ಕ್ಯಾನ್ಸರ್ ಇಲ್ಲದ ಮಹಿಳೆಗೆ ಕೀಮೋಥೆರಪಿ ಚಿಕಿತ್ಸೆ ಮಾಡಿದ ವೈದ್ಯರು, ಮರು ತಪಾಸಣೆಯಲ್ಲಿ ಭಯಲಾಯಿತು ವೈದ್ಯರ ಲ್ಯಾಬ್ ವರದಿಯ ಎಡವಟ್ಟು..

0
372

ವೈದ್ಯರು ಮತ್ತು ಲ್ಯಾಬ್ ನವರು ಮಾಡುವ ಎಡವಟ್ಟಿನಿಂದ ಕಾಯಿಲೆಯಿಲ್ಲದ ಕಾಯಿಲೆಗೆ ಚಿಕಿತ್ಸೆ ನೀಡುವುದು. ಕಾಯಿಲೆ ಇದ್ದ ರೋಗಿಗಳಿಗೆ ಬೇರೆಯದೇ ಚಿಕಿತ್ಸೆ ಮಾಡುವುದು ನಡೆಯಿತ್ತಿದೆ, ಎನ್ನುವ ಬಗ್ಗೆ ಹಲವು ಕಡೆಯಿಂದ ದೂರುಗಳು ಕೇಳಿಬರುತ್ತಿದ್ದವು ಆದರೆ ಈಗ ಅಂತಹದೇ ಒಂದು ಆಶ್ಚರ್ಯ ಘಟನೆ ನಡೆದಿದ್ದು, ಮಹಿಳೆಯೊಬ್ಬರಿಗೆ ಕ್ಯಾನ್ಸರ್ ಇದೆ ಎಂದು ಕೀಮೋಥೆರಪಿ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.

Also read: ಕ್ಯಾನ್ಸರ್-ನಂತಹ ಮಾರಕ ಖಾಯಿಲೆಗಳಿಗೆ ನಮ್ಮ ಶಿವಮೊಗ್ಗದ ವೈದ್ಯರು ದಿವ್ಯಔಷಧ ನೀಡುತ್ತಾರೆ!!

ಹೌದು ಕೇರಳದ ಆಲಪ್ಪುಳ ನಲ್ಲಿ ನಡೆದ ಘಟನೆ ಇಡಿ ದೇಶವನ್ನೇ ಬೆಚ್ಚಿಬಿಳಿಸಿದ್ದು ಕ್ಯಾನ್ಸರ್ ರೋಗಿಗಳು ತಮಗೆ ಕಾಯಿಲೆ ಇರುವುದು ಅನುಮಾನ ಎನ್ನುವ ಹಾಗೆ ಮಾಡಿದೆ. ಕೇರಳದಲ್ಲಿ ಆಲಪ್ಪುಳ ಜಿಲ್ಲೆಯ 30ರ ಅಸುಪಾಸಿನ ವಯಸ್ಸಿನ ರಜನಿ ಟ್ಯೂಮರ್ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿದ್ದರು. ಬಯಾಪ್ಸಿಯ ನಂತರ ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ನಡೆಸಿದಾಗ ಆಕೆಗೆ ಕ್ಯಾನ್ಸರ್ ಇದೆಯೆಂಬ ವರದಿ ಬಂದಿತ್ತು. ಈ ವರದಿಯ ಆಧಾರದಲ್ಲಿ ಮೆಡಿಕಲ್ ಕಾಲೇಜು, ಕೊಟ್ಟಾಯಂನಲ್ಲಿ ಕೀಮೋಥೆರಪಿ ಚಿಕಿತ್ಸೆ ಆರಂಭಿಸಲಾಗಿತ್ತು.
ಮೊದಲನೇ ಕೀಮೋಥೆರಪಿ ಮುಕ್ತಾಯಗೊಂಡ ಕೂಡಲೇ ಮಹಿಳೆ ತನ್ನೆಲ್ಲಾ ಕೂದಲು ಕಳೆದುಕೊಂಡಾಗ ವೈದ್ಯರು ಆಕೆಯ ಬಯಾಪ್ಸಿ ಸ್ಯಾಂಪಲ್ ಅನ್ನು ಆಸ್ಪತ್ರೆಯ ಲ್ಯಾಬ್ ಹಾಗೂ ರಾಜ್ಯದ ಅತ್ಯುನ್ನತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾದ ರೀಜನ್ ಕ್ಯಾನ್ಸರ್ ಸೆಂಟರ್, ತಿರುವನಂತಪುರಂ ಇಲ್ಲಿಗೆ ಕಳಿಸಿದ್ದರು. ಆದರೆ ಎರಡೂ ವರದಿಗಳು ನೆಗೆಟಿವ್ ಆಗಿದ್ದವು. ಇದನ್ನು ತಿಳಿದ ರೋಗಿ ಮತ್ತು ಸಂಬಂಧಿಕರು ಬೆಚ್ಚಿ ಬಿದ್ದಿದ್ದಾರೆ. ಇದು ಅನುಮಾನ ಮೂಡಲು ಮೊದಲನೇ ಕೀಮೋಥೆರಪಿ ಚಿಕಿತ್ಸೆ ಪಡೆದ ಕೂಡಲೇ ಮಹಿಳೆ ರಜನಿಯವರ ಎಲ್ಲಾ ಕೂದಲೂ ಉದುರಿದ್ದು ಮತ್ತೆ ತಪಾಸಣೆಗೆ ದಾರಿ ಮಾಡಿಕೊಟ್ಟಿದ್ದೆ. ಅದರಂತೆ ನಂತರ ವೈದ್ಯರು ತಪಾಸಣೆ ನಡೆಸಿದಾಗ ಆಕೆಗೆ ವಾಸ್ತವವಾಗಿ ಕ್ಯಾನ್ಸರ್ ಇಲ್ಲ ಎಂದು ತಿಳಿದು ಬಂದಿತ್ತು.

