ಕಾವೇರಿ ತೀರ್ಪಿನಲ್ಲಿ ತೀರ್ಪು ನೀಡಿದ ದೀಪಕ್ ಮಿಶ್ರಾ – ಕಾನೂನಿನ ಕತ್ತೆ: ಕಟ್ಜು

0
1036

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ನೆನ್ನೆಯ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಜನತೆಗಷ್ಟೇ ಅಲ್ಲದೆ ತಟಸ್ಥ ವೀಕ್ಷಕರಿಗೂ ಆಕ್ರೋಶ ತರಿಸಿದೆ. ಒಂದು ದಿನದ ಹಿಂದೆಯಷ್ಟೇ ಕಾವೇರಿ ಮೇಲುಸ್ತುವಾರಿ ಸಮಿತಿ ತಮಿಳುನಾಡಿಗೆ ದಿನಕ್ಕೆ 3000 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿದ್ದರು, ನೆನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ 6000 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿತ್ತು.

ಮೆಟ್ಟೂರು ಜಲಾಶಯದಲ್ಲಿ ಹೆಚ್ಚು ನೀರು ಶೇಖರವಾಗಿದೆ ಆದರೆ ಕನ್ನಂಬಾಡಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಕರ್ನಾಟಕ ಪರ ವಕೀಲ ನಾರಿಮನ್ ವಾದಿಸಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು ಸಫಲವಾಗಿರಲಿಲ್ಲ.

ಕಾವೇರಿ ವಿಚಾರದಲ್ಲಿ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಉದಯ್‌ ಲಲಿತ್‌ ಅವರ ಪೀಠ ಏಕಪಕ್ಷೀಯವಾಗಿ ಆದೇಶ ನೀಡಿದೆ ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು, “ಕಾವೇರಿ ವಿವಾದದ ಈ ಆದೇಶದ ಮೂಲಕ ನ್ಯಾಯಾಧೀಶ ದೀಪಕ್ ಮಿಶ್ರ, ಡಿಕನ್ಸ್ ಹೇಳಿದ್ದ (ಆಲಿವರ್ ಟ್ವಿಸ್ಟ್ ನಲ್ಲಿ) ‘ಕಾನೂನು ಕತ್ತೆ’ ಎಂಬ ಮಾತನ್ನು ನಿಜಗೊಳಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

 

ಚಾರ್ಲ್ಸ್‌ ಡಿಕೆನ್ಸ್‌ನ ‘ಅಲಿವರ್‌ ಟ್ವಿಸ್ಟ್‌’ ಕೃತಿಯಲ್ಲಿ ಬರುವ ‘The law is a ass’ ಎಂಬ ಮಾತನ್ನು ಉಲ್ಲೇಖಿಸಿ ಕಟ್ಜು ಟ್ವೀಟ್‌ ಮಾಡಿದ್ದಾರೆ.

ನ್ಯಾಯದಾನ ಏಕಪಕ್ಷೀಯವಾದ ಸಂದರ್ಭಗಳಲ್ಲಿ ಈ ನುಡಿಗಟ್ಟನ್ನು ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ಈ ಒಂದು ಹಿರಿಯ ಕಾನೂನು ತಜ್ಞರೇ ಹೀಗೆ ತೀರ್ಪಿನ ಬಗ್ಗೆ ಅಸಮಧಾನ ತೋರುತ್ತಿರುವಾಗ, ಸಾಮಾನ್ಯ ಕನ್ನಡಿಗರಲ್ಲಿ ಇನ್ನೆಂತಹ ಬೇಸರ ಮೂಡಿದೆ, ಎಂದು ಊಹಿಸಕೊಳ್ಳಬೇಕು…