ಜೀವನದಲ್ಲಿ ಒಮ್ಮೆ ಪ್ರತಿಯೊಬ್ಬ ಹಿಂದೂ ಕೇದಾರನಾಥ ದೇವಾಲಯಕ್ಕೆ ಯಾಕೆ ಭೇಟಿ ನೀಡಬೇಕು ಗೊತ್ತ..!!

0
1438

ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು. ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ.

ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ. ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರ, ಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಈ ದೇವಸ್ಥಾನದ ಹಿಂದೆಯೇ ಶಂಕರರ ಸಮಾಧಿ ಮಂದಿರವಿದೆ. ಗೌರಿಕುಂಡವು ಸಮುದ್ರಮಟ್ಟದಿಂದ ೬೫೦೦ ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳ್ಲಲೊಂದಾದ ಏಕೋರಾಮಾರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ.

ಕೇದಾರನಾಥೇಶ್ವರ ಪುರಣ

ಮಹಾಭಾರತ ಯುದ್ಧದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ್ದಷ್ಟೇ ಅಲ್ಲ ಅನೇಕ ಗುರು-ಹಿರಿಯರು ಬಂಧು-ಬಾಂಧವರನ್ನು ಹತ್ಯೆ ಮಾಡಬೇಕಾಯಿತು. ಆದ್ದರಿಂದ ಅವರಿಗೆ ಬ್ರಹ್ಮ ಹತ್ಯೆ, ಗುರು ಹತ್ಯೆ ಇತ್ಯಾದಿ ಪಾಪಗಳು ಸುತ್ತಿಕೊಂಡವು. ಈ ಪಾಪಗಳ ಪರಿಹಾರಕ್ಕಾಗಿ ಅವರು ಶಂಕರನ ದರ್ಶನ ಪಡೆದು ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ನಿಶ್ಚಯಿಸಿ ಹಿಮಾಲಯದ ತೀರ್ಥಕ್ಷೇತ್ರಗಳ ಕಡೆಗೆ ಹೊರಟರು. ಮೊದಲು ಅವರು ಕಾಶಿಗೆ ಹೋದರು. ಅಲ್ಲಿ ವಿಶ್ವನಾಥ ಇರಲಿಲ್ಲ. ಅವನು ಕೈಲಾಸದ ಕಡೆಗೆ ಹೋಗಿದ್ದಾನೆ ಎಂದು ತಿಳಿಯಿತು. ಅವರು ಹಿಮಾಲಯದಲ್ಲಿ ಸುತ್ತುತ್ತಾ ಹರಿದ್ವಾರದ ಕಡೆಗೆ ಬಂದರು. ದೂರದಲ್ಲಿ ಅವರಿಗೆ ಶಂಕರ ಕಾಣಿಸಿದ. ಆದರೆ ಶಂಕರ ಅವರಿಗೆ ದರ್ಶನ ಕೊಡಲು ಇಚ್ಛಿಸದೆ ಅವಿತುಕೊಂಡಂತೆ ಕಂಡಿತು.

ಆಗ ಧರ್ಮರಾಜ ವ್ಯಥೆಗೊಂಡನು. ತನ್ನ ಕೈಗಳನ್ನು ಮುಗಿದು ಶಂಕರನನ್ನು ಕುರಿತು ಹೀಗೆ ಪ್ರಾರ್ಥನೆ ಮಾಡಿದನು: `ಓ ಶಂಕರ ನಾವು ಪಾಪಾತ್ಮರು ಎಂದು ನಮಗೆ ದರ್ಶನ ಕೊಡಲು ನೀನು ಇಚ್ಛಿಸುತ್ತಿಲ್ಲ ಎಂದು ನಮಗೆ ತಿಳಿದಿದೆ. ಆದರೆ ನಾವು ನಮ್ಮ ಭಕ್ತಿಯಿಂದ ನಿನ್ನ ದರ್ಶನ ಪಡೆಯುತ್ತೇವೆ ಮತ್ತು ನಮ್ಮ ಪಾಪಗಳಿಂದ ಮುಕ್ತರಾಗುತ್ತೇವೆ ಇದು ನಮ್ಮ ಸಂಕಲ್ಪ. ನೀನು ಹೀಗೆ ಅವಿತುಕೊಂಡಿರುವ ಪ್ರದೇಶ ಗುಪ್ತಕಾಶಿ ಎಂದು ಹೆಸರು ಪಡೆಯುತ್ತದೆ.’ ರುದ್ರ ಪ್ರಯಾಗ/ಗುಪ್ತಕಾಶಿಯಿಂದ ಅವರು ಮುಂದೆ ಗೌರಿ ಕುಂಡಕ್ಕೆ ಹೋದರು. ಈ ರೀತಿ ಅವರು ಶಂಕರನನ್ನು ಅರಸುತ್ತಾ ಹೋಗುತ್ತಿರಬೇಕಾದರೆ ಅವರಿಗೆ ಒಂದು ವಿಚಿತ್ರವಾದ ಕೋಣ ಕಾಣಿಸಿತು. ಭೀಮ ಅದನ್ನು ಹಿಡಿಯಲು ಪ್ರಯತ್ನಪಟ್ಟ. ಆದರೆ ಅದು ತಪ್ಪಿಸಿಕೊಂಡಿತು.

