ಮಕ್ಕಳಿಂದ ದೂರವಿಡಬೇಕಾದ ಅತ್ಯಂತ ಅಪಾಯಕಾರಿ 5 ವಸ್ತುಗಳು ಶೇರ್ ಮಾಡಿ ಎಲ್ಲಾ ಪೋಷಕರಿಗೂ ಉಪಯೋಗವಾಗಲಿ

0
1561

Kannada News | Health tips in kannada

ಮಕ್ಕಳನ್ನು ಜೋಪಾನವಾಗಿ ಸಾಕುವ ಸಮಯದಲ್ಲಿ ಪೋಷಕರ ಸಣ್ಣ ಪುಟ್ಟ ಬೇಜವಬ್ದಾರಿತನದಿಂದ ಅನೇಕ ಅನಾಹುತಗಳಾಗಿಬಿಡುತ್ತವೆ.. ನಮ್ಮ ರಾಜ್ಯದಲ್ಲಿಯೇ ಇತ್ತೀಚೆಗೆ ಇಂತಹ ಘಟನೆ ನಡೆದ ಅನೇಕ ಉದಾಹರಣೆಗಳು ಸಿಗುತ್ತವೆ..

ಮಕ್ಕಳಿಂದ ಕೆಲವು ವಸ್ತುಗಳನ್ನು ಹಟ ಮಾಡಿದರು ಕೂಡ ದೂರವಿಡಲೇಬೇಕಾಗಿದೆ.. ಅಂತಹ 5 ಅಪಾಯಕಾರಿ ವಸ್ತುಗಳು ಇಲ್ಲಿವೆ ನೋಡಿ..

ಮೊಬೈಲ್ ಚಾರ್ಜರ್..

ಇತ್ತೀಚೆಗೆ ಮೊಬೈಲ್ ಚಾರ್ಜರ್ ಅನ್ನು ಬಾಯಲ್ಲಿ ಇಟ್ಟುಕೊಂಡು ಮಗು ಮರಣ ಹೊಂದಿದ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ.. ನಮಗೆ ದಿನಬಳಕೆಗೆ ಅತ್ಯಂತ ಅಗತ್ಯದ ವಸ್ತು ಚಾರ್ಜರ್ ಅದಕ್ಕಾಗಿಯೇ ಇದು ಸಾಮಾನ್ಯವಾಗಿ ಎಲ್ಲೆಂದರಲ್ಲಿ ಇಟ್ಟಿರುತ್ತೇವೆ..ಇನ್ನು ಮುಂದಾದರೂ ಮಕ್ಕಳ ಕೈ ಗೆ ಸಿಗದ ಹಾಗೆ ಇಡಿ..

ಇಯರ್ ಫೋನ್..

ಇಯರ್ ಫೋನ್ ಅನ್ನು ನುಂಗಿ ಮಗು ಮೃತ ಪಟ್ಟ ನೈಜ್ಯ ಉದಾಹರಣೆಯೂ ಕೂಡ ಕಾಣಸಿಗುತ್ತದೆ.. ಪುಟ್ಟ ಮಕ್ಕಳಿಗೆ ಏನಾದರು ಗಟ್ಟಿಯಾದ ವಸ್ತು ಸಿಕ್ಕರೆ ಅದನ್ನು ಅಗಿಯುವುದು ಸಾಮಾನ್ಯ.. ಅದಕ್ಕಾಗಿಯೇ ಇಯರ್ ಫೋನ್ ಸಿಕ್ಕ ತಕ್ಷಣ ಅದನ್ನು ಬಾಯಲ್ಲಿಟ್ಟುಕೊಂಡು ಬಿಡುತ್ತಾರೆ.. ಅದಕ್ಕಾಗಿಯೇ ಇಯರ್ ಫೋನ್ ಅನ್ನು ಕೂಡ ಮಕ್ಕಳ ಕೈಗೆ ಸಿಗದಂತೆ ಇಡಿ..

ಚಕ್ಕುಲಿ, ಚಿಪ್ಸ್ ಇತ್ಯಾದಿ

ತಿನ್ನುವ ಪದಾರ್ಥಗಳಾದರೂ ಇವುಗಳೆಲ್ಲಾ ಒಂದು ಜೀವವನ್ನು ಬಲಿ ತೆಗೆದುಕೊಂಡಿವೆ.. ಹೌದು ತುಂಬಾ ದೊಡ್ಡದಾದ ತಿನಿಸು ಕೂಡ ಮಕ್ಕಳಿಗೆ ನೀಡಬಾರದು.. ಏಕೆಂದರೆ ಅಕಸ್ಮಾತ್ ಅದು ಗಂಟಲಲ್ಲಿ ಸಿಲುಕಿದರೆ ಮಗುವಿನ ಉಸಿರಾಟದ ಕ್ರಿಯೆ ನಿಂತು ಅಪಾಯ ಸಂಭವಿಸಬಹುದು.. ಬಹಳ ಎಚ್ಚರವಾಗಿರಿ..

ಔಷಧಿ ಬಾಟಲ್ ಗಳು

ಖಾಲಿಯಾದ ಸಿರಪ್ ಅಥವಾ ಬೇರೆ ಯಾವುದೇ ಖಾಲಿಯಾದ ಬಾಟಲ್ ಗಳನ್ನು ಮಕ್ಕಳ ಕೈಗೆ ಆಡಲು ಕೊಟ್ಟುಬಿಡುತ್ತಾರೆ‌… ಯಾರೂ ಕೂಡ ಈ ತಪ್ಪನ್ನು ಮಾಡಬೇಡಿ.. ಬಾಟಲಿಯಲ್ಲಿ ಚೂರು ಪಾರು ಔಷಧಿ ಇದ್ದೇ ಇರುತ್ತದೆ.. ಅದು ಮಗುವಿನ ದೇಹದೊಳಗೆ ಹೋದರೆ ಅದರಿಂದ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ..

ಶೇರ್ ಮಾಡಿ ಎಲ್ಲಾ ಪೋಷಕರಿಗೂ ಉಪಯೋಗವಾಗಲಿ..

Also Read: ಮೂಲವ್ಯಾಧಿ ಇದೆಯಂಥ ವ್ಯಥೆ ಪಡಬೇಡಿ, ಈ ಮನೆಮದ್ದನ್ನು ಪಾಲಿಸಿ ಬೇಗೆ ನಿವಾರಣೆ ಹೊಂದಿ..