ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ನೆರವಾಗಲು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾದ ಮಹಿಳೆ ಪೊಲೀಸ್.!

0
204

ಹೆಣ್ಣೆ ಆಗಲಿ ಗಂಡೇ ಆಗಲಿ ಕೂದಲು ಎನ್ನುವುದು ಬಹುಮುಖ್ಯವಾಗಿದೆ. ಏಕೆಂದರೆ ತಲೆಯಲ್ಲಿ ಕೂದಲು ಇಲ್ಲದೆ ಇದ್ದರೆ ಭಾವನಾತ್ಮಕವಾಗಿ ಜನರು ಕುಗ್ಗಿ ಅವರ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ತಲೆಯಲ್ಲಿ ಕೂದಲಿದ್ದರೆ ಪ್ರತಿಯೊಂದು ಕೆಲಸದಲ್ಲಿವೂ ದೈರ್ಯ, ನಂಬಿಕೆ ಹೆಚ್ಚಾಗಿರುತ್ತೆ. ಆದರೆ ಕ್ಯಾನ್ಸರ್ ಅಂತ ಕಾಯಿಲೆಗೆ ತುತ್ತಾಗಿ ಅದೆಷ್ಟೋ ಜನರು ಕೂದಲು ಕಳೆದುಕೊಂಡು ಕೊರಗುತ್ತಿದ್ದಾರೆ. ಇಂತಹವರ ನೋವನ್ನು ಕಂಡ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ಕೂದಲನ್ನೇ ದಾನ ಮಾಡಿ ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿಯಾಗಿ ಮಾದರಿಯಾಗಿದ್ದಾರೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

Also read: ಪೊಲೀಸರ ದೌರ್ಜನ್ಯದ ಸುದ್ದಿಗಳ ನಡುವೆ ಕದ್ದು ಸಿನೆಮಾ ನೋಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಜೀವನಕ್ಕೆ ದಾರಿ ಮಾಡಿ ಕೊಟ್ಟ ಈ ಪೋಲಿಸ್ ಎಲ್ಲರಿಗೂ ಮಾದರಿ!!

ಕ್ಯಾನ್ಸರ್ ರೋಗಿಗಳಿಗೆ ಕೂದಲು ನೀಡಿದ ಪೊಲೀಸ್

ಹೌದು ಕ್ಯಾನ್ಸರ್​ ರೋಗಿಗಳಿಗೆ ಕೀಮೋಥೆರಪಿ ನೀಡಿದ ಬಳಿಕ ಅವರ ಕೂದಲು ಉದುರುತ್ತದೆ. ಗಂಡಸರಾದರೆ ಕ್ಯಾಪ್ ಹಾಕಿಕೊಂಡೋ, ಸ್ಕಾರ್ಫ್​ ಸುತ್ತಿಕೊಂಡೋ ಬೋಳುತಲೆಯನ್ನು ಮರೆಮಾಚಿಕೊಳ್ಳುತ್ತಾರೆ. ಆದರೆ, ಮಹಿಳೆಯರ ತಲೆಯಲ್ಲಿನ ಕೂದಲು ಅವರ ಸೌಂದರ್ಯ ವೃದ್ಧಿಸುವುದು ಮಾತ್ರವಲ್ಲ ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಕೀಮೋಥೆರಪಿಯಿಂದ ತಲೆಗೂದಲು ಉದುರಲಾರಂಭಿಸಿದಾಗ ಮಹಿಳೆಯರು ಅದೇ ಯೋಚನೆಯಲ್ಲಿ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಅಂಥವರಿಗಾಗಿ ಟೋಪನ್​ಗಳನ್ನು ಮಾಡಲಾಗುತ್ತದೆ. ಅದಕ್ಕಾಗಿ ಕೂದಲು ಸಂಗ್ರಹಿಸಲು ಅನೇಕ ಎನ್​ಜಿಓಗಳು ಅಭಿಯಾನ ನಡೆಸುತ್ತಿರುತ್ತವೆ. ಆ ಅಭಿಯಾನದ ಭಾಗವಾಗಿ ಕೇರಳದ ಪೊಲೀಸ್ ಅಧಿಕಾರಿ ಅಪರ್ಣ ಲವಕುಮಾರ್ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.

Also read: ಕಷ್ಟದಲ್ಲಿರುವ ಮನೆ ಕೆಲಸದವಳಿಗೆ ಸಹಾಯ ಮಾಡಲು ರಸ್ತೆಬದಿ ಉಪಾಹಾರ ಮಾರುತ್ತಿದ್ದಾರೆ ಉನ್ನತ ಹುದ್ದೆಯಲ್ಲಿರುವ ದಂಪತಿಗಳು.!

