ಪಂದ್ಯಕ್ಕೆ ಮುಂಚೆ ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟಿಗರು!!

0
689

ಕ್ರಿಕೆಟ್ ಎಂಬುವುದು ನಮ್ಮ ದೇಶದಲ್ಲಿ ಧರ್ಮವಾಗಿದೆ. ಕ್ರಿಕೆಟ್ ಆಟಗಾರರಿಗೆ ದೇವರ ಸ್ಥಾನವನ್ನು ಅಭಿಮಾನಿಗಳು ನೀಡಿದ್ದಾರೆ. ಆದರೆ ಕೆಲವು ಘಟನೆಗಳು ಅಭಿಮಾನಿಗಳಿಗೆ ನೋವು ತರಿಸುತ್ತವೆ. ಇತ್ತೀಚೀಗೆ ಕಾಶ್ಮೀರದಲ್ಲಿ ನಡೆದ ಒಂದು ಘಟನೆ ಕ್ರಿಕೆಟ್ ಪ್ರೀಯರನ್ನು ಕೆರಳಿಸಿದೆ.

ಕಾಶ್ಮಿರ್ ರಾಜ್ಯದಲ್ಲಿ ಒಂದು ಕ್ಲಬ್ ಪಾಕಿಸ್ತಾನ ಕ್ರಿಕೆಟ್ ತಂಡದ ಜೆಸಿ‍್ ಹಾಕಿಕೊಂಡು ಮೈದಾನಕ್ಕೆ ಇಳಿದ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ದೃಶ್ಯದಲ್ಲಿ ಪಂದ್ಯಕ್ಕೂ ಮುನ್ನ ಪಾಕ್ ರಾಷ್ಟ್ರ ಗೀತೆಯನ್ನು ಹಾಡಲಾಗಿದೆ.

ಏಪ್ರಿಲ್ 2ರಂದು ವ್ಯಾಲಿ ಪ್ಲೈಫೀಲ್ಡ್ ನಲ್ಲಿ ನಡೆದ ಟೂರ್ನಿಯಲ್ಲಿ ಬಾಬಾ ಉದ್ ದರಯಾನ್ ತಂಡ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡದ ಹಸಿರು ಬಣ್ಣದ ಜೆರ್ಸಿ‍್ ತೊಟ್ಟಿದೆ. ಅಲ್ಲದೆ ಎದುರಾಳಿ ಆಟಗಾರರು ಬಿಳಿ ಬಣ್ಣದ ಉಡುಪು ತೊಟ್ಟಿದ್ದಾರೆ. ಅಲ್ಲದೆ ಪಂದ್ಯಕ್ಕೂ ಪಾಕ್ ರಾಷ್ಟ್ರಗೀತೆ ಹಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಆಟಗಾರರನ್ನು ಕೇಳಿದಾಗ ನಮ್ಮ ತಂಡದ ವಿಭಿನ್ನವಾಗಿ ಕಾಣಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ನಾವು ಯಾವುದೇ ವಿಷಯವನ್ನು ಮರೆತಿಲ್ಲ. ಈ ಬಣ್ಣದ ಉಡುಪು ಹಾಗೂ ಗೀತೆಯನ್ನು ಜನರನ್ನು ಸೆಳೆಯಲು ಬಳಸಲಾಗಿದೆ.

ವಿವಾದಿತ ಪ್ರದೇಶದಲ್ಲಿ ಹೀಗೆ ಪಾಕ್ ರಾಷ್ಟ್ರಗೀತೆಯನ್ನು ಹಾಡಿದ ಬಗ್ಗೆ ಕೇಳಿದಾಗ, ನಮಗೆ ಕಾಶ್ಮೀರ್ ನಾಡೀನ ಮಣ್ಣಿನ ಬಗ್ಗೆ ಅಭಿಮಾನವಿದೆ ಎಂದು ಯಾವುದೇ ಹೆದರಿಕೆ ಇಲ್ಲಿದೆ ಹೇಳಿದ್ದಾರೆ. ಇನ್ನು ಕೆಲ ಆಟಗಾರರು ಇದಕ್ಕೆ ಅಪಸ್ವರ ಎತ್ತಿದ್ದಾರೆ.

ಈ ಪ್ರಕರಣಕ್ಕೂ ಮುನ್ನ ಕಾಶ್ಮಿರದಲ್ಲಿ ಇಬ್ಬರು ಇಸ್ಮಾಂ ಧರ್ಮಿಯರು ಪಾಕ್ ರಾಷ್ಟ್ರಗೀತೆ ಹಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಭಾನುವಾರ ಮೋದಿಯವರು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಯುವಕರಿಗೆ ಉಗ್ರರವಾದವನ್ನು ಮಟ್ಟ ಹಾಕವಲು ಕೈ ಜೋಡಿಸಿ. ನಿಮ್ಮ ಮುಂದೆ ಎರಡು ದಾರಿ ಇದೆ. ಒಳ್ಳೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದಿದ್ದರು.