ಛಲ ಬಿಡದೆ ಭೀಮ ಅದರ ಬಾಲವನ್ನು ಹ್ಯಾಗೋ ಹಿಡಿದ. ಅದರ ಮುಖ ಹೋಗಿ ನೇಪಾಳದಲ್ಲಿ ಬಿದ್ದುಬಿಟ್ಟಿತು. ಅಲ್ಲಿ ಅದು ಡೋಲೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಇತ್ತ ಭೀಮನ ಕೈಯಲ್ಲಿದ್ದ ಹಿಂಭಾಗ ಕೇದಾರದಲ್ಲಿಯೇ ಉಳಿದುಕೊಂಡಿತು. ಅದರಿಂದಲೇ ಒಂದು ಜ್ಯೋತಿರ್ಮಿಯವಾದ ಲಿಂಗ ಉದ್ಭವಗೊಂಡಿತು. ಜೊತೆಗೆ ಶಂಕರನೂ ಪ್ರತ್ಯಕ್ಷನಾಗಿ ಪಾಂಡವರಿಗೆ ದರ್ಶನ ಕೊಟ್ಟ. ಅದರಿಂದ ಪಾಂಡವರ ಪಾಪಗಳೆಲ್ಲಾ ನಾಶವಾದವು. ಆ ದಯಾಮಯನಾದ ಭಗವಂತ ಶಂಕರನು ಹೀಗೆ ಹೇಳಿದ, `ನಿಮ್ಮ ಭಕ್ತಿಗೆ ಮೆಚ್ಚಿದ್ದೇನೆ. ನಾನು ಇನ್ನು ಮುಂದೆ ಇಲ್ಲಿಯೇ ನಿಮ್ಮಗಳ ಸಲುವಾಗಿ ಭಕ್ತರ ಸಲುವಾಗಿ ನೆಲೆಸುತ್ತೇನೆ.’ ಶಂಕರ ಪಾಂಡವರಿಗೆ ಆಶೀರ್ವದಿಸಿ ಹೋದ. ಹೀಗೆ ಕೇದಾರೇಶ್ವರ ಜ್ಯೋತಿರ್ಲಿಂಗದ ಸ್ಥಾಪನೆ ಆಯಿತು ಎನ್ನುತ್ತಾರೆ.

ಈ ಕೇದಾರೇಶ್ವರ ದೇವಾಲಯ ವರ್ಷದ 6 ತಿಂಗಳು ಮಾತ್ರ ಈ ಗುಡಿಗೆ ಪ್ರವೇಶ, ಮಿಕ್ಕ 6 ತಿಂಗಳು ಇಲ್ಲಿನ ವಾತಾವರಣ ಹಾಗು ಮಂಜು ಇದಕ್ಕೆ ಅವಕಾಶ ಕೊಡೋದಿಲ್ಲ. ಕಾರ್ತಿಕ ಮಾಸದಲ್ಲಿ ಹೆಚ್ಚು ಮಂಜಿರೋ ಕಾರಣ ದೇವರ ವಿಗ್ರಹವನ್ನ ತುಪ್ಪದ ದೀಪ ಹಚ್ಚಿ ಹೊರಗೆ ತಂದು, ದೇವಸ್ಥಾನ ಮುಚ್ಚಲಾಗುತ್ತೆ. ಕಣಿವೇಲಿರೊ ಉರ್ವಿ ಮಠದಲ್ಲಿ ಈ ವಿಗ್ರಹವನ್ನ ಇಡಲಾಗುತ್ತೆ. ಇನ್ನು ಗುಡಿಯನ್ನ ತೆಗೆಯೋದು ವೈಶಾಖದಲ್ಲೇ.ಈ ಸಮಯದಲ್ಲಿ ದರ್ಶನಕ್ಕೆ ಹೋದವರು ಈ ತುಪ್ಪದ ದೀಪಾನೇ ನೋಡಿ ಧನ್ಯರಾಗ್ತಾರೆ.