ಇತಿಹಾಸ ಸೃಷ್ಟಿಸಿದ ಈ ಶತಮಾನದ ಮಾದರಿ ಹೆಣ್ಣು ನಮ್ಮ ಕವಿತಾ ದೇವಿ…!

0
799

ಮಹಿಳೆಯರು ಕಾಲಿಟ್ಟಿರುವ ಪ್ರತಿಯೊಂದು ಕ್ಷೇತ್ರದಲ್ಲೂ ಸಫಲತೆಯನ್ನು ತೋರಿಸಿಕೊಟ್ಟಿದ್ದಾಳೆ. ತನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ಯಾವ ಅಮಿಷಕ್ಕೂ ಬಲಿಯಾಗದೆ, ದಕ್ಷತೆ ಎಂದರೇನು ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ಅದರಲ್ಲಿ ಕಳೆದ ಏಪ್ರಿಲ್‌ ತಿಂಗಳನಲ್ಲಿ ದುಬೈನಲ್ಲಿ ನಡೆದಿದ್ದ WWE ದುಬೈ ಟ್ರೈಔಟ್‌ನಲ್ಲಿ ಸ್ಪರ್ಧಿಸಿದ್ದ ಕವಿತಾದೇವಿ ಒಬ್ಬರು. ಹಾಗಾದರೆ ಯಾರು ಈ ಕವಿತಾ ದೇವಿ?

ಕಳೆದ Jun 13, 2016 ರಲ್ಲಿ youtube ನಲ್ಲಿ ‎ಕವಿತಾ ರವರ ಒಂದು ವಿಡಿಯೋ ಅಪ್ಲೋಡ್ ಆಗಿತ್ತು ಇದರಲ್ಲಿ ಕವಿತಾ ದೇವಿ BB Bull Bull ರವರ ಓಪನ್ ಚಾಲೆಂಜ್ ಅನ್ನು ಎಲ್ಲರ ಸಮ್ಮುಖ ಸ್ವೀಕರಿಸಿ ಜಯವನ್ನು ಗಳಿಸಿದ್ದರು. ಈ ವಿಡಿಯೋ ನೆನಪಿದೆಯಾ??

ಹರಿಯಾಣ ಕುಸ್ತಿಪಟು ಕವಿತಾ ದೇವಿ

ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಮಾಜಿ ವೇಟ್‌ಲಿಫ್ಟರ್‌ ಕವಿತಾ ದೇವಿ WWE(ವಿಶ್ವ ಮನರಂಜನಾ ಕುಸ್ತಿ)ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ಹರಿಯಾಣ ಆಗಿರುವ ಕವಿತಾ ಸದ್ಯ ಪಂಜಾಬ್‌ನಲ್ಲಿರುವ WWE ಮಾಜಿ ವಿಶ್ವ ಚಾಂಪಿಯನ್‌ ದಿ ಗ್ರೇಟ್‌ ಖಲಿ ಅವರ ಅಕಾಡೆಮಿಯಲ್ಲಿ ಕುಸ್ತಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಜುಲೈ 13 ಹಾಗೂ 14ರಂದು ಅಮೆರಿಕದ ಫ್ಲೋರಿಡಾದಲ್ಲಿನ ಒಲ್ರ್ಯಾಂಡೊ ನಗರದಲ್ಲಿ ನಡೆಯಲಿರುವ ಡಬ್ಲ್ಯುಡಬ್ಲ್ಯುಇಗೆ ಆಯ್ಕೆ ಆಗುವ ಮೂಲಕ ಭಾರತೀಯ ಕುಸ್ತಿರಂಗದಲ್ಲಿ ನೂತನ ಇತಿಹಾಸ ಬರೆದಿದ್ದಾರೆ.

ಈ ಮೂಲಕ ಡಬ್ಲ್ಯುಡಬ್ಲ್ಯುಇಗೆ ಆಯ್ಕೆ ಆಗುವ ಮೂಲಕ ಭಾರತೀಯ ಕುಸ್ತಿರಂಗದಲ್ಲಿ ನೂತನ ಇತಿಹಾಸ ಬರೆಯಲಿದ್ದಾರೆ. ‘ಮೇ ಯಂಗ್‌ ಕ್ಲಾಸಿಕ್‌’ ಎನ್ನುವ ಹೆಸರಿನ ಪಂದ್ಯಾವಳಿಯಲ್ಲಿ ಕವಿತಾ, ವಿಶ್ವದ ವಿವಿಧ ಭಾಗಗಳಿಂದ ಆಯ್ಕೆಗೊಂಡಿರುವ ಅಗ್ರ 31 ಕುಸ್ತಿಪಟುಗಳೊಂದಿಗೆ ಸೆಣಸಾಟ ನಡೆಸಲಿದ್ದಾರೆ. ‘ಮೇ ಯಂಗ್‌ ಕ್ಲಾಸಿಕ್‌’ ಜುಲೈ 13 ಹಾಗೂ 14ರಂದು ಅಮೆರಿಕದ ಫ್ಲೋರಿಡಾದಲ್ಲಿನ ಒಲ್ರ್ಯಾಂಡೊ ನಗರದಲ್ಲಿ ನಡೆಯಲಿದೆ.