ಈ ಹೋಟೆಲ್-ನಲ್ಲಿ ಬೆಳಿಗ್ಗೆ ವೇಳೆ ಉಚಿತ ಊಟ ಕೊಡುತ್ತಾರಂತೆ, ಮತ್ತೆ ರಾತ್ರಿ ವೇಳೆ ಈ ಹೋಟೆಲ್ ಗ್ರಂಥಾಲಯ ಆಗುತ್ತಂತೆ!!

0
464

Kannada News | Karnataka Achiecers

ಹಸಿವು, ಬಡತನ ಭಾರತದಲ್ಲಿ ಕಾಣುವ ದೊಡ್ಡ ಸಮಸ್ಯೆ ಈ ನಿಟ್ಟಿನಲ್ಲಿ, ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಲವು ಜನಪರ ಕಾರ್ಯವನ್ನು ಮಾಡುತ್ತಿವೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ಕಡಿಮೆ ದುಡ್ಡಿನಲ್ಲಿ ಊಟ ಹೀಗೆ ಹಲವು ಯೋಜನೆಗಳು ಹಸಿದವರ ಹೊಟ್ಟೆ ತಣ್ಣಗಾಗಿಸುತ್ತಿವೆ. ಆದ್ರೆ ಕೇರಳದಲ್ಲೊಂದು ಹೊಟೇಲ್ ಇದೆ. ಈ ಹೋಟೆಲ್ ನಲ್ಲಿ ಊಟ ಮಾಡಿದ್ರೆ ದುಡ್ಡು ಕೊಡಬೇಕಾಗೇ ಇಲ್ಲ.

ಹೌದು.. ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ರಾಣಿ ಹಾಗೂ ಕೊಂಜನ್‍ಚರಿ ಎಂಬ ಎರಡು ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಜನರಿಗೆ ಉಚಿತ ಊಟ ನೀಡುವ ವ್ಯವಸ್ಥೆ ಇದೆ. ಈ ಹೋಟೆಲ್ ಆರಂಭಿಸಿದಾಗ ಮಾಲೀಕರು ಕಡಿಮೆ ಬೆಲೆಯಲ್ಲಿ ಊಟ ನೀಡುವ ಯೋಜನೆಯನ್ನು ಹಾಕಿಕೊಂಡಿದ್ರು. ಅದರಂತೆ ಊಟಕ್ಕೆ 25 ಹಾಗೂ ತಿಂಡಿಗೆ 15 ರೂ. ನಿಗದಿ ಮಾಡಲಾಗಿತ್ತು.

ಆದ್ರೆ ಮಾಲೀಕರಿಗೆ ಈ ಹಣ ಕೇಳುವ ಮನಸ್ಸು ಬರಲಿಲ್ಲ. ಕಾರಣ ಅವರು ಉಚಿತ ಊಟ ನೀಡಲು ಮುಂದಾದ್ರು. ಇನ್ನು ಯಾರಿಗೆ ಹಣ ನೀಡಬೇಕು ಎಂದು ಎನಿಸುತ್ತದೆಯೋ ಅವರಿಂದ ಹಣ ಪಡೆಯುತ್ತಿದ್ದರು.

ಈ ಹೋಟೆಲ್ 10 ಜನರ ಗುಂಪಿನಿಂದ ನಡೆಯುತ್ತದೆ. ಹೋಟೆಲ್ ಅಧ್ಯಕ್ಷ ಬೇಬಿ ಸ್ಯಾಮ್ ತಿಳಿಸುವಂತೆ, ನಾವು ಉತ್ತಮ ಗುಣ ಮಟ್ಟದ ಹಾಗೂ ಶಾಖ ಆಹಾರ ನೀಡುವುದೇ ನಮ್ಮ ಗುರಿ. ಉತ್ತಮ ಪೌಷ್ಠಿಕ ಆಹಾರ ಸೇವನೆಯಿಂದ ಮನಸ್ಸು ಹಾಗೂ ದೇಹ ಉಲ್ಲಾಸ ಭರಿತವಾಗಿರುತ್ತದೆ. ನಮ್ಮ ಹೋಟೆಲ್‍ಗೆ ಅಪ್ಪಕಟ್ಟು ಎಂಬ ಕಮ್ಯೂನಿಟಿ ತುಂಬ ಸಹಕಾರ ನೀಡಿದೆ ಎಂದು ಹೇಳುತ್ತಾರೆ.

ಇನ್ನು ಈ ಹೋಟೆಲ್‍ನ ಇನ್ನೊಂದು ವೈಶಿಷ್ಟತೆ ಇದೆ. ಈ ಹೋಟೆಲ್ ಸಂಜೆ ಆರು ಗಂಟೆಯವರೆಗೆ ಊಟ ನೀಡಿ, ನಂತರದಲ್ಲಿ ಜ್ಞಾನ ವೃದ್ಧಿಸುವ ಕೆಲಸವನ್ನು ಮಾಡುತ್ತಿದೆ. ಈ ಸೂರಿನಲ್ಲಿ ನಿಮಗೆ ಇಷ್ಟದ ಕವಿ, ಲೇಖಕ ಸಿಗುತ್ತಾರೆ ಎಂಬುದೇ ವಿಶೇಷ.

ರಾಣಿ ಊರಲ್ಲಿ ಇರುವ ಹೋಟೆಲ್‍ಗೆ ಹೊಂದಿಕೊಂಡಿರುವ ಗ್ರಂಥಾಲಯಇದೆ. ಇನ್ನು ಈ ಹೋಟೆಲ್ ಮಾಲೀಕರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತಮ್ಮ ಹೋಟೆಲ್ ಸ್ಥಾಪನೆ ಮಾಡಬೇಕು ಎಂಬ ಕನಸು ಹೊಂದಿದ್ದಾರೆ.

Also Read: ಮೊಬೈಲ್ ಸಿಮ್‘ಗೆ ಆಧಾರ್ ಕಡ್ಡಾಯ