ಕಾಶ್ಮೀರ ಕೇಸರಿಯ ಆರೋಗ್ಯಕಾರಿ ಗುಣಗಳು

0
1093

ಕೇಸರಿಯನ್ನು (10 ದಂಟು) ಮತ್ತು ತುಳಸಿ ಎಲೆಗಳು (6-7 ಎಲೆಗಳು) ಪೇಸ್ಟ್ ಮಾಡಿ. 10 ನಿಮಿಷಗಳ ನಂತರ ನಿಮ್ಮ ಮುಖದ ಮೇಲೆ ಹಚ್ಚಿ ನಂತರ ತೊಳೆಯುವುದು ಇದು ಮೊಡವೆ, ಕಲೆ, ಗುಳ್ಳೆ, ಸುಕ್ಕುಗಳು ಮತ್ತು ಮುಖದ ಇತರ ಕಪ್ಪು ಕಲೆಗಳ ನಿವಾರಣೆಗೆ ಒಳ್ಳೆಯದು.

ಕೇಸರ ಆಂಟಿ ಆಕ್ಸಿಡೆಂಟ್ ಆಗಿ: ರೋಗಗಳ ನಿವಾರಣೆಗೆ ಆಂಟಿ ಆಕ್ಸಿಡೆಂಟ್ ಆಗಿ ಮತ್ತು ಆರೋಗ್ಯ ವೃದ್ಧಿಸಲು ಪ್ರಯೋಜನಕಾರಿ.

ಕೇಸರಿ ಹೃದಯದ ಬಡಿತ ನಿಯಂತ್ರಿಸುತ್ತದೆ: ಕೇಸರಿಯಲ್ಲಿರುವ ಪೊಟ್ಯಾಸಿಯಮ್ ಅತಿಯಾದ ಹೃದಯ ಬಡಿತವನ್ನು ನಿಧಾನವಾಗಿಸಿ ಹೃದಯವನ್ನು ನಿಯಂತ್ರಿಸುವಲ್ಲಿ ಒಳ್ಳೆಯದು.

ರಕ್ತದೊತ್ತಡ ನಿಯಂತ್ರಿಸುತ್ತದೆ: ಕಾಪರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಕಬ್ಬಿಣ, ಮೆಗ್ನೀಷಿಯಂ, ಸತು ಮತ್ತು ಸೆಲೆನಿಯಮ್ ಅನೇಕ ಖನಿಜಗಳನ್ನು ಒಳಗೊಂಡಿದೆ.ಇವು ರಕ್ತದೊತ್ತಡದ ನಿಯಂತ್ರಣದಲ್ಲಿ ಹಾಗೂ ಹಿಮೋಗ್ಲೋಬಿನ್ ರಚನೆಗೆ ಸಹಾಯಕವಾಗಿವೆ.

ಕ್ಯಾನ್ಸರ್ ತಡೆಗಟ್ಟಲು ಕೇಸರಿ: ಕೇಸರಿ ಜಿಯಾ-ಕ್ಸಾನತಿನ್, ಲೈಕೊಪೆನ್, α- ಮತ್ತು β- ಕ್ಯಾರೋಟಿನ್ ಜೈವಿಕ ರಾಸಾಯನಿಕ ಸಂಯುಕ್ತಗಳನ್ನು ಹೊಂದಿವೆ, ಈ ಎಲ್ಲಾ ರೋಗ ನಿರೋಧಕ ಅಂಶಗಳು ಕ್ಯಾನ್ಸರ್ ನಿಂದ ಮಾನವ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಕೇಸರಿಯು ಒತ್ತಡ ಕಡಿಮೆ ಮಾಡುತ್ತದೆ: ಕ್ಯಾರಾಟೇನಾಯ್ಡ್ ಆಕ್ಸಿಡಿಕರಣವನ್ನು ಉತ್ತೇಜಿಸಿ ದೇಹದ ಒತ್ತಡ ಕಡಿಮೆ ಮಾಡುತ್ತದೆ.

ಕೂದಲು ಉದುರುವಿಕುವೆಗೆ: ಕೂದಲು ಉದುರುವಿಕುವೆಗೆ ನೆತ್ತಿ ಮೇಲೆ ಕೇಸರಿ, ಹಾಲು ಮತ್ತು ಲೈಕೋರೈಸ್ ಮಿಶ್ರಣವನ್ನು ತಲೆ ಮೇಲೆ ಹಚ್ಚಿಕೊಂಡರೆ ಕೂದಲು ಬೆಳವಣಿಗೆಗೆ ಒಳ್ಳೆಯದು

ಹೊಳೆಯುವ ಚರ್ಮಕ್ಕಾಗಿ: ಕೇಸರಿ 4-5 ಎಳೆಗಳನ್ನು ತೆಗೆದುಕೊಂಡು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಮುಖದ ಮೇಲೆ ಈ ಮಿಶ್ರಣವನ್ನು ನಿಧಾನವಾಗಿ ಮಸಾಜ್ ಮಾಡಿ 5 ನಿಮಿಷಗಳ ನಂತರ ತೊಳೆಯಿರಿ. ಈ ಪ್ರಕ್ರಿಯೆ ಒಂದು ವಾರಕ್ಕೆ ಮೂರು ಬಾರಿ ಮಾಡಿದರೆ ಚರ್ಮ ಹೊಳೆಯುತ್ತದೆ.

ಶೀತದ ಸಮಸ್ಯೆಗೆ: ಕೇಸರಿ (0.5 ಗ್ರಾಂ ನಿಂದ 1 ಗ್ರಾಂ) ಬೆಚ್ಚಗಿನ ನೀರಿಗೆ ಸೇರಿಸಿ ಕುಡಿಯುವುದರಿಂದ ಕೆಮ್ಮು ಮತ್ತು ಶೀತದ ಪರಿಹಾರ ಮಾಡಲು ಸಹಾಯಕವಾಗುತ್ತದೆ.