ಈ ಮಹಿಳೆ ತನ್ನ ಸೌಂದರ್ಯ ಹಾಳಾಗುತ್ತೆ ಎಂಬುದನ್ನು ನೋಡದೆ ದಾನ ಮಾಡಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. 2016ರಲ್ಲಿ ಕೇರಳದ ತ್ರಿಶ್ಶೂರ್ ಜಿಲ್ಲೆಯ ಇರಿಂಜಲಕುಡದ 44 ವರ್ಷದ ಅಪರ್ಣಾ ಲವಕುಮಾರ್ ಎಂಬ ಸಿವಿಲ್‌ ಪೊಲೀಸ್‌ ಮಹಿಳಾ ಅಧಿಕಾರಿ 10 ವರ್ಷದ ಕ್ಯಾನ್ಸರ್‌ ಪೀಡಿತ ಬಾಲಕನನ್ನು ನೋಡಿದರು. ಅವನಿಗೆ ಕೀಮೋಥೆರಪಿ ಚಿಕಿತ್ಸೆ ಬಳಿಕ ಕೂದಲು ಸಂಪೂರ್ಣ ಉದುರಿತ್ತು. ಕ್ಯಾನ್ಸರ್‌ ರೋಗಕ್ಕಿಂತ ಬಾಲಕನ ಕೂದಲು ಇಲ್ಲದಿರುವುದನ್ನು ನೋಡಿ ಜನರು ಆಡಿಕೊಳ್ಳುತ್ತಿದ್ದರು. ಇದನ್ನು ನೋಡಿದ ಅಪರ್ಣಾ ತನ್ನ ಕೆಲವು ಇಂಚುಗಳಷ್ಟು ಕೂದಲು ಕತ್ತರಿಸಿಕೊಂಡು ರೋಗಿಗಳಿಗೆ ವಿಗ್‌ ತಯಾರಿಸುವ ಸ್ಥಳೀಯ ಸಂಸ್ಥೆಗೆ ದಾನ ಮಾಡಿದರು.

ಇತ್ತೀಚೆಗೆ ಸ್ಥಳೀಯ ಶಾಲೆಯೊಂದಕ್ಕೆ ಕ್ಯಾನ್ಸರ್ ಜಾಗೃತಿ ಮೂಡಿಸಲು ತೆರಳಿದ್ದಾಗ ಅಲ್ಲಿದ್ದ ಕ್ಯಾನ್ಸರ್​ ಪೀಡಿತ 5ನೇ ತರಗತಿಯ ಮಕ್ಕಳನ್ನು ನೋಡಿದಾಗ ಕೂದಲನ್ನು ದಾನ ಮಾಡುವ ಬಗ್ಗೆ ನಿರ್ಧರಿಸಿದ್ದಾಗಿ ಅಪರ್ಣ ಹೇಳಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗೊಳಗಾದ ವಿದ್ಯಾರ್ಥಿಯ ಶಿಕ್ಷಕಿ ಹೇಳಿದಂತೆ, ಆ ಬಾಲಕ ಕಾಯಿಲೆಗಿಂತ ಕೂದಲು ಇಲ್ಲದಿರುವುದೇ ದೊಡ್ಡ ತೊಂದರೆಯಾಗಿತ್ತು. ಜನರು ಇದನ್ನು ಹೆಚ್ಚು ಗುರುತಿಸಿದರು. ಅದೇ ರೀತಿ, ನಾನು ಕೂದಲು ಕತ್ತರಿಸಿಕೊಂಡ ಬಳಿಕವೂ ಜನರು ನನ್ನನ್ನು ಪ್ರಶ್ನೆ ಮಾಡತೊಡಗಿದರು. ಇದರಿಂದ ಅವರ ನೋವು ನನಗೆ ಅರ್ಥವಾಯಿತು ಎಂದು ತಿಳಿಸಿದ್ದಾರೆ.

Also read: ಈ ಶಾಲೆಯ ಬಿಸಿ ಊಟಕ್ಕೆ ಮಕ್ಕಳ ಪೋಷಕರೇ ಬೆಳೆದ ಕೃಷಿ ಉತ್ಪನ್ನದಿಂದ ಮಕ್ಕಳ ಅಮ್ಮಂದಿರು ಅಡುಗೆ ತಯಾರಿಸುತ್ತಾರೆ.!

ಕೇರಳದ ಪೊಲೀಸ್‌ ಠಾಣೆಯಲ್ಲಿ ರೈಟರ್‌ ಆಗಿರುವ ಅಪರ್ಣಾ ಅರಿವು ಮೂಡಿಸುವ ತರಗತಿಗಳನ್ನೂ ನಡೆಸುತ್ತಾರೆ. ಈಕೆ ವಿಧವೆಯಾಗಿದ್ದು, ಎರಡು ಹೆಣ್ಣು ಮಕ್ಕಳನ್ನು ಒಬ್ಬರೇ ಸಾಕಿ ಸಲಹುತ್ತಿದ್ದಾರೆ. 2008ರಲ್ಲೇ ಅಪರ್ಣಾ ಕೌಟುಂಬಿಕ ಹಿಂಸಾಚಾರದಿಂದ ಮರಣ ಹೊಂದಿದ ಮಹಿಳೆಯ ಆಸ್ಪತ್ರೆ ಬಿಲ್‌ ನೀಡಲು ನೆರವಾಗಿದ್ದರು. ತನ್ನ ಬಳಿ ಇದ್ದ ಚಿನ್ನದ ಬಳೆಯನ್ನೇ ದಾನ ಮಾಡಿ ಮೃತಪಟ್ಟಿದ್ದ ಮಹಿಳೆಯ ಪುತ್ರನಿಗೂ ಅಪರ್ಣಾ ಸಹಾಯ ಮಾಡಿ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇವರ ಸಹಾಯ ಚಿಕ್ಕದಾದರೂ ಪ್ರತಿಯೊಬ್ಬರೂ ಯೋಚನೆ ಮಾಡಲೇ ಬೇಕಾದ ವಿಷಯವಾಗಿದ್ದು ಭಾರಿ ಮೆಚ್ಚುಗೆಗೆ ಪಡೆದುಕೊಂಡಿದೆ.