ಇದನ್ನು ಸೇವಿಸಿ ಬೇಸಿಗೆಯಲ್ಲಿ ಅಸಿಡಿಟಿ ಬಾರದಂತೆ ನೋಡಿಕೊಳ್ಳಿ..!

0
683

ಇಂದಿನ ದಿನಗಳಲ್ಲಿ ಅಸಿಡಿಟಿ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಬೇಸಿಗೆಯಲ್ಲಿ ಹೊಟ್ಟೆ ಉರಿ, ಎದೆ ಉರಿಯಂತಹ ಸಮಸ್ಯೆಗಳು ಸಹಜ. ಇವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಎಂತಹ ಆಹಾರ ಸೇವಿಸಬೇಕು ಇಲ್ಲಿದೆ ನೋಡಿ.

ಬಾಳೆಹಣ್ಣು
ಬಾಳೆ ಹಣ್ಣಿನಲ್ಲಿ ಪೊಟೇಷಿಯಂ ಅಂಶ ಹೆಚ್ಚಾಗಿದ್ದು, ಮಲ ವಿಸರ್ಜನೆ ಸುಗಮಗೊಳಿಸುತ್ತದೆ. ಅಲ್ಲದೆ ಇದರಲ್ಲಿ ನಾರಿನಂಶ ಹೆಚ್ಚಿದ್ದು, ಜೀರ್ಣಕ್ರಿಯೆಗೂ ಸುಲಭ

Image result for ಬಾಳೆಹಣ್ಣು

ಕಲ್ಲಂಗಡಿ ಹಣ್ಣು

ದೇಹದಲ್ಲಿ ನೀರಿನಂಶ ಕಡಿಮೆ ಆದ ಹಾಗೆ ಅಸಿಡಿಟಿ ಸಮಸ್ಯೆಯೂ ಹೆಚ್ಚುತ್ತದೆ. ಹಾಗಾಗಿ ಅಧಿಕ ದ್ರವಾಂಶ ಹೊಂದಿರುವ ಕಲ್ಲಂಗಡಿ ಹಣ್ಣನ್ನು ಯಥೇಚ್ಛವಾಗಿ ಸೇವಿಸಿ.

Related image

ಎಳೆನೀರು

ಎಳೆ ನೀರು ಹೊಟ್ಟೆ ತಂಪಾಗಿಸುತ್ತದೆ. ಇದು ಒಂಥರಾ ಗ್ಲುಕೋಸ್ ನಂತೆ ಕೆಲಸ ಮಾಡುವುದು. ನಿತ್ರಾಣರಾಗದಂತೆ ನೋಡಿಕೊಳ್ಳುವುದಲ್ಲದೆ, ದೇಹದಲ್ಲಿ ದ್ರವಾಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು.

Image result for ಎಳೆನೀರು
ತಂಪು ಹಾಲು
ತಂಪಾದ ಹಾಲು ಅಥವಾ ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆಯುರಿಂತಹ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Image result for ತಂಪು ಹಾಲು