ಕಾಂಗ್ರೆಸ್ ಪಕ್ಷ ಸೇನೆಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಸೋನಿಯಾ ಆಪ್ತ ಟಾಮ್ ವಡಕ್ಕನ್ ಬಿ.ಜೆ.ಪಿ. ಸೇರಿದ್ದಾರೆ; ಇವರ ಈ ನಡೆಯನ್ನು ಒಪ್ಪುತ್ತೀರಾ??

0
315

ದೇಶದಲ್ಲಿ ಲೋಕಸಭಾ ಚುನಾವಣೆ ಬರದಿಂದ ನಡೆಯುತ್ತಿರುವ ಬೆನ್ನೆಲೆಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಆಘಾತವಾಗಿದೆ. ಪಕ್ಷದ ಹಿರಿಯ ಮತ್ತು ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದ ಟಾಮ್ ವಡಕ್ಕನ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಮಡಿಲಿಗೆ ಸೇರಿದ್ದಾರೆ. ಇದರಿಂದ ಕಾಂಗ್ರೆಸ್-ಗೆ ತ್ರಿವ್ರ ಹೊಡೆತವಾಗಿದೆ. ಏಕೆಂದರೆ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಮೀಡಿಯಾ ಟೀಮ್ ಕಟ್ಟಿ ಅವರಿಗೆ ನೆರವಾಗಿದ್ದ ಟಾಮ್ ಈಗ ಬಿಜೆಪಿಗೆ ಬೈ ಹೇಳಿದ್ದು ಸಂಕಷ್ಟಕ್ಕೆ ಸಿಲುಕಿದೆ.

Also read: ಮಂಡ್ಯದ ಜನರಿಗಾಗಿ ಎರಡನೇ ಜನ್ಮ ಎತ್ತಿ ಬಂದಿದ್ದೇನೆ : ಎಚ್.ಡಿ.ಕೆ.; ಇಂತಹ ಸಿನಿಮೀಯ ಮಾತುಗಳಿಂದ ಮಂಡ್ಯದಲ್ಲಿ ಎಚ್.ಡಿ.ಕೆ. ಮಗ ನಿಖಿಲ್ ಗೆಲ್ಲುವುದು ಸಾಧ್ಯಾನಾ??

ಹೌದು ಸಚಿವ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ವಡಕ್ಕನ್ ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್-ನಲ್ಲಿ ವಂಶಾಡಳಿತದ್ದೇ ಪ್ರಾಬಲ್ಯವಿದೆ ‘ನನ್ನ ಜೀವನದ 20 ವರ್ಷ ಕಾಂಗ್ರೆಸ್​ಗಾಗಿ ನೀಡಿದ್ದೇನೆ. ಆದರೆ, ಅಲ್ಲಿ ಯೂಸ್ ಆಂಡ್ ಥ್ರೋ ಪಾಲಿಸಿ ಇದ್ದು, ವಂಶಾಡಳಿತವೇ ಆವರಿಸಿಕೊಂಡಿದೆ. ವಂಶಾಡಳಿತದಿಂದ ಬೇಸತ್ತು ಹೋಗಿದ್ದೆ. ನನ್ನ ಮುಂದೆ ಆಯ್ಕೆಗಳೇ ಇರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ’ ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರನ್ನು ಬಳಸಿಕೊಂಡು, ಬೇಡವಾದಾಗ ಕೈಬಿಡಲಾಗುತ್ತಿದೆ. ಎಂದು ಗಂಭೀರವಾಗಿ ಆರೋಪಿಸಿದ ಅವರು ಪಾಕಿಸ್ತಾನದ ಬಾಲಕೋಟ್ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯು ಪಡೆ ನಡೆಸಿದ ಏರ್ ಸ್ಟ್ರೈಕ್ ಹಾಗೂ ದೇಶದ ಸಶಸ್ತ್ರ ಪಡೆಯಗಳ ಕುರಿತು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಒಂದು ರಾಜಕೀಯ ಪಕ್ಷವೇ ದೇಶದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಹೀಗಾಗಿ ನಾನು ಪಕ್ಷವನ್ನು ತ್ಯಜಿಸುವುದು ಅನಿವಾರ್ಯವಾಯಿತು ಎಂದು ಟಾಮ್ ವಡಕ್ಕನ್ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾಂಗ್ರೆಸ್-ಗೆ ಮತ್ತೊಂದು ಶಾಸಕ ಬೈ;

Also read: ಈ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ: ಮಾಜಿ ಪ್ರಧಾನಿ ದೇವೇಗೌಡ; ಇದರಿಂದ ಜನರಿಗೆ ಲಾಭವೋ ನಷ್ಟವೋ??

ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಕಳೆದ ನಾಲ್ಕು ಅವಧಿಯಿಂದ ಪಶ್ಚಿಮ ಬಂಗಾಳ ಶಾಸಕರಾಗಿರುವ ಅರ್ಜುನ್ ಸಿಂಗ್ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯೇಂದ್ರ ಮತ್ತು ಪ.ಬಂಗಾಳ ಬಿಜೆಪಿ ನಾಯಕ ಮುಕುಲ್ ರಾಯ್ ಸಿಂಗ್​ರನ್ನು ಬರಮಾಡಿಕೊಂಡರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರ್ಜುನ್ ಸಿಂಗ್, ‘ನಾನು 30 ವರ್ಷ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರಿಗೆ ನೀಡಿದೆ. ಆದರೆ, ಪುಲ್ವಾಮಾ ದಾಳಿಯ ಬಳಿಕ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಯಿಂದ ತುಂಬ ಬೇಸರವಾಯಿತು. ಅಷ್ಟೇ ಅಲ್ಲ, ಅವರ ಮಾತು ದೇಶವನ್ನೇ ಅಲುಗಾಡಿಸಿತು.

ಭಾರತೀಯ ವೀರಯೋಧರು ಉಗ್ರಶಿಬಿರಗಳನ್ನು ಧ್ವಂಸಗೊಳಿಸಿದರೆ ಮಮತಾ ಶವಗಳ ಲೆಕ್ಕ ಕೇಳಿದರು. ರಾಷ್ಟ್ರೀಯ ಹಿತಾಸಕ್ತಿಯನ್ನೇ ಗಮನಿಸದೆ ಇರುವವರು ತಮ್ಮ ಮತದಾರರ ಹಿತಕ್ಕೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಹರಿಹಾಯ್ದರು. ಮೊದಲು, ‘ಮಾ, ಮಾತಿ, ಮನುಷ್ಯ’ ಬಗ್ಗೆ ಚಿಂತನೆ ನಡೆಸುತ್ತಿದ್ದ ಟಿಎಂಸಿಯಲ್ಲಿ ಈಗ ಕೇವಲ ದುಡ್ಡು’ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸಿಂಗ್ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದು, ಟಿಎಂಸಿ ನಾಯಕ ದಿನೇಶ್ ತ್ರಿವೇದಿ ವಿರುದ್ಧ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಮುಂಚೆಯೇ ಟಿಎಂಸಿಯ ಉಚ್ಚಾಟಿತ ಸಂಸದ ಅನುಪಮ್ ಹಜಾರಾ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Also read: ತರಾತುರಿಯಲ್ಲಿ ಟೆಂಡರ್ ಕರೆದ ಕುಮಾರಸ್ವಾಮಿ ನೇತೃತ್ವದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಕಾಮಗಾರಿಗೆ ಹೈಕೋರ್ಟ್ ತಡೆ..

ಚುನಾವಣೆ ಹತ್ತಿರವಾಗುತ್ತಿದಂತೆ ಒಬ್ಬಬ್ಬರಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವುದು ದೇಶದ ರಾಜಕೀಯದಲ್ಲಿ ಮತ್ತಷ್ಟು ಮುಜುಗರಕ್ಕೆ ಎಡೆಮಾಡಿಕೊಂಡಿದೆ. ಇನ್ನು ಚುನಾವಣೆಗೆ ತಿಂಗಳು ಬಾಕಿ ಇರುವ ಕಾರಣ ಯಾವ ರೀತಿಯ ಬೆಳವಣಿಗೆಗಳು ಆಗುತ್ತೆ ಎಂದು ಕಾದು ನೋಡಬೇಕಿದೆ.