ಕೊನೆಗೂ ಕನ್ನಡ ಹೋರಾಟಗಾರರಿಗೆ ಸಿಕ್ಕಿದೆ ಜಯ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾರಾಜಿಸುತ್ತಿದೆ ಕಸ್ತೂರಿ ಕನ್ನಡ !!

0
599

ಬೆಂಗಳೂರು ವಿಮಾನ ನಿಲ್ದಾಣದ ಕನ್ನಡ-ಕನ್ನಡಿಗ-ಕರ್ನಾಟಕ ವಿರೋದಿ ಧೋರಣೆಯು ಹಲವು ದಿನಗಳಿಂದ ನೆಡೆಯುತ್ತ ಬಂದಿರುವುದನ್ನು ನೀವು ಕೇಳಿಯೇ ಇರುತ್ತೀರಾ. ಅವಗಳಲ್ಲಿ ವಿಮಾನ ನಿಲ್ದಾಣದಲ್ಲಿರುವ ಕಾವಲುಗಾರರೊಡನೆ ಕನ್ನಡದಲ್ಲಿ ಮಾತನಾಡಿ ಅವರಿಂದ ಬೈಯಿಸಿಕೊಂಡ ಉದಾಹರಣೆಗಳಿವೆ, ಹೊರಡುವ ಮತ್ತು ಬರುವ ವಿಮಾನಗಳ ಬಗ್ಗೆ ಟಿವಿಗಳಲ್ಲಿ ತೋರಿಸುವ ಮಾಹಿತಿ ಬರಿಯ ಇಂಗ್ಲೀಶ್ /ಹಿಂದಿಯಲ್ಲಿದೆ, ವಿಮಾನ ನಿಲ್ದಾಣದ ಒಳಗೆ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಸೂಚನೆಗಳನ್ನು ನೀಡಲಾಗುತ್ತಿದೆ. ಆದರೆ ಈಗ ವಿಮಾನ ನಿಲ್ದಾಣದಲ್ಲಿ ಕನ್ನಡ ಕಂಪನ್ನು ಇನ್ನು ಮುಂದೆ ನೀವು ನೋಡುವಿರಿ. ಏಕೆಂದರೆ ನಮ್ಮ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ವಿಮಾನಗಳ ವಿವರಗಳನ್ನು ಕನ್ನಡದಲ್ಲಿ ಹಾಕಲಾಗುತ್ತಿದೆ. ಇದು ಸಂತೋಷದ ವಿಚಾರ.

ಇತ್ತೀಚಿಗೆ ಆಗಸ್ಟ್ ನಲ್ಲಿ ನಮ್ಮ ರಾಜ್ಯಗಳ ವಿಮಾನ ನಿಲ್ದಾಣಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲಾಗಿತ್ತು, change.org ಮೂಲಕ ಆನ್‍ಲೈನ್ ಸಹಿ ಸಂಗ್ರಹ ಅಭಿಯಾನವನ್ನು ಕನ್ನಡ ಗ್ರಾಹಕ ವೇದಿಕೆ ಆರಂಭಿಸಿದ್ದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಆಗಮನ – ನಿರ್ಗಮನದ ವಿವರಗಳನ್ನು ಕನ್ನಡದಲ್ಲಿ ಪ್ರಕಟಣೆ ಮಾಡಬೇಕು.

ಎಲ್ಲ ವಿಮಾನಯಾನ ಕಂಪನಿಗಳು ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡದಲ್ಲೇ ಎಲ್ಲ ಸೇವೆ ನೀಡಬೇಕು ಎಂದು change.org ಮೂಲಕ ಆನ್‍ಲೈನ್‍ ಅಭಿಯಾನ ನಡೆಸಲಾಗಿತ್ತು. ಅಷ್ಟೇ ಅಲ್ಲ ಇತ್ತೀಚೆಗಷ್ಟೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡವಿಲ್ಲ ಎಂಬ ಕಾರಣಕ್ಕೆ ಫೋಟೋ ತೆಗೆದು, ಅಲ್ಲಿದ್ದ ಅಧಿಕಾರಿಯೊಬ್ಬರಿಗೆ ಪ್ರಶ್ನೆಯನ್ನೂ ಮಾಡಲಾಗಿತ್ತು. ಆಯಾ ರಾಜ್ಯದ ಜನರ ಹಿತದೃಷ್ಟಿಯಿಂದ ಮತ್ತು ಪ್ರಾದೇಶಿಕ ಭಾಷೆಯನ್ನು ಉಳಿಸುವ ದೃಷ್ಟಿಯಿಂದ ವಿಮಾನ ನಿಲ್ದಾಣಗಳಲ್ಲಿ ಪ್ರಾದೇಶಿಕ ಭಾಷೆ ಬಳಸಬೇಕು. ಈಗ ಅದಕ್ಕೆ ಪ್ರತಿಫಲ ಸಿಕ್ಕಂತಾಗಿದೆ.