1700 ಅಕ್ರಮ ಕಸಾಯಿಖಾನೆಗಳು ಬೆಂಗಳೂರಿನಲ್ಲಿವೆ

0
758

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ನಂತರ ಕಸಾಯಿಖಾನೆಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚುವ ಧ್ವನಿ ಕೇಳಿ ಬರತೊಡಗಿದೆ.

ಗೋ ರಕ್ಷಕ್ ಸಂಘಟನೆ ಕರ್ನಾಟಕದಲ್ಲೂ ಅಕ್ರಮ ಕಸಾಯಿಖಾನೆ ಅಥವಾ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಒತ್ತಡ ಕೇಳಿ ಬಂದಿದ್ದು, ಬೆಂಗಳೂರಿನಲ್ಲಿ 1700 ಅಕ್ರಮ ಕಸಾಯಿಖಾನೆಗಳು ಇವೆ ಎಂದು ಆರೋಪಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಮಟನ್ ಮತ್ತು ಚಿಕನ್ ಮಾರಾಟ ನಡೆಯುತ್ತಿದ್ದು, ಇವುಗಳನ್ನು ತೆರವುಗೊಳಿಸುವಂತೆ ಗೋ ರಕ್ಷಕ ಸಂಘಟನೆ ಒತ್ತಾಯಿಸಿದೆ.

ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಬಿಬಿಎಂಪಿ ವಿರುದ್ಧ ಬೆಂಗಳೂರು ಹೊರ ವಲಯದ ಕನಕಪುರದ ಹಾರೋಹಳ್ಳಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿದೆ.

ಪ್ರತಿಭಟನೆಗೆ ಗೋ ಸಂರಕ್ಷಣಾ ಪ್ರಕೋಷ್ಟ ಮತ್ತು ಕರ್ನಾಟಕ ಫೆಡರೇಷನ್ ಆಫ್ ಗೋಶಾಲಾ ಮುಂತಾದ ಸಂಘಟನೆಗಳು ಕೈ ಜೋಡಿಸುತ್ತಿವೆ.

ಬೀಫ್ ಅಲ್ಲದೇ ಸುಮಾರು 1700 ಅಕ್ರಮ ಕಸಾಯಿಖಾನೆಗಳು ಬೆಂಗಳೂರಿನಲ್ಲಿವೆ. ಮಾನ್ಯತೆ ಪಡೆದ ಕಸಾಯಿಖಾನೆ ಗಳ ಸಂಖ್ಯೆ ಕೇವಲ 43 ಇವೆ. ಇದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಪ್ರಕೋಷ್ಟಾದ ಸಂಚಾಲಕ ಸುಂದರ್ ರಾಜ್ ಪೈ ತಿಳಿಸಿದ್ದಾರೆ.