ಕೆಮ್ಮಿಗೆ ಮನೆಮದ್ದು

0
1669

ಬಿಸಿ ಹಾಲು, ಕರಿಮೆಣಸಿನ ಪುಡಿ ಮತ್ತು ಅರಿಶಿಣದ ಮಿಶ್ರಣವು ಗಂಟಲನ್ನು ಶಮನಗೊಳಿಸಿ ಕೆಮ್ಮು ಹಾಗೂ ಶೀತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಬಿಸಿ ಹಾಲು ಗಂಟಲಿನಲ್ಲಿರುವಂತಹ ಕಫವನ್ನು ದೂರಮಾಡುತ್ತದೆ. ಇದರಿಂದ ಕೆಮ್ಮು ಹಾಗೂ ಗಂಟಲಿನಲ್ಲಿ ಉಂಟಾಗುವಂತಹ ಕಿರಿಕಿರಿ ಕಡಿಮೆಯಾಗಿ ಪರಿಹಾರ ಸಿಗುತ್ತದೆ.

ಅರಿಶಿಣ ಮತ್ತು ಕರಿಮೆಣಸಿನಲ್ಲಿ ಉರಿಯೂತ ಶಮನಕಾರಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವ ಕಾರಣದಿಂದ ಬ್ಯಾಕ್ಟೀರಿಯಾದಿಂದ ಆಗುವಂತಹ ಸೋಂಕನ್ನು ನಿವಾರಣೆ ಮಾಡುತ್ತದೆ. ಇದರಿಂದ ಸಾಮಾನ್ಯ ಶೀತ ಹಾಗೂ ಕೆಮ್ಮನ್ನು ಶಮನ ಮಾಡುತ್ತದೆ. ಮುಂದಿನ ಸಲ ನಿಮಗೆ ಕೆಮ್ಮು ಹಾಗೂ ಶೀತ ಕಾಣಿಸಿಕೊಂಡರೆ, ಅರಿಶಿಣ, ಕರಿಮೆಣಸಿನ ಪುಡಿ ಹಾಕಿ ಬಿಸಿಹಾಲು ಕುಡಿಯಿರಿ. ಇದು ಖಂಡಿತವಾಗಿಯೂ ನಿಮ್ಮ ಶೀತ ಹಾಗೂ ಕೆಮ್ಮನ್ನು ನಿವಾರಿಸುವುದು.

* ಕಫವಿರುವ ಒಣ ಕೆಮ್ಮು ಕಾಡುತ್ತಿದ್ದರೆ ದಾಳಿಂಬೆ ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ನಾಲ್ಕೈದು ಸಲ ಸೇವಿಸಬೇಕು.

* ಒಂದೆರಡು ದಿನಗಳ ಕೆಮ್ಮು , ಕಫಗಳಿದ್ದರೆ ಎರಡು ಚಮಚ ನಿಂಬೆರಸ, ಎಂಟು ಚಮಚ ಬಿಸಿ ನೀರು ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ನಾಲ್ಕೈದು ಬಾರಿ ಕುಡಿಯಬೇಕು.

* ಎದೆಯಲ್ಲಿ ಕಫ ಒಣಗಿ ಬಹುದಿನಗಳವರೆಗೆ ಕಷ್ಟದಿಂದ ಕೆಮ್ಮುವವರು ನಾಲ್ಕು ಚಮಚ ಈರುಳ್ಳಿ ರಸ,ಒಂದು ಚಮಚ ಜೇನುತುಪ್ಪ ಸೇರಿಸಿ ಪ್ರತಿದಿನ ಮೂರು ಸಾರಿ ಕುಡಿದರೆ ಕಫ ಸಡಿಲವಾಗಿ ಕೆಮ್ಮು ಗುಣವಾಗುವುದು.

* ಒಂದು ಬೆಳ್ಳುಳ್ಳಿ ಎಸಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಅದನ್ನು ಒಂದು ಕಪ್ ಹಾಲಿನಲ್ಲಿ ಚೆನ್ನಾಗಿ ಕುದಿಸಿ.ನಂತರ ಈ ಹಾಲಿಗೆ ಕಾಲು ಚಮಚ ಅರಿಶಿನದ ಪುಡಿ ಸೇರಿಸಿ ಕುಡಿಯಿರಿ.ಇದು ಎಲ್ಲಾ ರೀತಿಯ ಕೆಮ್ಮುಗಳ ನಿವಾರಣೆಗೆ ಪರಿಣಾಮಕಾರಿಯಾದ ವಿಧಾನವಾಗಿದೆ.