ಮನುಷ್ಯನ ಮಲದಿಂದ ಅಡುಗೆ ಮಾಡಿ ತಿನ್ನುತ್ತಿದ್ದಾರೆ ಈ ಜನ, ವಿಚಿತ್ರವಾಗಿದ್ದರು ಇದು ನಿಜ…!

0
661

ಈಗಿನ ಸ್ಮಾರ್ಟ್ ಯುಗದಲ್ಲಿ ಜನರು ಏನೇನೊ ಪ್ರಯೋಗ ಮಾಡುತ್ತಿದ್ದಾರೆ, ಕೆಲವು ಯಶಸ್ವಿಯಾಗುತ್ತವೆ, ಇನ್ನು ಕೆಲವು ಸೋತರು, ಜನರಿಗೆ ಸಂದೇಶವನ್ನು ನೀಡುತ್ತವೆ. ಈಗ ಕೆಲ ವರ್ಷಗಳಿಂದ ಇಂಧನದ ಬೆಲೆ ಗಗನಕ್ಕೇರುತ್ತಿದೆ ಸರ್ಕಾರ ಇದರ ಬಗ್ಗೆ ಎಷ್ಟು ಕ್ರಮ ಕೈಗೊಂಡರು ಸಹ ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಪ್ರಮುಖ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ, ಆದರೆ ಈ ಜನಸಂಖ್ಯೆಯನ್ನೇ ಬಳಸಿಕೊಂಡು ಒಂದು ಹೊಸ ಇಂಧನದ ಆವಿಷ್ಕಾರ ಮಾಡಿದ್ದಾರೆ. ಇಂದು ನಾವು ನಿಮಗೆ ಈ ಹೊಸ ರೀತಿಯ ಅಡುಗೆಗೆ ಬಳಸಬಹುದಾದ ಇಂಧನದ ಬಗ್ಗೆ ಹೇಳುತ್ತೇವೆ.

ಈ ಇಂಧನದಲ್ಲಿ ಏನು ವಿಶೇಷ, ಜನರಿಂದ ಹೇಗೆ ಇಂಧನ ತೈಯಾರಿಸ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಮನುಷ್ಯನ ತ್ಯಾಜ್ಯ. ಹೌದು, ಮನುಷ್ಯನ ತ್ಯಾಜ್ಯದಿಂದ ಅಡುಗೆ ಅನಿಲವನ್ನು ಮಾಡಬಹುದೆಂದು ಅದರಿಂದ ಸಾಂಪ್ರದಾಯಿಕ ಅನಿಲದ ಬೇಡಿಕೆಯನ್ನು ಕಡಿಮೆ ಮಾಡಿ ಪರ್ಯಾಯ ಇಂಧವನ್ನಾಗಿ ಬಳಸಬಹುದೆಂದು ಕೀನ್ಯಾ ದೇಶದ ಒಂದು ಕಂಪನಿ ತೋರಿಸಿಕೊಟ್ಟಿದೆ.

ಮೊದಲು ಮನ್ಯುಷ್ಯನ ಮಲವನ್ನು ಸಂಗ್ರಹಿಸಿ ಅದನ್ನು ಕಟ್ಟೆಗಳಲ್ಲಿ ತುಂಬಿ ಅದನ್ನು ಎರಡರಿಂದ ಮೂರು ವಾರದವರೆಗೆ ಬಿಸಿಲಲ್ಲಿ ಒಣಗಿಸಿ ನಂತರ ಅದನ್ನು ಬಳಸಲು ಯೋಗ್ಯ ಮಾಡುವುದಕ್ಕಾಗಿ 648 ಡಿಗ್ರಿ ಬಿಸಿಯಲ್ಲಿ ಒಲೆಯಲ್ಲಿ ಹಾಕಲಾಗುತ್ತದೆ. ಅನಂತರ ಬಂದ ಪುಡಿ ರೂಪದಲ್ಲಿರುವ ಮಲವನ್ನು ಮಷೀನ್ ಸಹಾಯದಿಂದ ಗೋಲಾಕಾರದಲ್ಲಿ ಕಟ್ಟಿ ಅಥವಾ ಬಾಲ್ ರೀತಿ ಮಾಡಿ ಬಳಸುತ್ತಿದ್ದಾರೆ.

ಇದ್ದಿಲಿನ ಬದಲಾಗಿ ಈ ಬಾಲ್ ರೀತಿಯ ಅನಿಲವನ್ನು ಒಲೆಯಲ್ಲಿ ಹಾಕಿ ಅಡುಗೆ ಮಾಡುತ್ತಿದ್ದಾರೆ. ಈ ಮಲದಿಂದ ಕೂಡಿದ ಅನಿಲದಿಂದ ಯಾವುದೇ ಕೆಟ್ಟ ವಾಸನೆ ಬರುವುದಿಲ್ಲ ಹಾಗು ಇದು ಸಂಪೂರ್ಣವಾಗಿ ಸುಡುವುದಿಲ್ಲದ ಕಾರಣ ಬೂದಿಯಾಗುವುದಿಲ್ಲ, ಇದರಿಂದ ಇದು ಪರಿಸರ ಸ್ನೇಹಿಯಾಗಿದೆ ಎಂಬುದು ಅವರ ವಾದ.

ಮಲ ಸಂಗ್ರಹಣೆಗಾಗಿಯೇ ಇವರು ಕೀನ್ಯಾದೆಲ್ಲೆಡೆ ವಿಶಿಷ್ಟ ರೀತಿಯ ಸುಮಾರು 6000 ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಮೊದಲಿಗೆ ಜನ ಇದರಿಂದ ಮಾಡಿದ ಆಹಾರವನ್ನು ಬಳಸಲು ಹಿಂದೇಟು ಹಾಕಿದರು, ಆದರೆ ಜನ ಈಗ ಯಾವುದೇ ಸಂಕೋಚವಿಲ್ಲದೆ ಸ್ವೀಕರಿಸುತ್ತಿದ್ದಾರೆ.