ಮಾನಹಾನಿ ಪ್ರಕರಣ ಕೇಜ್ರಿವಾಲ್ ಗೆ ನೋಟಿಸ್ ನೀಡಿದ ಹೈಕೋರ್ಟ್..!

0
575

ಅರವಿಂದ್ ಕೇಜ್ರಿವಾಲ್ ಅವರ ವಕೀಲ ರಾಮ್ ಜೇಟ್ಮಲಾನಿ ತಮ್ಮ ವಿರುದ್ಧ ‘ಮೋಸಗಾರ’ ಎಂಬ ಪದ ಬಳಸಿರುವುದಕ್ಕೆ, ದೆಹಲಿ ಮುಖ್ಯಮಂತ್ರಿ ವಿರುದ್ಧ ಮತ್ತೊಂದು ಮಾನಹಾನಿ ಪ್ರಕರಣ ದಾಖಲಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ೧೦ ಕೋಟಿ ರೂ ಪರಿಹಾರ ಕೇಳಿದ್ದಾರೆ. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದೆ.

Image result for arvind kejriwal

ಜಂಟಿ ರಿಜಿಸ್ಟಾರ್ ಪಂಕಜ್ ಗುಪ್ತ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದ್ದು, ಈ ಪ್ರಕರಣದ ವಿಚಾರಣೆಯನ್ನು ಜುಲೈ ೨೬ ಕ್ಕೆ ಮುಂದೂಡಲಾಗಿದೆ .

ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಈ ಎರಡನೇ ನಾಗರಿಕ ಮಾನಹಾನಿ ಪ್ರಕರಣದಲ್ಲಿ ಜೇಟ್ಲಿ, ಆಕ್ಷೇಪಾರ್ಹ ಪದಗಳ ಬಳಕೆಯಿಂದ ತಮಗೆ ‘ಶಾಶ್ವತ ಹಾನಿ ಮತ್ತು ಅಗೌರವ’ ಉಂಟಾಗಿದೆ ಎಂದು ದೂರಿದ್ದಾರೆ.

Image result for jetly

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಮಿತಿಯಲ್ಲಿ ಅರುಣ್ ಜೇಟ್ಲಿ ಅಕ್ರಮ ಎಸಗಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಕ್ಕೆ ಈ ಹಿಂದೆ ಅವರ ಮತ್ತು ಐವರು ಆಮ್ ಆದ್ಮಿ ಪಕ್ಷದ ವಿರುದ್ಧ ೨೦೧೫ ರಲ್ಲಿ ಜೇಟ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಇದು ಸದ್ಯಕ್ಕೆ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ.