ಕೇದಿಗೆ ಹೂವಿನಲ್ಲಿ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ ಗೊತ್ತಾ..!

0
3547

ಎಲ್ಲರಿಗೂ ಚಿರಪರಿಚಿತವಾದ ಕೇದಿಗೆ ಹೂವೆಂದರೆ ನಾಗರಹಾವುಗಳಿಗೆ ಪಂಚಪ್ರಾಣ. ಮಹಾಶಿವರಾತ್ರಿ ದಿನದೊಂದು ಶಿವನ ಪುಷ್ಪಾರ್ಚನೆಗೆ ಈ ಹೂವು ತುಂಬಾ ಶ್ರೇಷ್ಠ. ಕೇದಿಗೆ ಹೂವು ಪೂಜೆಗೆ, ಹೆಂಗಸರು ಮುಡಿದುಕೊಳ್ಳಲು ಮಾತ್ರ ಸೀಮಿತವಲ್ಲ, ಇದನ್ನು ಔಷಧವಾಗಿಯೂ ಕೂಡ ಉಪಯೋಗಿಸಬಹುದು. ಸುವಾಸನೆಯಿಂದಲೇ ಗಮನ ಸೆಳೆಯುವ ಇದರ ತೆನೆ, ಪಕಳೆ, ಬೇರು ಎಲ್ಲವೂ ಆರೋಗ್ಯ ರಕ್ಷಣೆಯ ಕೆಲಸ ಮಾಡುತ್ತವೆ.

ಕೇದಿಗೆಯ ಉಪಯೋಗಗಳು.

  • ಕೇದಿಗೆ ಹೂವು ಅಷ್ಟೇ ಅಲ್ಲ ಇದರ ಎಲೆಗಳು ಖಾರವಾಗಿರುವುದರಿಂದ, ಕುಷ್ಠರೋಗ ಮತ್ತು ಕೆಲವು ಅಂಟು ರೋಗಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ.

  • ನಿದ್ರಾಜನಕವಾಗಿ ಮತ್ತು ಕಫದ ನಿವಾರಣೆಗೆ ಕೇದಿಗೆಯನ್ನು ಉಪಯೋಗಿಸುತ್ತಾರೆ.

  • ಕೇದಿಗೆ ಪತ್ರದ ತೈಲವನ್ನು ಪಾಂಡು ರೋಗ, ಹೃದ್ರೋಗ, ಮೆದುಳು ರೋಗ ಮತ್ತು ತಂಪಿಗೆ ಉಪಯೋಗಿಸುತ್ತಾರೆ.

  • ಕೇದಿಗೆಯ ಪತ್ರಕದ ತೈಲವನ್ನು ಸ್ನಾಯು ಸೆಳೆತ, ತಲೆ ನೋವು, ನರಗಳ ದೌರ್ಬಲ್ಯತೆ ಹೋಗಲಾಡಿಸಲು ಉಪಯೋಗಿಸುತ್ತಾರೆ. ಬೇರಿನ ತೈಲವನ್ನು ಕೆಲವು ಔಷಧಿಯುಕ್ತ ಎಣ್ಣೆಗಳಲ್ಲಿ ಉಪಯೋಗಿಸುತ್ತಾರೆ.

  • ಕೇದಿಗೆ ಬೇರನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಸೇವಿಸಿದರೆ ಹೆಣ್ಣು ಮಕ್ಕಳಲ್ಲಿ ಕಾಡುವ ಮಾಸಿಕ ಅಧಿಕ ರಕ್ತಸ್ರಾವವು ಕಡಿಮೆಯಾಗುತ್ತದೆ.

  • ಅಜೀರ್ಣ, ಭೇದಿ ಸಮಸ್ಯೆಯಿಂದ ಬಳಲುತ್ತಿದ್ದರೆ ಕೇದಿಗೆಯ ತೆನೆಯನ್ನು ಸಕ್ಕರೆ ಮತ್ತು ತುಪ್ಪದೊಂದಿಗೆ ಸೇವಿಸಿ. ಭೇದಿ ನಿಲ್ಲುತ್ತದೆ ಮತ್ತು ಜೀರ್ಣಶಕ್ತಿ ಹೆಚ್ಚಾಗುತ್ತದೆ.

  • ಕೇದಿಗೆ ಹೂವಿನ ಪಕಳೆಗಳನ್ನು ಒಣಗಿಸಿ ಸುಟ್ಟು ಬೂದಿ ಮಾಡಬೇಕು. ಆ ಬೂದಿಯನ್ನು 1/2 ಚಮಚ ಹರಳೆಣ್ಣೆ ಮತ್ತು ಜೇನುತುಪ್ಪ ಕಲಸಿ ಸೇವಿಸಿದರೆ ಹೊಟ್ಟೆ ನೋವು ವಾಸಿಯಾಗುತ್ತದೆ.

  • ಕೇದಿಗೆ ಹೂಗಳನ್ನು ತಂದು ಎಳ್ಳೆಣ್ಣೆಯಲ್ಲಿ ಹಾಕಿ, ಮುಂದಾಗ್ನಿಯಿಂದ ಕಾಯಿಸುವುದು, ಎಣ್ಣೆತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸಿ ಸಂಗ್ರಹಿಸುವುದು, ತಲೆನೋವಿನಲ್ಲಿ ಹಣೆಗೆ ಹಚ್ಚುವುದು ಮತ್ತು ಶ್ವಾಸಕೋಶಗಳ ತೊಂದರೆಯಲ್ಲಿ ಎದೆಗೆ ಸವರುವುದು.ಈ ಎಣ್ಣೆಯನ್ನುಇಡೀ ಶರೀರಕ್ಕೆ ಹಚ್ಚುವುದರಿಂದ ನರಗಳು ಉತ್ತೇಜನಗೊಂಡು ಸೋಮಾರಿತನ ಮತ್ತು ಜಡತ್ವ ಪರಿಹಾರವಾಗುವುದು.

  • ಕೇದಿಗೆ ಗಿಡದ ಬಲಿತ ಬೇರು ತಂದು ನೀರಿನಲ್ಲಿ ತೇದು, ಸರ್ಪಕಚ್ಚಿರುವ ಕಡೆ ಪಟ್ಟು ಹಾಕುವುದು ಮತ್ತು ಅರ್ಧ ಟೀ ಚಮಚ ನೀರಿನಲ್ಲಿ ಕದಡಿ ಕುಡಿಯುವುದು. ಇದು ಸರ್ಪ ಕಚ್ಚಿದಾಗ ಪ್ರಥಮಚಿಕಿತ್ಸೆಯಾಗಿ ಈ ಉಪಚಾರ ಪರಿಣಾಮಕಾರಿ.