ಕನ್ನಡಿಗರ ಮನ ಗೆದ್ದ ತಮಿಳರು!

0
5652

ಚೆನ್ನೈ ಪ್ರವಾಹದ ವೇಳೆ ಕರ್ನಾಟಕದ ನೆರವು ಸ್ಮರಿಸಿಕೊಳ್ಳಿ : ಕಾವೇರಿಗಾಗಿ ಅನಗತ್ಯ ಕ್ವಾಟ್ಲೆ ಬೇಡ

ನಗ್ಮಾ

“ನಾನು ಎಂದಿಗೂ ಕನ್ನಡಿಗರ ವಿರುದ್ದ ಹೇಳಿಕೆ ನೀಡೊಲ್ಲ”

– ಸುಹಾಸಿನಿ

“ಕರ್ನಾಟಕಕ್ಕೆ  ಮೊದಲು ನೀರು ಇದ್ದರೆ ಮಾತ್ರ  ತಮಿಳುನಾಡಿಗೆ ನೀರು ಹರಿಸಲು ಸಾಧ್ಯ , ಅವರಿಗೆ ನೀರು ಇಲ್ಲದಿದ್ದರೂ ನಮಗೆ ನೀರು ಕೊಡುತ್ತಿದ್ದಾರೆ ಅದು ಅವರ ವಿಶಾಲ ಹೃದಯ”

– ಸುಬ್ರಮಣ್ಯ ಸ್ವಾಮಿ

 

ಕೆಲ ತಿಂಗಳುಗಳ ಹಿಂದೆ ಚೆನ್ನೈನಲ್ಲಿ ಮಳೆ ತಂದ ಪ್ರವಾಹದಿಂದ ಉಂಟಾದ ಅನಾನುಕೂಲದ ವೇಳೆ ಕರ್ನಾಟಕದವರು ಮಾಡಿದ ಸಹಾಯ, ಸಹಕಾರ ನೆನೆಯಬೇಕು ಎಂದಿದ್ದಾರೆ. ಕಾವೇರಿ ವಿವಾದ ಈ ಹಿಂದೆಯೂ ಇತ್ತು. ಈಗಲೂ ಅದು ಮುಂದುವರೆದಿದೆ. ಏನೋ ತಾಂತ್ರಿಕ ಕಾರಣಗಳಿಗಾಗಿ ಈಗ ನ್ಯಾಯಾಲಯ ಈ ಆದೇಶ ಹೊರಡಿಸಿರಬಹುದು. ಆದ್ದರಿಂದ ಅದನ್ನೇ ನೆಪವಾಗಿಟ್ಟುಕೊಂಡು ಕರ್ನಾಟಕದ ಮೇಲೆ ನೀರು ಬಿಡುವಂತೆ ಒತ್ತಡ ಹೇರುವುದು ಸರಿಯಲ್ಲ. ಅಲ್ಲಿನ ಜಲಾಶಯಗಳಲ್ಲಿ ನೀರಿದ್ದರೆ ಅವರು ಬಿಡದೆ ಇರುತ್ತಿದ್ದರೆ ಎಂದು ತಮಿಳುನಾಡಿನಲ್ಲಿ ಬಹುಭಾಷಾ ನಟಿ ನಗ್ಮಾ ಹೇಳಿದ್ದಾರೆ

ಕನ್ನಡದ ಹಲವಾರು ಯಶಸ್ವಿ ಚಿತ್ರಗಳಲ್ಲಿ ದಕ್ಷಿಣ ಭಾರತದ ಹಿರಿಯ ನಟಿ ತುಂಬಾ ಪ್ರಬುದ್ದವಾದ ಹೇಳಿಕೆಯೊಂದನ್ನು ಕಾವೇರಿ ಹೋರಾಟದ ಸಂಬಂಧ ನೀಡಿದ್ದಾರೆ.. ಸುಹಾಸಿನಿರವರು ವಿಷ್ಣುವರ್ಧನ್ ಮತ್ತು ಹಲವಾರು ಕನ್ನಡದ ಹಿರಿಯ ನಟರೊಂದಿಗೆ ಅದ್ಭುತ ನಟನೆ ಮಾಡಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂ, ಅಮೃತವರ್ಷಿಣಿ, ಮುತ್ತಿನ ಹಾರ ಮುಂತಾದ ಅತ್ಯದ್ಭುತ ಕನ್ನಡ ಚಲನಚಿತ್ರಗಳಲ್ಲಿ ಅಮೋಘ ನಟನೆ ಮೂಲಕ ಕನ್ನಡಿಗರ ಮನದಲ್ಲಿ ಛಾಪು ಮೂಡಿಸಿದ್ದಾರೆ. ಮೂಲತಃ ತಮಿಳವರಾದರೂ ಕನ್ನಡವನ್ನು ಕಲಿತು ಸ್ವತಃ ತಾವೇ ತಮ್ಮ ಎಲ್ಲ ಚಿತ್ರಗಳಿಗೂ ಅದ್ಭುತವಾಗಿ ಡಬ್ಬಿಂಗ್  ಮಾಡಿದ್ದಾರೆ.