Also read: ಎರಡೂ ಕಾಲುಗಳನ್ನು ಕಳೆದುಕೊಂಡ ಕಂದಮ್ಮಗೆ ಮರುಜೋಡನೆ ಮಾಡಿ ಪವಾಡವನ್ನೇ ಮಾಡಿದ ಕರ್ನಾಟಕದ ವೈದ್ಯರು..

ಇದನ್ನರಿತ ಮಹಿಳೆ ಆರೋಗ್ಯ ಸಚಿವೆಗೆ ದೂರು ನೀಡಿದ್ದಾರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ಕೊಟ್ಟಾಯಂ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಜೋಸ್ ಜೋಸೆಫ್ ಅವರಿಗೆ ಈ ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಸೂಚಿಸಿದ್ದಾರೆ. ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸದ್ಯದಲ್ಲಿಯೇ ಪ್ರೊಟೋಕಾಲ್ ಜಾರಿಗೊಳಿಸಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ. ವಿವಾದ ಬೆಳಕಿಗೆ ಬರುತ್ತಿದ್ದಂತೆಯೇ ರಜನಿಯವರ ಬಯಾಪ್ಸಿ ಮಾದರಿಯ ಪರೀಕ್ಷೆಯನ್ನು ಮೊದಲು ನಡೆಸಿದ್ದ ಲ್ಯಾಬ್ ತನ್ನ ಈ ತಪ್ಪಿನಿಂದ ಪಾರಾಗಲು ಪ್ರಯತ್ನಿಸಿದೆ ಎಂದು ಎಂದು ಮಹಿಳೆ ಮಾದ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Also read: ಪ್ರಧಾನಮಂತ್ರಿ ನ್ಯಾಷನಲ್‌ ಡಯಾಲಿಸಿಸ್‌ ಯೋಜನೆಯ ಅಡಿಯಲ್ಲಿ ಇನ್ಮುಂದೆ ಕಿಡ್ನಿ ರೋಗಿಗಳಿಗೆ ಮನೆಯಲ್ಲೇ ಡಯಾಲಿಸಿಸ್..

ಇರದ ಕಾಯಿಲೆಗೆ ಆರೋಗ್ಯವನ್ನು ಹಾಳು ಮಾಡಿಕೊಂಡ ಮಹಿಳೆಯ ಬಗ್ಗೆ ಯೋಚನೆಯನ್ನು ಮಾಡದೆ ತಪ್ಪು ಯಾರು ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಅಲ್ಲಿನ ಅಧಿಕಾರಿ ಮಂಡಳಿ ವರ್ತನೆ ಮಾಡುತ್ತಿದ್ದು ವೈದ್ಯರು ಲ್ಯಾಬ್ ವರದಿಯ ಆಧಾರದಲ್ಲಿ ಚಿಕಿತ್ಸೆ ಆರಂಭಿಸಿದ್ದರಿಂದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಾಗದು ಎಂದು ಮೆಡಿಕಲ್ ಕಾಲೇಜು ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ ಜಯಕುಮಾರ್ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದೆ ರೀತಿಯಲ್ಲಿ ಎಷ್ಟೊಂದು ಜನರಿಗೆ ಮೋಸವಾಗಿದೆ ಎನ್ನುವುದು ಪತ್ತೆಹಚ್ಚಬೇಕಿದೆ ಎಂದು ಮಹಿಳೆಯ ಸಂಬಂಧಿಕರು ಅರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದಾರೆ.