ಕಾಶ್ಮೀರದಲ್ಲಿ ದೊರೆಯದ ನೆರವಿನ ಹಸ್ತ: ಹಿಮದ ನಡುವೆ ತಾಯಿಯ ಶವ ಹೊತ್ತು 10 ಗಂಟೆ ನಡೆದ ಯೋಧ!

0
506

ಹಿಮಾಲಯ ಪರ್ವತದ ತಪ್ಪಲಿನಲ್ಲಿ ಗಡಿ ಕಾಯುವ ಯೋಧ ಸ್ಥಿತಿ ಚಿಂತಾಜನಕವಾಗಿದೆ. ಅವರ ಕಷ್ಟ ಕೇಳಬೇಕಾದ ಹಿರಿಯ ಅಧಿಕಾರಿಗಳಾಗಲಿ, ಸರಕಾರವಾಗಲೇ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದೆ.

ಸೇನಾಧಿಕಾರಿಗಳ ನೆರವು ದೊರೆಯದ ಕಾರಣ ಮೃತಪಟ್ಟ ತಾಯಿಯನ್ನು ಹೆಗಲ ಮೇಲೆ ಹೊತ್ತು ಸುಮಾರು 5ರಿಂದ 6 ಇಂಚು ದಟ್ಟದ ಮಂಜಿನ ನಡುವೆ ಸುಮಾರು 10 ಗಂಟೆಗಳ ನಡೆದು ಯೋಧನೊಬ್ಬ ಸಾಗಿದ ಘಟನೆ ಬೆಳಕಿಗೆ ಬಂದಿದೆ.

ಕಾಶ್ಮೀರದ ಕುಪ್ವಾರ ಜಿಲ್ಲೆಗೆ ಸಮೀಪವಿರುವ ಕುಗ್ರಾಮವಾದ ಕಾರ್ನಹ್‍ ಜಿಲ್ಲೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ 25 ವರ್ಷದ ಮೊಹಮದ್‍ ಅಬ್ಬಾಸ್ ದಟ್ಟವಾದ ಇಬ್ಬನಿ ಕಾರಣ ಒಂದು ವಾರದಿಂದ ತಾಯಿಯ ಅಂತ್ಯ ಸಂಸ್ಕಾರಕ್ಕೆ ಕಾಯುತ್ತಿದ್ದ. ಆದರೆ ಹಿಮಪಾತ ಸೇರಿದಂತೆ ನಾನಾ ಕಾರಣಗಳಿಗೆ ಹಿರಿಯ ಅಧಿಕಾರಿಗಳಿಂದ ನೆರವು ದೊರೆಯದ ಕಾರಣ ಸುಮಾರು 50 ಕಿಲೋ ಮೀಟರ್ ದೂರದವರೆಗೆ ತಾಯಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ.

ಯೋಧ ಅಬ್ಬಾಸ್‍ಗೆ ಪಠಾಣ್‍ಕೋಟ್‍ ಬಳಿ ಕರ್ತವ್ಯ ವಹಿಸಲಾಗಿತ್ತು. ಭಾರೀ ಚಳಿ ಇರುವುದರಿಂದ ತಡೆಯಲು ಅಸಾಧ್ಯ. ನನ್ನ ಬಳಿಗೆ ಬಾ ಎಂದು ಕರೆಯಲು ದೂರವಾಣಿ ಕರೆ ಮಾಡಿದಾಗ ಜನವರಿ 28ರಂದು ತಾಯಿ ಹೃದಯಾಘಾತದಿಂದ ಮೃತಪಟ್ಟ ವಿಷಯ ತಿಳಿದಿದೆ.

ಸಂಪ್ರದಾಯದಂತೆ ಅಗ್ನಿ ಸ್ಪರ್ಶದಿಂದ ತಾಯಿಯ ಅಂತ್ಯ ಸಂಸ್ಕಾರ ನಡೆಯಬೇಕಿದ್ದು, ಹೆಲಿಕಾಫ್ಟರ್‍ ಸೇವೆ ಒದಗಿಸಿಕೊಡುವಂತೆ ಅಧಿಕಾರಿಗಳಲ್ಲಿ ಅಬ್ಬಾಸ್‍ ವಿನಂತಿಸಿದಾಗ ಹವಾಮಾನ ವೈಪರಿತ್ಯ ಕಾರಣ ನೆರವು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

ದಟ್ಟ ಇಬ್ಬನಿ ಇರುವ ಕಾರಣ ಕನಿಷ್ಟ ರಸ್ತೆಯವರೆಗಾದರೂ ತಾಯಿಯ ಶವ ತರುವ ವ್ಯವಸ್ಥೆ ಮಾಡಿಕೊಡುವಂತೆ ಕೋರಿದರೂ ಅದನ್ನು ಅಧಿಕಾರಿಗಳು ಮಾಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೂರು ದಿನಗಳ ಹೋರಾಟದ ನಂತರವೂ ಅಧಿಕಾರಿಗಳಿಂದ ಯಾವುದೇ ನೆರವು ದೊರೆಯದ ಕಾರಣ ಅಬ್ಬಾಸ್‍, ಸಂಬಂಧಿಕರ ನೆರವಿನೊಂದಿಗೆ `ತಳ್ಳುವ ಗಾಡಿ’ ನಿರ್ಮಿಸಿದ್ದಾನೆ. ಈ ಗಾಡಿಯನ್ನು ಹೆಗಲ ಮೇಲೆ ಇಟ್ಟುಕೊಟ್ಟು ಇಬ್ಬನಿಯ ನಡುವೆ ಸುಮಾರು 50 ಕಿಲೋ ಮೀಟರ್‍ ವರೆಗೂ ತಳ್ಳಿಕೊಂಡು ಬಂದಿದ್ದಾನೆ.

ಸಮುದ್ರ ಮಟ್ಟದಿಂದ 3200 ಅಡಿ ಎತ್ತರದಲ್ಲಿ ಚೌಕಿದಾಲ್‍ ಕರ್ನಾಹ್‍ ರಸ್ತೆವರೆಗೆ 52 ಕಿ.ಮೀ. ದೂರ ಇದ್ದು, ಅಷ್ಟು ದೂರವನ್ನು ಮೊಣಕಾಲಿನವರೆಗೂ ಆವರಿಸಿದ್ದ ದಟ್ಟ ಮಂಜಿನ ನಡುವೆ ಹೊತ್ತು ಸಾಗಿದ್ದಾನೆ.

ನನ್ನ ತಾಯಿಗೆ ಕನಿಷ್ಠ ಸೌಲಭ್ಯದೊಂದಿಗೆ ಅಂತ್ಯ ಸಂಸ್ಕಾರ ಮಾಡಲು ಆಗಲಿಲ್ಲ ಎಂಬ ನೋವು ಕಾಡುತ್ತಿದೆ. ಹೆಲಿಕಾಫ್ಟರ್‍ ಸೇವೆಗಾಗಿ ಕಾಯುತ್ತಲೇ ಇದ್ದೆವು. ಪದೇಪದೆ ದೂರವಾಣಿ ಕರೆ ಮಾಡುತ್ತಿದ್ದೆವು. ಆದರೆ ಈಗ ಬರುತ್ತೆ. ಆಗ ಬರುತ್ತೆ ಅಂತಲೇ ಹೇಳುತ್ತಿದ್ದರು. ಮೂರು ದಿನ ಕಾದರೂ ಏನೂ ಆಗಲಿಲ್ಲ. ಕೊನೆಗೂ ಅಂತ್ಯ ಸಂಸ್ಕಾರ ಮಾಡುತ್ತಿವೋ ಇಲ್ಲವೋ ಎಂಬ ಭಯ ಕಾಡತೊಡಗಿತು ಎಂದು ಅಬ್ಬಾಸ್ ಘಟನೆಯನ್ನು ವಿವರಿಸಿದ್ದಾನೆ.