ನಿಮ್ಮ ಮಕ್ಕಳು ಮೊಬೈಲ್ ಹೆಚ್ಚು ಉಪಯೋಗಿಸುತ್ತಾರೆಯೇ…! ಇದನೊಮ್ಮೆ ಓದಿ…

0
3656

Kannada News | kannada Useful Tips

ಓದಿನ ಬದಲು ನಿಮ್ಮ ಮಗು ಹೆಚ್ಚು ಮೊಬೈಲ್ ಮತ್ತು ಕಂಪ್ಯೂಟರ್ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆಯೇ, ಮಕ್ಕಳ ಕಂಪ್ಯೂಟರ್ ಮತ್ತು ಫೋನ್ ಬಳಕೆ ಹೆಚ್ಚಾಗಿದೆ ಎಂದು ತಿಳಿದಾಗ ಪಾಲಕರಿಗೆ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಆದರೆ, ಇಂಟರ್ನೆಟ್ ಅಥವಾ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ನಿಮ್ಮ ಮಕ್ಕಳು ಇನ್ನಷ್ಟು ಕಿರಿಕಿರಿಗೊಳ್ಳಬಹುದು ಅಥವಾ ಸಿಟ್ಟಾಗಬಹುದು. ನಿಮ್ಮ ಮಕ್ಕಳಿಗೆ ಫೋನಿನ ಬಳಕೆ ಒಂದು ವ್ಯಸನವಾಗಿದೆ ಎಂದು ನಿಮಗೆ ಅನ್ನಿಸುತ್ತಿದೆ ಎಂದರೆ ಎಡನೋಮ್ಮೆ ಓದಿ :

ನಿಮ್ಮ ಮಕ್ಕಳ ವ್ಯಸನವನ್ನು ನಿಯಂತ್ರಿಸಲು ಇಲ್ಲಿವೆ ಸಲಹೆಗಳು :

1 ತಾಳ್ಮೆ ಇರಲಿ, ಅವರು ಅತಿಯಾಗಿ ಕಂಪ್ಯೂಟರ್ ಮತ್ತು ಫೋನ್ ಬಳಸುವುದನ್ನು ಟೀಕಿಸಬೇಡಿ.

2 ಗಾಬರಿಯಾಗಬೇಡಿ. ಸೂಕ್ತ ಬೆಂಬಲ ಪಡೆದು ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ.

3 ನಿಮ್ಮ ಮಕ್ಕಳು ತಮ್ಮ ಜೀವನಶೈಲಿ ಬದಲಾಯಿಸಲು ಅವರಿಗೆ ಇಷ್ಟವಾದ ಬೇರೆ ಚಟುವಟಿಕೆಗಳನ್ನು ಆರಂಭಿಸಿ.

4  ಇಂಟರ್‌ನೆಟ್ ಸರ್ಚ್ ಹಿಸ್ಟರಿ ಬಗ್ಗೆ ಗಮನ ಇರಲಿ.

5  ಕುಟುಂಬಕ್ಕೆ ಮೀಸಲಾದ ಸಮಯದಲ್ಲಿ, ನೀವೂ ಕೂಡಾ ನಿಮ್ಮ ಫೋನನ್ನು ಬಳಸದೇ ಅವರಿಗೆ ಮಾದರಿಯಾಗಿ.

6  ಸಮಸ್ಯೆಯ ಸ್ವರೂಪವನ್ನು ಅರ್ಥಮಾಡಿಕೊಂಡು ಅದನ್ನು ನಿರ್ವಹಿಸುವ ವಿಧಾನಗಳನ್ನು ಅರಿತುಕೊಳ್ಳಿ.

7  ಒಂದು ನಿಗದಿತ ಸಮಯದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಇಂಟರ್ನೆಟ್ ಬಳಕೆಯಿಂದ ದೂರವಿರುವಂತೆ ನೋಡಿಕೊಳ್ಳಿ- ಊಟದ ಸಮಯದಲ್ಲಿ ಅಥವಾ ವಾರದ ಒಂದು ದಿನ ಇಲ್ಲವೇ ವಾರಾಂತ್ಯದಲ್ಲಿ.

8  ನಿಮ್ಮ ಗಾಬರಿ ಮತ್ತು ಚಿಂತೆಯ ಭಾವನೆಗಳಿಗೆ ತಜ್ಞರ ಸಹಾಯ ಪಡೆಯಿರಿ. ಇದರಿಂದ ನೀವು ನಿಮ್ಮ ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.

9  ನಿಮ್ಮ ಮಕ್ಕಳ ಫೋನಿನ ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಆಪ್ತ ಸಮಾಲೋಚಕರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

10  ಕುಟುಂಬವರು ಮತ್ತು ಸ್ನೇಹಿತರೊಂದಿಗಿರುವಾಗ ಫೋನ್‌ ಬಳಸದಿರಲು ಪ್ರಯತ್ನಿಸಿ.

Also Read: ನಿಮ್ಮ ಪತಿ/ಬಾಯ್ ಫ್ರೆಂಡ್ ನ ಉಂಗುರದ ಬೆರಳು ಏನು ಹೇಳುತ್ತದೆ?