KAS 401 ಹುದ್ದೆಗಳಿಗೆ ಅರ್ಜಿ ಅಹ್ವಾನ…!

0
831

ಕರ್ನಾಟಕ ಲೋಕಸೇವಾ ಆಯೋಗವು 401 ಕೆ.ಎ.ಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿವರಗಳು ಈ ಕೆಳಕಂಡಂತಿವೆ.

ಒಟ್ಟು ಹುದ್ದೆಗಳು:- 401

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:- 12/05/2017

ಕೊನೆಯ ದಿನಾಂಕ:- 12/06/2017

ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 13/06/2017

ಪೂರ್ವಭಾವಿ ಪರೀಕ್ಷಾ ದಿನಾಂಕ:- 20/08/2017

ಮುಖ್ಯ ಪರೀಕ್ಷಾ ದಿನಾಂಕ:- ನವೆಂಬರ್ ೨೦೧೭

ಕಳೆದ 2014ರಲ್ಲಿ 464 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಬಳಿಕ, ಮೂರು ವರ್ಷಗಳ ಕಾಲ ಯಾವುದೇ ನೇಮಕ ಪ್ರಕ್ರಿಯೆ ನಡೆದಿರಲಿಲ್ಲ. 150 ಗ್ರೂಪ್ ಎ ಹಾಗೂ 251 ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೆಪಿಎಸ್ಸಿ ವೆಬ್ಸೈಟ್ನಲ್ಲಿ ಅರ್ಜಿಯ ವಿವರ ಹಾಗೂ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದ್ದು, ಜೂ.12 ಕೊನೆಯ ದಿನವಾಗಿದೆ. ಸಾಮಾನ್ಯ ಅಭ್ಯರ್ಥಿಗಳು 300 ರೂ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 150 ರೂಗಳ ಶುಲ್ಕ ಪಾವತಿಸಲು ಜೂ.13 ಕೊನೆಯ ದಿನವಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಈ ಅಧಿಸೂಚನೆಯ ಪ್ರಾಥಮಿಕ ಪರೀಕ್ಷೆಯು ಆ.20ರಂದು ನಡೆಯಲಿದ್ದು, ಮುಖ್ಯ ಪರೀಕ್ಷೆಯು ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.