ತನ್ನ ಜೀವನವನ್ನೇ ತ್ಯಾಗ ಮಾಡಿ ಮಗನ ಭವಿಷ್ಯಕ್ಕಾಗಿ ಶ್ರಮಿಸಿದ ಅಮ್ಮನಿಗೆ ಪುನರ್ ವಿವಾಹ ಮಾಡಿಸಿದ ಮಗ; ತಾಯಿಗೆ ಶುಭಾಶಯ ತಿಳಿಸಿದ್ದು ಹೀಗೆ..

0
803

ಈ ಭೂಮಿ ಮೇಲೆ ತಾಯಿ ಪ್ರೀತಿಗಿಂತ ದೊಡ್ಡದು ಯಾವ ಸಿರಿ ಸಂಪತ್ತು ಇಲ್ಲ, ಎನ್ನುವುದು ಎಲ್ಲರಿಗೂ ತಿಳಿದಿರುವ ಮಾತಾದರೆ. ಮದುವೆಯಾಗಿ ಗಂಡನಿಂದ ಎಷ್ಟೇ ಹಿಂಸೆಯಾದರು ಸಹ, ತನ್ನ ಮಕ್ಕಳ ಜೀವನಕ್ಕಾಗಿ ತನ್ನ ಇಡಿ ಜೀವನವನ್ನೇ ಸಹಿಸಿಕೊಂಡು ಇರುತ್ತಾಳೆ, ಒಂದು ವೇಳೆ ಪತಿಯಿಂದ ದೂರವಾದರೂ ತಾಯಿ ಹೇಗೋ ಮಕ್ಕಳನ್ನು ಸಾಕಿ ಸಲುಹುವ ಶಕ್ತಿಯನ್ನು ಪಡೆದಿರುತ್ತಾಳೆ, ಇಂತಹ ತಾಯಿಗೆ ಮಕ್ಕಳ ಭವಿಷ್ಯದ ಮೇಲೆ ಕನಸುಗಳು ಬಿಟ್ಟರೆ ತಾನು ಯಾವತ್ತು ಮರುಮದುವೆ ಆಗುವ ಯೋಚನೆ ಕೂಡ ಮಾಡೋದಿಲ್ಲ. ಇಂತಹ ಅಮ್ಮನಿಗೆ ಪುನರ್ ವಿವಾಹ ಮಾಡಿಸಿದ ಮಗ ಆಕೆಗೆ “ಹ್ಯಾಪಿ ಮ್ಯಾರಿಡ್ ಲೈಫ್ ವಿಶ್ ಮಾಡಿ ಭಾವನಾತ್ಮಕವಾಗಿ. ಫೇಸ್ಬುಕ್ ನಲ್ಲಿ ತನ್ನ ಅಮ್ಮನ ವಿವಾಹದ ಬಗ್ಗೆ ಬರೆದುಕೊಂಡಿದ್ದಾನೆ.

Also read: ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..

ಹೌದು ಮಕ್ಕಳಿಗೆ ತಾಯಿ ಮದುವೆ ಮಾಡಿಸುವುದು ಸಾಮಾನ್ಯವಾದರೆ. ತಾಯಿಗೆ ಮಗ ಮದುವೆ ಮಾಡಿಸಿಸುವುದು ಒಂದು ಅಪರೂಪದ ಮದುವೆ ಅನಿಸುತ್ತೆ, ಇಂತಹ ಮದುವೆ ಮಾಡಿದ ಮಗ ತನ್ನ ಅಮ್ಮನ ಜೀವನಕ್ಕೆ ಶುಭಾಶಯ ಕೋರಿ ಬರೆದುಕೊಂಡು, ಜೀವನದಲ್ಲಿ ಅವಳು ಅನುಭವಿಸಿದ ನೋವನ್ನು ನೆನಪಿಸಿ. ಮರು ಮದುವೆಯನ್ನು ವಿಷಯ ಗುಟ್ಟಾಗಿಡುವುದೇಕೆ? ಇದು ಸಮಾಜದಲ್ಲಿ ಮುಂದುವರೆಯಲು ಎಂದು ಪೋಸ್ಟ್ ಮಾಡಿದ್ದು ಬಾರಿ ವೈರಲ್ ಆಗಿದೆ.

ಏನಿದು ಮಗನ ಭಾವುಕ ಪತ್ರ?

ಹೌದು ಕೇರಳದ ಕೊಲ್ಲಂ ಜಿಲ್ಲೆಯ 23 ವರ್ಷದ ಗೋಕುಲ್ ಶ್ರೀಧರ್ ಎಂಬಾತ ತನ್ನ ಅಮ್ಮನ ಪುನರ್‌ವಿವಾಹಕ್ಕೆ ಶುಭಾಶಯ ಕೋರಿದ್ದಾನೆ. ಇದೇ ವೇಳೆ ತನ್ನ ಅಮ್ಮ ಮಾಡಿದ ತ್ಯಾಗವನ್ನೂ ನೆನಪಿಸಿಕೊಂಡು. ಬರೆದು ನನ್ನನ್ನು ಹೆತ್ತು, ನನಗಾಗಿ ಬದುಕು ನಡೆಸಿಕೊಂಡು ಬಂದು, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ನನ್ನ ತಾಯಿಯ ಮೊದಲನೇ ಮದುವೆಯಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ. ನನಗೆ ಗೊತ್ತಿರುವ ಒಂದು ಎಂದರೆ ಒಮ್ಮೆ ನನ್ನ ತಾಯಿ ಪತಿಯಿಂದ ಹೊಡೆಸಿಕೊಂಡು ತಲೆಯಿಂದ ರಕ್ತ ಸೋರುತ್ತಿದ್ದನ್ನು ನೋಡಿದೆ. ಆಗ ನಾನು ಯಾಕೆ ಇಷ್ಟು ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಅಮ್ಮ ನಿನಗಾಗಿ ನಾನು ಬದುಕುತ್ತಿದ್ದೇನೆ. ಹೀಗಾಗಿ ನಿನಗಾಗಿ ನಾನು ಇದೆಲ್ಲವನ್ನು ಸಹಿಸಿಕೊಳ್ಳುತ್ತಿರುವುದು ಎಂದು ಹೇಳಿದ್ದರು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದು.

ನನ್ನನ್ನು ಹೆತ್ತು, ನನಗಾಗಿ ಜೀವನ ಸಾಗಿಸಿ, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ನನ್ನ ತಾಯಿಗೆ ಏನೆಂದು ಹೇಳಲಿ? “ಅಪ್ಪನಿಂದ ಅಮ್ಮ ದಿನವೂ ಹಿಂಸೆ ಅನುಭವಿಸುವುದು ನೋಡಲಾಗದೆ, ನಾವು ಒಮ್ಮೆ ಆ ಮನೆಯಿಂದ ಆಚೆ ಬಂದೆವು. ನಾನು 10ನೇ ತರಗತಿಯಲ್ಲಿದ್ದೆ. ನಾನು ಅಮ್ಮನ ಕೈ ಹಿಡಿದು ಆ ಮನೆಯಿಂದ ಹೊರಗೆ ಬರುವಾಗಲೇ ನಿರ್ಧರಿಸಿದ್ದೆ, ಅಮ್ಮನಿಗೆ ಮರುಮದುವೆ ಮಾಡಬೇಕು ಎಂದು. ನನ್ನ ಅಮ್ಮ ತನ್ನ ತಾರುಣ್ಯವನ್ನು ನನಗೋಸ್ಕರ ತ್ಯಾಗ ಮಾಡಿದಳು, ಆಕೆಗೆ ಎಷಹ್ಟೋ ಕನಸುಗಳಿದ್ದವು, ಅವನ್ನೂ ನನಗೋಸ್ಕರ ಮರೆತಳು. ನಾನು ಇನ್ನು ಏನನ್ನೂ ಹೇಳಲು ಇಷ್ಟಪಡುವುದಿಲ್ಲ.

ನನ್ನ ತಾಯಿ ಶಿಕ್ಷಕಿಯಾಗಿದ್ದರು, ಆದರೀಗ ಅಮ್ಮ ಕೆಲಸ ಬಿಟ್ಟಿದ್ದಾರೆ. ಹೀಗಿರುವಾಗ ನಾನು ಉದ್ಯೋಗಕ್ಕಾಗಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾಳೆ. ಆರಂಭದಲ್ಲೇ ತೆಗೆದುಕೊಂಡ ನಿರ್ಧಾರದಂತೆ ಅಮ್ಮನಿಗೆ ಪುನರ್‌ವಿವಾಹ ಆಗಲು ಹೇಳುತ್ತಿದ್ದೆ. ಆದರೆ ಅಮ್ಮ ಬೇಡವೆನ್ನುತ್ತಿದ್ದಳು. ಆಕೆಯ ಸಹೋದ್ಯೋಗಿ ಕಡೆಯಿಂದ ವಿವಾಹ ಸಂಬಂಧ ಬಂದಿತ್ತು. ಅಮ್ಮ ಮೊದಲು ಬೇಡ ಎಂದು ನಿರಾಕರಿಸಿದ್ದಳು. ಆದರೆ ಎಲ್ಲರೂ ಆಕೆಗೆ ಅರ್ಥೈಸಿ, ಒತ್ತಾಯಿಸಿದಾಗ ಒಪ್ಪಿಕೊಂಡಳು. ಇದು ನನಗೆ ಸಂತಸ ತಂದಿದೆ, ಅವರು ಹೀಗೆ ಸಂತೋಷದಿಂದ ಇರಲಿ ಎಂದು ಹೇಳಿಕೊಂಡಿದ್ದು ಬಾರಿ ಮೆಚ್ಚುಗೆ ಪಡೆದಿದೆ.

Also read: ಹೆಚ್ಐವಿ ಪೀಡಿತ ಮಕ್ಕಳ ತಂದೆ ಎಂದು ಹೆಸರುವಾಸಿಯಾದ ಈ ವ್ಯಕ್ತಿ, 47 ಏಡ್ಸ್ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ರಿಯಲ್ ಹೀರೋ ಯಾರು ಗೊತ್ತಾ??