ಅಡಿಗೆ ಮನೆಯ ಸ್ವಚ್ಛತೆಯ ಬಗ್ಗೆ ಕೆಲವು ಸಿಂಪಲ್ ಟಿಪ್ಸ್ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ…!!

0
912

ಇಂದಿನ ಗಜಿಬಿಜಿ ಬದುಕಿನಲ್ಲಿ ಅನೇಕ ಒತ್ತಡಗಳ ನಡುವೆ ಸಿಕ್ಕಿ ಒದ್ದಾಡುವ ಮಂದಿ ಅನೇಕ ಅಡಿಗೆ ಮನೆಯ ಸ್ವಚ್ಛತೆಯ ಬಗ್ಗೆ ಅನೇಕ ತೊಂದರೆಗಳಿಗೆ ಗುರಿಯಾಗುತ್ತಿದ್ದಾರೆ. ಹಾಗೇ ಆಹಾರ ತಯಾರುಮಾಡುವಾಗ ಅಡಿಗೆ ಮನೆಯ ಸ್ವಚ್ಛತೆಯ ಬಗ್ಗೆ ಕೆಲವು ಸಿಂಪಲ್ ಟಿಪ್ಸ್ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ….

 • ಗಡಿಬಿಡಿಯಲ್ಲಿ ಅಡುಗೆ ಮಾಡೋ ಹೊತ್ತಿಗೆ ಪಾತ್ರೆ ಸೀದು ಹೋಗಿದ್ದರೆ ಚಿಂತೆ ಬೇಡ. ಒಂದೆರಡು ಎಸಳು ಈರುಳ್ಳಿ ಹಾಗೂ ಬಿಸಿ ನೀರು ಹಾಕಿ ತಿಕ್ಕಿ ತೊಳೆಯಿರಿ. ಅದಲ್ಲದೆ ಸಿದಿ ಹೋದ ಪಾತ್ರೆಗೆ ಒಂದು ಎರಡು ನಿಂಬೆ ಹಣ್ಣಿನ ಹೋಳನ್ನು ಹಾಕಿ ನೀರು ಹಾಕಿ ಕುಡಿಸಿ ನಂತರ ಸ್ವಲ್ಪ ಅಡಿಗೆ ಸೋಡಾ ಹಾಕಿ ತಿಕ್ಕಿದರೆ ಕಲೆ ಎಲ್ಲಾ ಮಾಯಾ…
 • ಹಳೆಯ ಮಸ್ಕರಾ ಬ್ರಷ್‌ ಅನ್ನು ಬಿಸಾಡಬೇಡಿ. ಅದು ಬಾಟಲಿ ತೊಳೆಯಲು ಸಹಕಾರಿ.
 • ಪಾತ್ರೆ ತೊಳೆಯಲು ಸೋಪಿಗಿಂತ ಸೀಗೆಕಾಯಿ ಬಳಸಿ.
 • ಅಡಿಗೆ ಮನೆಯಲ್ಲಿ ಸಿಂಕಿನ ಮೂಲೆ ಸುತ್ತ ಪೂರ್ತಿಯಾಗಿ ಶುಚಿಗೊಳಿಸಲು ವಿನೆಗರ್ ಉತ್ತಮ. ವಿನೆಗರ್ ಹನಿ ಯನ್ನು ನಲ್ಲಿಯ ಸುತ್ತಲೂ ಹಾಕಿ. ಉಪಯೋಗಿಸಿ ಬಿಟ್ಟ ಟೂತ್ ಬ್ರಶ್ ನಿಂದ ಮೂಲೆ ಮೂಲೆ ಯನ್ನು ಉಜ್ಜಿದರೆ ಮತ್ತಷ್ಟು ಶುಚಿಗೊಳ್ಳುತ್ತದೆ.
 • ಊಟದ ಮಧ್ಯೆ ಮೆಣಸಿನ ಕಾಯಿ ಬಾಯಿಗೆ ಸಿಕ್ಕರೆ ಒಂದು ಚಮಚ ತೆಂಗಿನ ಎಣ್ಣೆ ಅಥವಾ ಮಜ್ಜಿಗೆ ಕುಡಿಯಿರಿ. ನೀರು ಅಥವಾ ಸಕ್ಕರೆ ಬೇಡ.
 • ಸಾಂಬಾರ್‌ಗೆ ಉಪ್ಪು ಹೆಚ್ಚಾದರೆ ಆಲೂಗಡ್ಡೆ ಚೂರುಗಳನ್ನು ಸಾಂಬಾರ್‌ ಜತೆ ಸೇರಿಸಿ.
 • ಓವೆನ್ ನಲ್ಲಿ ಸುಟ್ಟಿದ ಅಥವಾ ಅಡಿಗೆ ಪದಾರ್ಥ ಸಿಡಿದು ಆದಂತಹ ಕಲೆಗಳಿಗ ಶುಚಿಗೊಳಿಸಲು ವಿನೆಗರ್ ಮತ್ತು ಅಡಿಗೆ ಸೋಡಾ ಉತ್ತಮ. ಮೊದಲಿಗೆ ವೆನಿಗರ್ ಅನ್ನು ಸಿಂಪಡಿಸಿ ನಂತರ ಅದರ ಮೇಲೆ ಅಡಿಗೆ ಸೋಡಾವನ್ನು ಹಾಕಿ 2 ನಿಮಿಷದ ನಂತರ ಬ್ರಶ್ ತೆಗೆದುಕೊಂಡು ಶುಚಿಗೊಳಿಸಿದರೆ ಅದರಲ್ಲಿ ಅಂಟಿಕೊಂಡಿದ್ದ ಕಲೆಗಳು ಮಾಯವಾಗಿ ಹೊಸ ಹೊಳಪನ್ನು ಪಡೆದುಕೊಳ್ಳುತ್ತದೆ.
 • ವಿನೆಗರ್‌ ಮತ್ತು ನೀರನ್ನು ಮಿಶ್ರ ಮಾಡಿ ನೆಲವನ್ನು ಸ್ವಚ್ಛಗೊಳಿಸಿದರೆ ಅಡುಗೆ ಕೋಣೆ ಹೊಳಪು ಬರುತ್ತದೆ.
 • ಅಡುಗೆ ಕೋಣೆಯಲ್ಲಿ ಸ್ಪಾಂಜ್‌ ಬಳಸುವ ಬದಲು ಪೇಪರ್‌ ನ್ಯಾಪ್‌ಕಿನ್‌ ಬಳಸಬಹುದು. ಸ್ಪಾಂನಲ್ಲಿ ಬೇಗನೆ ಬ್ಯಾಕ್ಟೀರಿಯಾಗಳು ಆವರಿಸಿಕೊಳ್ಳುತ್ತದೆ. ಪೇಪರ್‌ ನ್ಯಾಪ್‌ಕಿನ್‌ ಬಳಸಿ ಬಿಸಾಡಬಹುದು.
 • ನಿಂಬೆ ಅಥವಾ ಕಿತ್ತಳೆ ಸಿಪ್ಪೆಯನ್ನು ವಿನೆಗರ್‌ನಲ್ಲಿ ಹಾಕಿ ಸ್ವಲ್ಪ ಸಮಯ ಬಿಡಬೇಕು. ಇದು ಅಡುಗೆ ಮನೆಯ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.
 • ಸಕ್ಕರೆ ಡಬ್ಬಿಗೆ ಇರುವೆ ಬಂದರೆ ಅದಕ್ಕೆ ಒಂದು ಲವಂಗ ಹಾಕಿಡಿ.