇಲಾಖೆಯಲ್ಲಿ ನಾನು ಕರ್ತವ್ಯಕ್ಕೆ ಸೇರ್ಪಡೆಯಾದಾಗ ಐಎಎಸ್ ಅಧಿಕಾರಿ ಕಲ್ಪನ ನಿಮಗೆ ತುಂಬಾ ಜನ ಶತ್ರುಗಳಿದ್ದಾರೆ ಅಂದಿದ್ರು. ಆದ್ರೆ ಇವಾಗ ಅವರೇ ನನಗೆ ತೊಂದರೆ ಕೊಡ್ತಿದ್ದಾರೆ. ನಾನು ಬರುವ ಮುಂಚೆ ನನ್ನ ಪೋಸ್ಟ್ ಗೆ ಸಕಾಲದಲ್ಲಿ ವಾಹನ ವ್ಯವಸ್ಥೆ ಇತ್ತು. ಅದನ್ನು ಕಟ್ ಮಾಡಿದ್ರು ಎಂದು ಮಥಾಯಿ ಹೇಳಿದ್ದಾರೆ.

ನೋಡಿ ರಾಜ್ಯದಲ್ಲಿರು ನಮ್ಮ ಕೆಎಎಸ್ ಅಧಿಕಾರಿಗೆ ಇಂತಹ ಗತಿ ಬಂದರೆ ಇನ್ನು ರಾಜ್ಯ ಸರ್ಕಾರ ಜನ ಸಾಮಾನ್ಯರ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡುತ್ತಾರೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.