“ಕಾವೇರಿ ನೀರು ಎಲ್ಲರಿಗೂ ಬೇಕು, ಕನ್ನಡದ ರೈತರು ತಮಗೆ ಅನ್ಯಾಯವಾಗಿದೆ ಅಂತ ಹೋರಾಟ ಮಾಡಿದರೆ ಅದರಲ್ಲಿ ತಪ್ಪೇನಿದೆ? ನ್ಯಾಯಕ್ಕೋಸ್ಕರ ನಡೆಯುವ ಯಾವುದೇ ಹೋರಾಟ ತಪ್ಪಿಲ್ಲ, ಅದನ್ನು ನಾನು ಬೆಂಬಲಿಸುತ್ತೇನೆ. ತಮಿಳು ನಾಡಿನ ರೈತನಿಗೆ ಅನ್ಯಾಯವಾದರೆ ನಾನು ಅದನ್ನೂ ಬೆಂಬಲಿಸುತ್ತೇನೆ. ನೀವು ಎಷ್ಟೇ ಒತ್ತಾಯ ಮಾಡಿದರೂ ನಾನು ಕನ್ನಡ ಮತ್ತು ಕನ್ನಡಿಗರ ಕಾವೇರಿ ಹೋರಾಟದ ವಿರುದ್ದ ಹೇಳಿಕೆ ಕೊಡುವುದಿಲ್ಲ. ಈ ಹಿಂದೆ ರೂಜಾ ಚಿತ್ರವನ್ನು ನನ್ನ ಗಂಡ ಮಾಡಿದಾಗ ಕಾಶ್ಮೀರಿ ಉಗ್ರರು ಮನೆಯ ಮೇಲೆ ಬಾಂಬು ಹಾಕಿದಾಗಲೇ ನಾನು ಹೆದರದವಳು, ನಿಮ್ಮ ಕೂಗಟಕ್ಕೆ ಹೆದರುತ್ತೇನಾ?” ಎಂದ ಸುಹಾಸಿನಿ

ತಮಿಳು ನಾಡು ಕರ್ನಾಟಕದೊಂದಿಗೆ ಅನವಶ್ಯಕ ಕ್ಯಾತೆ ತೆಗೆಯುವುದನ್ನು ಬಿಡಬೇಕು

ಕರ್ನಾಟಕಕ್ಕೆ  ಮೊದಲು ನೀರು ಇದ್ದರೆ ಮಾತ್ರ  ತಮಿಳುನಾಡಿಗೆ ನೀರು ಹರಿಸಲು ಸಾಧ್ಯ , ಅವರಿಗೆ ನೀರು ಇಲ್ಲದಿದ್ದರೂ ನಮಗೆ ನೀರು ಕೊಡುತ್ತಿದ್ದಾರೆ ಅದು ಅವರ ವಿಶಾಲ ಹೃದಯ , ತಮಿಳು ನಾಡಿನ ಜನ ಸಮುದ್ರದ ನೀರನ್ನು ಪರಿಶೋಧಿಸಿ ತಮಗೆ ಕುಡಿಯಲು ಹಾಗೂ ಕೃಷಿಗೆ ಬಳಸಬೇಕು .

ಕರ್ನಾಟಕದ ರೈತರ ಸಂಕಷ್ಟ ಸ್ಥಿತಿಯಲ್ಲಿ ಅವರ ಬೆನ್ನಿಗೆ ನಿಲ್ಲಬೇಕು. ಇದೇ ನಿಜವಾದ ಧರ್ಮ. ತಪ್ಪಿದಲ್ಲಿ ಮಾನವೀಯತೆಯೇ ಇಲ್ಲದವರು ಎಂದೆನಿಸಿಕೊಳ್ಳಬೇಕಾಗುತ್ತದೆ ಎಂದು ತಮಿಳುನಾಡಿನ ಜನತೆಯನ್ನು ನಟಿ ನಗ್ಮಾ ಕೋರಿದ್ದಾರೆ. ಇಂತಹ ಅಧ್ಬುತ ವ್ಯಕ್ತಿತ್ವ ಉಳ್ಳವರನ್ನು ಮಾತ್ರ ಕನ್ನಡಿಗರು ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಮಾತ್ತೊಂದು ನಿದರ್ಶನ….